ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂನಿಂದ ವಾಲೆಟ್‌ ಹಣ ತೆಗೆಯುವ ಸೌಲಭ್ಯ

Last Updated 13 ಮೇ 2017, 19:30 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ನ ಮೊಬೈಲ್‌ ವಾಲೆಟ್‌ ‘ಎಸ್‌ಬಿಐ ಬಡ್ಡಿ’ಯಲ್ಲಿನ ಹಣವನ್ನು ಎಟಿಎಂ ಮೂಲಕ ಪಡೆಯುವ ಸೌಲಭ್ಯವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹೊಸದಾಗಿ ಪರಿಚಯಿಸಿದೆ.

ಈ ರೀತಿ ಪ್ರತಿ ಬಾರಿ ಹಣ ತೆಗೆದಾಗ  ಗ್ರಾಹಕರಿಗೆ ₹25 ಶುಲ್ಕ ವಿಧಿಸಲಾಗುವುದು ಎಂದು ಬ್ಯಾಂಕ್‌ ಸ್ಪಷ್ಟಪಡಿಸಿದೆ.

ಎಟಿಎಂ ವಹಿವಾಟಿಗಳ ಮೇಲೆ ₹25  ಶುಲ್ಕ ವಿಧಿಸುವ   ವರದಿಗಳನ್ನು    ರಾಷ್ಟ್ರೀಯ ಬ್ಯಾಂಕಿಂಗ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಜನೀಶ್‌ ಕುಮಾರ್‌  ಅವರು ತಳ್ಳಿಹಾಕಿದ್ದಾರೆ. ‘ಈ ಹಿಂದಿನ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಹೊಸ ಸೌಲಭ್ಯ ಜಾರಿಗೆ ಬರುತ್ತಿದ್ದಂತೆ, ‘ಎಸ್‌ಬಿಐ  ಬಡ್ಡಿ’ಯಲ್ಲಿ   ಜಮಾ ಮಾಡಿರುವ ಹಣವನ್ನು ಗ್ರಾಹಕ  ಎಟಿಎಂ ಮೂಲಕ ಪಡೆಯಬಹುದು. ಇಲ್ಲಿಯವರೆಗೆ ಈ ರೀತಿಯ ಸೇವೆ ಅಸ್ತಿತ್ವದಲ್ಲಿ ಇರಲಿಲ್ಲ.

‘ವಾಣಿಜ್ಯ ಪ್ರತಿನಿಧಿಗಳ (ಬಿಸಿ) ಮೂಲಕ ವಾಲೆಟ್‌ನಿಂದ ₹2,000ವರೆಗೆ  ಹಣ ಹಿಂದೆ ಪಡೆದರೆ ವಹಿವಾಟಿನ ಶೇ 2.50ರಷ್ಟು (ಕನಿಷ್ಠ ₹ 6) ಸೇವಾ ಶುಲ್ಕ ಮತ್ತು ತೆರಿಗೆ ವಿಧಿಸಲಾಗುವುದು. ‘ಬಿಸಿ’ಗಳ ಮೂಲಕವೇ ಮೊಬೈಲ್‌ ವಾಲೆಟ್‌ನಲ್ಲಿ  ₹ 1,000 ಹಣ ಜಮಾ ಮಾಡಿದರೆ  ಬ್ಯಾಂಕ್‌
ಶೇ 0.25 ರಷ್ಟು ಸೇವಾಶುಲ್ಕ (ಕನಿಷ್ಠ ₹2 ಮತ್ತು ಗರಿಷ್ಠ ₹8) ಮತ್ತು ಸೇವಾ ತೆರಿಗೆ ವಿಧಿಸಲಿದೆ. ಇದೇ ಜೂನ್ 1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿವೆ.

‘ವಾಲೆಟ್ ‘ಬಡ್ಡಿ’ಯಿಂದ ಬ್ಯಾಂಕ್‌ ಖಾತೆಗೆ ತ್ವರಿತ ಹಣ ವರ್ಗಾವಣೆ ಸೇವೆ ಮೂಲಕ ವರ್ಗಾಯಿಸುವ ಹಣಕ್ಕೆ ಶೇ 3ರಷ್ಟು ಸೇವಾಶುಲ್ಕ, ತೆರಿಗೆ ವಿಧಿಸಲಾಗುವುದು. ‘ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯಲ್ಲಿ ಕೆಲವು ತಪ್ಪುಗಳು ನುಸುಳಿದ್ದವು. ಶೀಘ್ರವೇ ಪರಿಷ್ಕೃತ  ಸುತ್ತೋಲೆ ಹೊರಡಿಸಲಾಗುವುದು’ ಎಂದು ರಜನೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT