ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಕಚೇರಿಗೆ ಸಾರ್ವಜನಿಕರ ಮುತ್ತಿಗೆ

Last Updated 12 ಮೇ 2017, 11:36 IST
ಅಕ್ಷರ ಗಾತ್ರ
ಅಮೀನಗಡ: ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಪಟ್ಟಣದ ವಿವಿಧ ವಾರ್ಡ್‌ಗಳ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿದರು.
 
ಪಟ್ಟಣದ 5, 10 ಹಾಗೂ 11ನೇ ವಾರ್ಡ್‌ಗಳಲ್ಲಿ ಹಲವು ದಿನಗಳಿಂದ ನೀರು ಪೂರೈಕೆಯಾಗದೆ ತೊಂದರೆಯಾಗಿದೆ.  ನಿವಾಸಿಗಳು ಹಲವು  ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದರು.
 
ಇದಕ್ಕೂ ಮುಂಚೆ ಜನರು ಪಟ್ಟಣದ ಮುಖ್ಯ ಬೀದಿಗಳಲ್ಲಿ ಹಲಗೆ ಬಾರಿಸಿ, ಘೋಷಣೆ ಕೂಗಿದರು. ನಂತರ ಖಾಲಿ ಕೊಡಗಳೊಂದಿಗೆ ಜಮಾಯಿಸಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದರು.
 
ಶುದ್ಧ ಕುಡಿಯುವ ನೀರಿನ ಘಟಕಗಳು ಹೆಸರಿಗೆ ಮಾತ್ರ ಇವೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತಾ ತತ್ರಾಣಿ, ಮುಖ್ಯಾಧಿಕಾರಿ ಸಂಗಮೇಶ ಬಿಂಜವಾಡಗಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಮಾತನಾಡಿ, ಕಮತಗಿಯಲ್ಲಿ ಟಿಸಿ ಸುಟ್ಟಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ.
 
ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ  ಸಾರ್ವಜನಿಕರು ಜಗ್ಗಲಿಲ್ಲ. ಸಾಧ್ಯವಾದಷ್ಟು ನೀರನ್ನು ಕೂಡಲೇ ಪೂರೈಸುತ್ತೇವೆ. ವಾರದೊಳಗೆ ಎಲ್ಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
 
ಪ್ರಮುಖರಾದ ಶಂಕ್ರಪ್ಪ ಸೂಳೆಬಾವಿ, ಈರಣ್ಣ ಗಿರಿಸಾಲಿ, ರಾಘು ಹುನಗುಂದ, ಸಿದ್ದಪ್ಪ ಸಣಕಲ್ಲ, ಅಂಬ್ರೇಶ ಕವಡಿಮಟ್ಟಿ, ಬಸವರಾಜ ಚಾಂದಕೋಟಿ, ಶಂಕ್ರಪ್ಪ ಕವಡಿಮಟ್ಟಿ, ಈರಣ್ಣ ಮಳಗಾವಿ, ಬಸವರಾಜ ಗಂಜಿಹಾಳ, ಶಿವು ಬ್ಯಾಳಿ, ಹಂಜೇಸಾಬ ತೆಗ್ಗಿನಮನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 
ಗ್ರಾ.ಪಂ. ಕಚೇರಿಗೆ ಬೀಗ, ಪ್ರತಿಭಟನೆ 
ಲೋಕಾಪುರ:  ಪೆಟ್ಲೂರ ತಾಂಡಾಕ್ಕೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಹೆಬ್ಬಾಳ ಗ್ರಾ.ಪಂ. ಪಿಡಿಓ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೆಟ್ಲೂರ ತಾಂಡಾ ನಿವಾಸಿಗಳು ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸಿದರು.
 
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜೆಡಿಎಸ್ ಮುಖಂಡ ಶಂಕರ ಲಮಾಣಿ ಮಾತನಾಡಿ, ‘ಸಮಸ್ಯೆ ಕುರಿತು ಮೇಲಧಿಕಾರಿಗಳ ಜೊತೆ ಮಾತನಾಡುತ್ತೆವೆ.  

ಪಿಡಿಓ ಸುಭಾಸ ಗೋಲಶೆಟ್ಟಿ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆ ಎಂಜಿನಿಯರ್‌ ಕೆ.ಜಿ. ಘೋರ್ಪಡೆ ಸಮಸ್ಯೆ ನಿವಾರಣೆಗೆ ಮುಂದಾಗಬೇಕು’ ಎಂದು ಹೇಳಿದರು.  ನಂತರ ಗ್ರಾಮಸ್ಥರು  ಪ್ರತಿಭಟನೆ ಹಿಂಪಡೆದರು.  
 
ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಜೆಡಿಎಸ್‌ ಮುಖಂಡ ಶಂಕರ ನಾಯಕ, ತಾಲ್ಲೂಕು ಪಂಚಾಯಿತಿ ಸದಸ್ಯ ಕರಿಯಪ್ಪ ಅಂಗಡಿ, ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ನಾಯಕ, ಗ್ರಾಮಸ್ಥರಾದ ನಿಂಗರಾಜ ಲಮಾಣಿ, ಗಣೇಶ ಗೌಡರ, ಈಶ್ವರ ಚೌವಾಣ, ರವಿ ಕಾರಬಾರಿ, ಭೀಮಶಿ ರಾಠೋಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT