ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಮೊಟಿಕಾನ್ಸ್ ಎಂದರೇನು?

Last Updated 11 ಮೇ 2017, 19:30 IST
ಅಕ್ಷರ ಗಾತ್ರ

ಭಾವನೆಗಳನ್ನು ಎಲ್ಲರಿಗೂ ಅರ್ಥವಾಗುವ ಹಾಗೇ ತಿಳಿಸಲು ಇರುವ ಏಕೈಕ ಭಾಷೆ ‘ಎಮೊಟಿಕಾನ್ಸ್’. ಎಮೊಜಿಗಳ ಹುಟ್ಟಿಗೂ ಇವೇ ಕಾರಣ. ‘ಸ್ಮೈಲಿ’ಗಳು ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಸ್ಮಾರ್ಟ್‌ಫೊನ್‌ ಬಳಕೆದಾರರು ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟ್ಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳುಹಿಸಲು ಇವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.

ಪ್ರೀತಿ, ಕೋಪ, ಕರುಣೆ, ಸಂತೋಷ, ಆಶ್ಚರ್ಯ, ದುಃಖ ಹೀಗೆ ಭಾವನೆಗಳನ್ನು ಎಮೊಟಿಕಾನ್‌ಗಳ ಮೂಲಕ ವ್ಯಕ್ತಪಡಿಸಬಹುದು. ಆಂಗ್ಲ ಭಾಷೆಯ ‘ಎಮೋಶನ್’ ಮತ್ತು ‘ಐಕಾನ್‌’ ಪದಗಳ ಸಂಯೋಗವೇ ಎಮೊಟಿಕಾನ್.

ಕಂಪ್ಯೂಟರ್‌ ಕೀಲಿಮಣೆಯ ಕೆಲವು ವಿಶೇಷ ಸಂಕೇತಾಕ್ಷರಗಳನ್ನು ಬಳಸಿ  ರಚಿಸಲಾಗಿದೆ. 1963ರಲ್ಲಿ ಹಾರ್ವೆ ಬಾಲ್ ಎಂಬ ಚಿತ್ರಕಲಾವಿದ ಮೊದಲ ಬಾರಿಗೆ ಸ್ಮೈಲಿ ಫೇಸ್‌ ಅನ್ನು  ಚಿತ್ರಿಸಿದ. 1982ರಲ್ಲಿ ಸ್ಕಾಟ್‌ ಇಲಿಯಟ್ ಫಾಲ್ಮನ್ ಎಂಬ ಕಂಪ್ಯೂಟರ್ ತಂತ್ರಜ್ಞ ಎಮೊಟಿಕಾನ್‌ಗಳನ್ನು ಪರಿಚಯಿಸಿದ.

ನಂತರ ಜಪಾನ್, ಚೀನಾ, ಕೊರಿಯಾ ಮತ್ತು ಕೆಲವು ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಭಾಷೆಗೆ ಅನುಗುಣವಾಗಿ ಹಲವು ಬಗೆಯ ಮುಖಭಾವಗಳೊಂದಿಗೆ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವಂತೆ ಇವುಗಳನ್ನು ತಯಾರಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT