ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿಗೊಂದು ವರ್ಕ್‌ಶೆಡ್‌ ಸೌಲಭ್ಯ: ಡಾ.ರವಿ

ನವ ಸಾಕ್ಷರರ ತರಬೇತಿ ಮತ್ತು ಉತ್ಪಾದನಾ ಕೇಂದ್ರ
Last Updated 12 ಮೇ 2017, 10:51 IST
ಅಕ್ಷರ ಗಾತ್ರ
ಮುಡಿಪು: ವೃತ್ತಿ ತರಬೇತಿ ಪಡೆದ ನವ ಸಾಕ್ಷರರ ದಿನ ಬಳಕೆ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅನೂ ಕೂಲಕ್ಕಾಗಿ ಪಂಚಾಯತಿಗೊಂದರಂತೆ ವರ್ಕ್‌ಶೆಡ್‌ಗಳನ್ನು ಆದ್ಯತೆಯಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ. ಆರ್‌.ರವಿ ಹೇಳಿದರು.
 
ಮುಡಿಪು ಜನ ಶಿಕ್ಷಣ ಕೇಂದ್ರದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ, ಜನಶಿಕ್ಷಣ ಟ್ರಸ್ಟ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮಪಂಚಾಯಿತಿಗಳ ಸಹಯೋಗದಲ್ಲಿ ಬುಧವಾರ ನಡೆದ ನವ ಸಾಕ್ಷರರ ವೃತ್ತಿ ತರಬೇತಿ ಸಮಾರೋಪ ಜೀವನ ಶಿಕ್ಷಣ ಸಮೃದ್ಧಿ ಕಾರ್ಯಾಗಾರ ಮತ್ತು ಸಾಂತ್ವನ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಮನಸ್ಸು ಮುರಿಯುವ ಕೆಲಸ ಜಾಸ್ತಿಯಾಗುತ್ತಿರುವ ಈ ಕಾಲದಲ್ಲಿ ಮನಸ್ಸು ಕಟ್ಟುವ ಪ್ರೀತಿ ಹಚ್ಚುವ ಕೆಲಸವನ್ನು ಜನ ಶಿಕ್ಷಣ ಟ್ರಸ್ಟ್‌ ನಗ್ರಾಮ ವಿಕಾಸ ಕೇಂದ್ರ ಮಾಡುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದರು.
 
ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಾ ಗಾರ ಹಾಗೂ ಸಾಂತ್ವನ ಕೇಂದ್ರ ಉದ್ಘಾಟಿಸಿ ಮಾತನಾಡಿ,  ಸಾಕ್ಷರತೆ, ಸ್ವಚ್ಚತೆ ಅಭಿಯಾನ, ಉದ್ಯೋಗ ಖಾತರಿ ಯೋಜನೆಗಳೆಂಬ ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಬಡ ಜನರಲ್ಲಿ ಅರಿವಿನ ಅಲೆ, ಪ್ರಗತಿಯ ಬಯಕೆ, ಸೃಷ್ಟಿಯಾಗಿ ಅಭಿವೃದ್ಧಿಯೊಂದಿಗೆ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಗುರಿ ಸಾಧನೆಗೆ ಶೋಷಿತ ಜನರು ಶ್ರಮಿಸಲು ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದರು.
 
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಹೈದರ್, ಬಾಳೆಪುಣಿ ಪಂಚಾ ಯಿತಿ ಅಧ್ಯಕ್ಷೆ ಲೀಲಾವತಿ ಇದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಂದರ ಪೂಜಾರಿ ಸಾಂತ್ವನ ಕೇಂದ್ರದ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.
 
ತ್ಯಾಜ್ಯ ಮುಕ್ತ ಸ್ವಚ್ಚ ಮನೆ, ಜಲ ಸಾಕ್ಷರತೆ, ಸೌರ ಶಕ್ತಿ ಬಳಕೆ, ಮಹಾತ್ಮ ಗಾಂಧಿ ನರೇಗಾ, ಮಾದರಿ ಗ್ರಾಮ ವಿಕಾಸ ಕೇಂದ್ರಗಳ ಸಾಧನೆ ಮುಂದಿನ ಯೋಜನೆ ಕುರಿತು ನಡೆದ ಸಂವಾದ ಚರ್ಚೆಯನ್ನು ಮಹಾತ್ಮಗಾಂಧಿ ನರೇಗಾ ಮಾಜಿ ಓಂಬಡ್ಸ್ ಮನ್‌ ಶೀನಶೆಟ್ಟಿ ನಿರ್ವಹಿಸಿದರು.
 
ಸ್ವಚ್ಚತಾ ಸಾಧಕಿ ಪ್ರೇಮಾ, ನರೇಗಾ ಸಾಧಕ, ಮಧ್ಯ ಮುಕ್ತ ಸರ್ವಶಕ್ತ ಮುಂಗುಲಿ ಕೊರಗ, ಪೇರಕಿ ಯರಾದ ಅರುಣಾ, ಪಾಂತುಞ, ಜಯ, ಅಬ್ದುಲ್ ರಹಿಮಾನ್, ಮೋಹಿನಿ, ಯಶೋಧ, ಸುನೀತಾ, ಶಶಿಕಲಾ ಅನುಭ ವವನ್ನು ಹಂಚಿಕೊಂಡರು.
 
ಶಿಸು ಅಭಿವೃದ್ಧಿ ಯೋಜನಾಧಿಕಾರಿ ಗಳಾದ ಮಲ್ಲಿಕಾ, ಸುಧಾ ಜೋಷಿ, ನರಿಂಗಾನದ ಅಧ್ಯಕ್ಷ ಇಸ್ಮಾಯಿಲ್, ಉಪಾಧ್ಯಕ್ಷ್ಷೆ ನಳಿನಾಕ್ಷಿ, ಸಾಲೆತ್ತೂರು ಅಧ್ಯಕ್ಷೆ ಚಂದ್ರಾವತಿ, ಕೊಣಾಜೆ ಉಪಾ ಧ್ಯಕ್ಷೆ ಲಲಿತಾ ಎಸ್.ರಾವ್, ಮಂಜನಾಡಿ ಉಪಾಧ್ಯಕ್ಷೆ ಮರಿಯಮ್ಮ, ವಿವಿಧ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿ ಗಳು ಉಪಸ್ಥಿತರಿದ್ದರು.
 
ಲೋಕ ಶಿಕ್ಷಣಾಧಿಕಾರಿ ಸುಧಾಕರ್ ಸ್ವಾಗತಿಸಿದರು. ಜನಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ಭಾಗೀರಾಥಿ ರೈ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT