ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗಳ ದಾಹ ನೀಗಿಸಲು ಸೋಲಾರ್ ಶಕ್ತಿಗೆ ಮೊರೆ

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಅಳವಡಿಕೆ
Last Updated 12 ಮೇ 2017, 9:42 IST
ಅಕ್ಷರ ಗಾತ್ರ
ಗುಂಡ್ಲುಪೇಟೆ:  ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಪೂರೈಸಿ, ದಾಹ ನೀಗಿಸಲು ಸೋಲಾರ್ ಶಲ್ತೊ ಆಧಾರಿತ ಪಂಪ್‌ಸೆಟ್‌ಗಳು ಸಂಜೀವಿನಿಗಳಾಗಿವೆ.
 
ಮಳೆಯ ಕೊರತೆಯಿಂದ ಬಂಡೀಪುರ ಕಾಡಿನಲ್ಲಿರುವ 400ಕ್ಕೂ ಹೆಚ್ಚಿನ ಕೆರೆಗಳಲ್ಲಿ ನೀರು ಬತ್ತಿ, ಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ  ತೊಂದರೆಯಾಗಿತ್ತು.
ಇದನ್ನು ಮನಗಂಡ ಅರಣ್ಯ ಇಲಾಖೆಯು ಖಾಸಗಿ ಸಂಸ್ಥೆ, ಮತ್ತು ದಾನಿಗಳ ನೆರವು ಪಡೆದು  ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಸೌರಶಕ್ತಿ ಚಾಲಿತ ಮೋಟಾರ್ ಅಳವಡಿಸುವ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಕೈಗೊಂಡಿದೆ.
 
ಬಂಡೀಪುರ ವಲಯದಲ್ಲಿ ಕೆಲವು ದಿನಗಳಲ್ಲಿ ಮಳೆಯಾಗಿದ್ದು, ಭಾಗಶಃ ಕೆರೆಗಳು ತುಂಬಿವೆ.  ಓಂಕಾರ್ ವಲಯದ ಸೌತ್ ಕೆರೆ, ತಾರಮರದಕಟ್ಟೆ, ತವಳನೆರೆಹೊಸಕೆರೆ ವ್ಯಾಪ್ತಿಯಲ್ಲಿ ಕೊಳವೆ ಬಾವಿಯನ್ನು ಕೊರೆಯಿಸಲಾಗಿದೆ.
 
ಇಲ್ಲಿಂದ ಸೌರಶಕ್ತಿ ಮೋಟಾರು ಮೂಲಕ ಕೆರೆಗೆ ನೀರು ತುಂಬಿಸಲು ಚಾಲನೆ ನೀಡಲಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ  ನೀರಿನ ಕೊರತೆಯುಂಟಾಗಿ ಆನೆ, ಹುಲಿ, ಜಿಂಕೆ, ಕಡವೆ, ಕಾಟಿ, ಕಡವೆ, ಹಂದಿಗಳು ನೀರಿಗಾಗಿ ವಲಸೆ ಹೋಗುತ್ತವೆ.
 
ನೀರು ಅರಸಿ ಆನೆಗಳ ಹಿಂಡು ಹತ್ತಿರದ ಮಗುವಿನಹಳ್ಳಿ, ಮಂಗಲ, ಯಲಚೆಟ್ಟಿ, ಮೇಲುಕಾಮನಹಳ್ಳಿ, ಕಣಿಯನಪುರ ಗ್ರಾಮಗಳ ಜಮೀನುಗಳಿಗೆ ದಾಳಿ ಮಾಡಿದ ನಿದರ್ಶನವೂ ಇತ್ತು.
 
ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರುತ್ತಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಪ್ರಾಣಿಗಳಿಗೆ ಕಾಡಿನಲ್ಲಿಯೇ ನೀರನ್ನು ಒದಗಿಸಲು ಈ ಕ್ರಮಕ್ಕೆ ಮುಂದಾಗಿದ್ದಾರೆ.
 
ಸೌತ್‌ಕೆರೆ ಬಳಿ ವರ್ಲ್ಡ್ ವೈಲ್ಡ್ ಲೈಫ್ ಫೌಂಡೇಶನ್ ಸಂಸ್ಥೆಯು ಸೌರ ವಿದ್ಯುತ್ ಫಲಕ ಹಾಗೂ ಮೋಟಾರು ಒದಗಿಸಿ ₹ 8.5 ಲಕ್ಷ ವೆಚ್ಚದಲ್ಲಿ ಯೋಜನೆ ರೂಪಿಸಿತ್ತು. 800 ಅಡಿ ಆಳದ ಕೊಳವೆಬಾವಿ ಕೊರೆಯಿಸಿ, 300ವರೆಗೆ ಪೈಪ್ ಅಳವಡಿಸಲಾಗಿದೆ.
 
18 ಸೌರ ಫಲಕಗಳು ತ್ರೀಫೇಸ್ ವಿದ್ಯುತ್ ಲಭ್ಯತೆ ಇದೆ. 5 ಸೌರಶಕ್ತಿಯ ಮೋಟಾರು ಅಳವಡಿಸಿದ್ದು ಬೇಸಿಗೆಯಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸಿ ನೀರು ಎತ್ತಲಿದೆ.
 
ತಾರಮರಕಟ್ಟೆ ಬಳಿ ಅರಣ್ಯ ಇಲಾಖೆ ₹ 7 ಲಕ್ಷ ಅನುದಾನದಿಂದ ನಿರ್ಮಿಸಲಾಗಿದೆ. ತವಳನೆರೆಹೊಸಕೆರೆ ಬಳಿ ವೈದ್ಯರೊಬ್ಬರು ₹ 7 ಲಕ್ಷದ ವೆಚ್ಚದಲ್ಲಿ ಉಚಿತವಾಗಿ ಕೊಳವೆಬಾವಿ ಕೊರೆಯಿಸಿ ಸೋಲಾರ್‌ ಶಕ್ತಿ ಮೂಲಕ ನೀರು ಒದಗಿಸಲು ನೆರವಾಗಿದ್ದಾರೆ.
 
‘ಬಂಡೀಪುರ ವ್ಯಾಪ್ತಿಯಲ್ಲಿ 8ಕ್ಕೂ ಹೆಚ್ಚಿನ ಸೌರ ಪಂಪ್‌ಸೆಟ್‌ ಆಳವಡಿಕೆಯಾಗಿವೆ. ಕೆರೆಗೆ ನೀರು ತುಂಬಿಸಿದಲ್ಲಿ ಪ್ರಾಣಿಗಳಿಗೆ ನೆರವಾಗುವ ಜತೆಗೆ ಕಾಳ್ಗಿಚ್ಚು ಸಂದರ್ಭ ಇಲಾಖೆಗೂ ಸಹಕಾರಿ’ ಎಂದು ಅರಣ್ಯಾಧಿಕಾರಿಯೊಬ್ಬರು ಅಭಿಪ್ರಾಯ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT