ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆಗಳ ಈಡೇರಿಕೆ ಭರವಸೆ: ವಿಜಯೋತ್ಸವ

Last Updated 13 ಮೇ 2017, 6:26 IST
ಅಕ್ಷರ ಗಾತ್ರ

ಕವಿತಾಳ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ಅಧಿಕಾರಿಗಳು ಭರವಸೆ ನೀಡಿದ ಕಾರಣ ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ (ಟಿಯುಸಿಐ) ಸಂಘಟನೆ ನೇತೃತ್ವದಲ್ಲಿ ತುಂಗಭದ್ರಾ ಹಂಗಾಮಿ ಕಾರ್ಮಿಕರು ಪಟ್ಟಣದಲ್ಲಿ ಸಂಭ್ರಮಾಚರಣೆ ಮಾಡಿದರು.

ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಆರ್‌ವೈಎಫ್‌ಐ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ, ‘ಶೇ 62ರಷ್ಟು ವೇತನ ಹೆಚ್ಚಳಕ್ಕೆ ಅಧಿಕಾರಿಗಳು ಒಪ್ಪಿಕೊಂಡಿದ್ದು, ಇದು ಹೋರಾಟಕ್ಕೆ ಸಿಕ್ಕ ಜಯ’ ಎಂದರು.

ಜಲ ಸಂಪನ್ಮೂಲ ಕಚೇರಿವರೆಗೆ ಮೆರವಣಿಗೆ ನಡೆಯಿತು. ಮಸ್ಕಿ ಕ್ರಾಸ್‌ನಲ್ಲಿ ಕಾರ್ಮಿಕ ಸಂಘದ ನಾಮಫಲಕಕ್ಕೆ ಮಾಲಾರ್ಪಣೆ ಮಾಡಲಾಯಿತು.ಈ ವೇಳೆ ಕಾರ್ಮಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಆದಿ ನಗನೂರು, ಶರಣಬಸವ, ಬಸವರಾಜ ಬಾಗಲವಾಡ, ಮರಿಯಪ್ಪ, ಕೆ.ಶರಣಪ್ಪ, ರಜಾಕ್‌ಸಾಬ್‌ ಹಾಲಾಪುರ, ಹನುಮಂತ, ಮೆಹಬೂಬ್‌ ಗಣದಿನ್ನಿ, ಮುದುಕಪ್ಪ, ರಾಮಣ್ಣ ತುಗ್ಗಲದಿನ್ನಿ, ಮುನ್ನಾಸಾಬ್, ಹಾಜಿಸಾಬ್, ದೊಡ್ಡಹುಚ್ಚಪ್ಪ, ಹನುಮಂತ ಗುಡಿಹಾಳ, ಎಂ.ಡಿ.ಖಾಜಾಸಾಬ್   ಅವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT