ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: 9,881 ವಿದ್ಯಾರ್ಥಿಗಳು ಉತ್ತೀರ್ಣ

Last Updated 14 ಮೇ 2017, 6:02 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 13,278 ವಿದ್ಯಾರ್ಥಿಗಳ ಪೈಕಿ 9,881(ಶೇ 74.41) ಮಂದಿ ತೇರ್ಗಡೆಯಾಗಿದ್ದಾರೆ. ಶೃಂಗೇರಿಯ ಜೇಸಿಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್‌.ಅಮೃತಾ ಅವರು 625ಕ್ಕೆ 623 (99.68) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಒಟ್ಟು 6,574 ಬಾಲಕರ ಪೈಕಿ 4,747 (ಶೇ 72.20) ಮಂದಿ, 6,704 ವಿದ್ಯಾರ್ಥಿನಿಯರ ಪೈಕಿ 5,134 (ಶೇ 76.58) ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 31 ಶಾಲೆಗಳಲ್ಲಿ ಶೇ 100 ಫಲಿತಾಂಶದ ದಾಖಲಿಸಿದ್ದು, ಈ ಪೈಕಿ 21– ಅನುದಾನರಹಿತ, 2– ಅನುದಾನಿತ ಮತ್ತು 8 ಸರ್ಕಾರಿ ಶಾಲೆಗಳು ಇವೆ.   

ನರಸಿಂಹರಾಜುಪುರದ ಜೀವನ್ ಜ್ಯೋತಿ ಪ್ರೌಢಶಾಲೆಯ ಪಿ.ಮಧುರಾ–622, ಸರ್ಕಾರಿ ಪಿಯು ಕಾಲೇಜಿನ  ಸಿಂಚನಾ ಉಡುಪ– 622, ಕಡೂರಿನ ದೀಕ್ಷಾ ಪ್ರೌಢಶಾಲೆಯ ಎಸ್‌.ಶಮಿತಾ–620, ಕಡಬಗೆರೆಯ ಜೋತಿರ್ ವಿಕಾಸ್ ಪ್ರೌಢಶಾಲೆಯ ಶಿವಸಾಗರ್– 620, ಚಿಕ್ಕಮಗಳೂರಿನ ಸೇಂಟ್ ಮೇರೀಸ್ ಪ್ರೌಢಶಾಲೆಯ ಎಲ್‌.ಶಾಸನಾ– 619, ತರೀಕೆರೆಯ ಅರುಣೋದಯ ಪ್ರೌಢಶಾಲೆಯ ಎ.ಕುಶಾಲ್ –618, ಜೆ.ವಿ.ಎಸ್ ಪ್ರೌಢಶಾಲೆಯ ಎಂ.ಸಿ.ಹರ್ಷಿತಾ –617,  ಸಂಗಮೇಶ್ವರಪೇಟೆಯ ಪೂರ್ಣಪ್ರಜ್ಞಾ ಶಾಲೆಯ ಎಸ್.ವೈ.ಸಾತ್ವಿಕ್– 617,  ಪ್ರಭಂಜನ್– 617, ಶೃಂಗೇರಿಯ ಜ್ಞಾನ ಭಾರತಿ ವಿದ್ಯಾಕೇಂದ್ರದ ಕೆ.ಜಿ.ಸಹನಾ–ಐ616, ಚಿಕ್ಕಮಗಳೂರಿನ ಜೆ.ವಿ.ಎಸ್ ಪ್ರೌಢಶಾಲೆಯ ಸೃಜನ್ ಗೌಡ–616, ಕಡೂರು ಸರ್ಕಾರಿ ಪಿಯು ಕಾಲೇಜಿನ ಸಿಂಚನಾ–616 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

8,621 ಗ್ರಾಮೀಣ ವಿದ್ಯಾರ್ಥಿಗಳಲ್ಲಿ 6,489 ವಿದ್ಯಾರ್ಥಿಗಳು (ಶೇ 75.27) ಹಾಗೂ 4,657 ನಗರ ಪ್ರದೇಶದ ವಿದ್ಯಾರ್ಥಿಗಳ ಪೈಕಿ 3,390 (ಶೇ 72.79) ಮಂದಿ ಉತ್ತೀರ್ಣರಾಗಿದ್ದಾರೆ.  ಸರ್ಕಾರಿ ಶಾಲೆಗಳ 6,350 ವಿದ್ಯಾರ್ಥಿಗಳಲ್ಲಿ 4491(ಶೇ 70.72), ಅನುದಾನಿತ ಶಾಲೆಗಳ 4279 ವಿದ್ಯಾರ್ಥಿಗಳ ಪೈಕಿ 2,953 (ಶೇ 69), ಅನುದಾನ ರಹಿತ ಶಾಲೆಗಳ 2,649 ವಿದ್ಯಾರ್ಥಿಗಳಲ್ಲಿ 2,435 (ಶೇ 91.92) ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಜಿ.ನಾಗೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯ ಶ್ರೀಮತಿ ಪರ್ವತವರ್ಧನ ಎಂ.ಎಲ್‌.ವಾಸುದೇವಮೂರ್ತಿ ಬಾಲಿಕಾ ಪ್ರೌಢಶಾಲೆಯು ಶೇ 82 ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿನಿ ಕೆ.ಆಲಿಯಾ ಅವರು 601 (ಶೇ 96.16) ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT