ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧ’

Last Updated 13 ಮೇ 2017, 7:31 IST
ಅಕ್ಷರ ಗಾತ್ರ

ಕುಂದಾಪುರ: ಇಲ್ಲಿಗೆ ಸಮೀಪದ ಕಂಡ್ಲೂರಿನಲ್ಲಿ ನೂತನವಾಗಿ ಪ್ರಾರಂಭಿ ಸಲಾದ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಶುಕ್ರವಾರ ಉದ್ಘಾಟಿಸಿದರು.

ಸಭಾ ವೇದಿಕೆ ಇಲ್ಲದೆ, ಯಾವುದೆ ಅದ್ಧೂರಿ ಕಾರ್ಯಕ್ರಮವಿಲ್ಲದೆ ನೂತನ ಠಾಣೆ ನಾಮಫಲಕವನ್ನು ಅನಾವರಣ ಗೊಳಿಸುವ ಮೂಲಕ ಅತ್ಯಂತ ಸರಳ ವಾಗಿ ಠಾಣೆಯನ್ನು ಲೋಕಾರ್ಪಣೆ ಮಾಡಲಾಯಿತು.

ಜಿಲ್ಲಾ ಎಸ್‌.ಪಿ ಕೆ.ಟಿ ಬಾಲಕೃಷ್ಣ, ಹೆಚ್ಚುವರಿ ಎಸ್‌.ಪಿ ವಿಷ್ಣುವರ್ಧನ್‌, ಡಿವೈಎಸ್‌ಪಿ ಪ್ರವೀಣ್‌ ಎಚ್‌. ನಾಯಕ್‌,  ಇನ್‌ಸ್ಪೆಕ್ಟರ್‌ ಮಂಜಪ್ಪ, ಉಪನಿರೀಕ್ಷಕ ರುಗಳಾದ ನಾಸೀರ್‌ ಹುಸೇನ್‌, ಸುಬ್ಬಣ್ಣ, ಗಜೇಂದ್ರ, ಸುದರ್ಶನ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ನಾಯ್ಕ್‌, ತಾಲ್ಲೂಕು ಪಂಚಾಯಿತಿ ಸದಸ್ಯರುಗ ಳಾದ ರಾಜು. ಎಚ್‌. ದೇವಾಡಿಗ, ಕರಣ್‌ ಪೂಜಾರಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದೇವಾನಂದ ಶೆಟ್ಟಿ, ಮಾಜಿ ತಾ.ಪಂ ಸದಸ್ಯ ಪ್ರದೀಪ್‌ಕುಮಾರ ಶೆಟ್ಟಿ ಗುಡಿಬೆಟ್ಟು, ಕಿರಣ್‌ ಹೆಗ್ಡೆ ಅಂಪಾರು, ಉದ್ಯಮಿ ಚರಿಯಬ್ಬ ಸಾಹೇಬ್‌, ಮಾಜಿ ಗ್ರಾ.ಪಂ ಅಧ್ಯಕ್ಷ ದಸ್ತಗಿರಿ ಸಾಹೇಬ್‌ ಇದ್ದರು.

ಉದ್ಘಾಟನೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಶಾಸಕ ಕೆ.ಗೋಪಾಲ ಪೂಜಾರಿ, ‘ ಗೃಹ ಸಚಿವ ಪರಮೇಶ್ವರ ಅವರ ನೇತೃತ್ವದಲ್ಲಿ ಗೃಹ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಅನೂಕೂಲವಾಗವಂತೆ ಸಾರ್ವಜನಿಕರ ಬೇಡಿಕೆ ಇರುವ ಕಡೆಗಳಲ್ಲಿ ಆದ್ಯತೆ ಮೇರೆಗೆ ನೂತನ ಠಾಣೆ ಆರಂಭಿ ಸಲಾಗುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ರಾಜ್ಯ ಸರ್ಕಾರ ಜನರ ಅಗತ್ಯ ಪೂರೈಸಲು ಬದ್ಧವಾಗಿದೆ ಎಂದು ಅವರು ನುಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸ ಕರು ಜಿಲ್ಲೆಯ ಪ್ರತ್ಯೇಕ ಮರಳು ನೀತಿ ರಚಿಸುವಂತೆ ಈಗಾಗಲೆ ಒತ್ತಡವನ್ನು ಹೇರಲಾಗಿದೆ. ಮರಳು ಅಭಾವ ದಿಂದಾಗಿ ಜಿಲ್ಲೆಯ ಸಾಮಾನ್ಯ ಜನರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಮುಖ್ಯಸ್ಥರ ಗಮನಕ್ಕೂ ತರಲಾಗಿದೆ. ಹಿರಿಯ ಅಧಿಕಾರಿ ರಾಜೇಂದ್ರ ಕಠಾರಿ ಅವರ ಜತೆಗೆ ಸಮಸ್ಯೆಯ ಪರಿಹಾರದ ಕುರಿತಂತೆ ಮಾತುಕತೆ ನಡೆಸಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಎಂ.ವೀರಪ್ಪ ಮೊಯಲಿ ಹಾಗೂ ಆಸ್ಕರ್‌ ಫರ್ನಾಂಡಿಸ್‌ ಅವರ ನೇತೃತ್ವದಲ್ಲಿ ಮರಳು ಸಮಸ್ಯೆ ಬಗೆಹರಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಿ.ಯು.ಸಿ ಪರೀಕ್ಷೆಯಲ್ಲಿ ಗಂಗೊಳ್ಳಿ ರಾಧಿಕಾ ಪೈ ವಿಜ್ಞಾನ ವಿಭಾಗದಲ್ಲಿ ಮೊದಲ ರ್‍್ಯಾಂಕ್‌ ಬರುವ ಮೂಲಕ ತಾಲ್ಲೂಕಿನ ಗೌರವವನ್ನು ಹೆಚ್ಚಿಸಿದ್ದಾರೆ. ಆಕೆ ಸಾಧನೆಗೆ ಪರೋಕ್ಷವಾಗಿ ಆಕೆಯ ಹೆತ್ತವರು ಕಾರಣರಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಯಾಗಿ ಸ್ವಯಂ ಪ್ರತಿಭೆಯಿಂದ ಸಾಧನೆ ಮಾಡಿರುವ ಆಕೆಯನ್ನು ಬೈಂದೂರು ಕ್ಷೇತ್ರದ ಜನತೆ ಪರವಾಗಿ ಆಕೆಯ ನಿವಾಸಕ್ಕೆ ತೆರಳಿ ಅಭಿನಂದನೆ ಮಾಡುವುದಾಗಿ ಶಾಸಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT