ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಶ್ಚಾತ್ಯ ನಾಟಕಗಳಿಗೆ ಸ್ಥಳೀಯತೆ ಕೊಟ್ಟ ಬಾಪಟ್‌

ಸಾಗರ: ರಂಗ ನಿರ್ದೇಶಕ ದೇವೇಂದ್ರ ಬೆಳೆಯೂರು
Last Updated 15 ಮೇ 2017, 4:17 IST
ಅಕ್ಷರ ಗಾತ್ರ

ಸಾಗರ: ಪಾಶ್ಚಾತ್ಯ ನಾಟಕಗಳನ್ನು ಸ್ಥಳೀಯತೆಯಲ್ಲಿ ಸಾದರಪಡಿಸಿದ ರಂಗಕರ್ಮಿ ಗುರುರಾವ್ ಬಾಪಟ್‌  ಸಾಧನೆ ಶ್ರೇಷ್ಠವಾದದ್ದು ಎಂದು ರಂಗನಿರ್ದೇಶಕ ದೇವೇಂದ್ರ ಬೆಳೆಯೂರು ತಿಳಿಸಿದರು.

‘ನಮ್ಮ ರಂಗ–ಸ್ವರೂಪ’ ಸಂಸ್ಥೆ ಅಜಿತ್‌ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಪಾಶ್ಚಾತ್ಯ ನಾಟಕಗಳ ಕನ್ನಡ ಪ್ರಸ್ತುತಿಯಲ್ಲಿ ಬಾಪಟ್’ ವಿಷಯದ ಕುರಿತು ಅವರು ಮಾತನಾಡಿದರು.

ಬಾಪಟ್‌ ಮಹಾಕಾವ್ಯವನ್ನು ಆಧರಿಸಿ  ರಂಗಪಠ್ಯ ರಚಿಸಿದ್ದರು. ಇದು ಎಲ್ಲ ವರ್ಗವನ್ನು ತಲುಪುವಂತೆ ನೋಡಿ ಕೊಂಡಿದ್ದರು ಎಂದು ತಿಳಿಸಿದರು.

ವೃತ್ತಿಪರವಲ್ಲದ ನಟರನ್ನು ಅಭಿನಯದಲ್ಲಿ ಪಳಗಿಸಿ ಅವರನ್ನು ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿದ ಕೀರ್ತಿ  ಬಾಪಟ್‌ರಿಗೆ ಸಲ್ಲುತ್ತದೆ. ರಂಗ ನಟನೆಯ ಬಗ್ಗೆ ಶೋಧಕ ಪ್ರವೃತ್ತಿ ಅವರಲ್ಲಿತ್ತು ಎಂದು ತಿಳಿಸಿದರು. ಉಪನ್ಯಾಸಕ ಪಿ.ವಿ.ಸುಬ್ಬರಾವ್‌ ಪ್ರತಿಕ್ರಿಯೆ ನೀಡಿದರು.

ಸದಾಶಿವ ಜೋಯ್ಸ್‌ ಮಾತನಾಡಿ, ರಂಗಕೃತಿಯನ್ನು ತಳ ಸಮುದಾಯದ ಒಳಿತಿನ ದೃಷ್ಟಿಕೋನದಲ್ಲಿ ನೋಡುವ ಬಗೆಯನ್ನು ಕಲಿಸಿದವರು ಬಾಪಟ್. ವಸ್ತುನಿಷ್ಠ ಜಾತ್ಯತೀತತೆಗೆ ಒತ್ತು ನೀಡಿದ್ದರು ಎಂದು ನೆನಪಿಸಿಕೊಂಡರು.

‘ರಂಗ ನಿರ್ದೇಶಕರಾಗಿ ಬಾಪಟ್‌’  ಕುರಿತು ರಂಗಕರ್ಮಿ ಬಿ.ಆರ್‌.ವಿಜಯವಾಮನ್‌ ಮಾತನಾಡಿ, ರಂಗಭೂಮಿಗೆ ಸಂಬಂಧಪಟ್ಟ ಯಾವುದೇ ಮೂಲಸೌಕರ್ಯಗಳು ಇಲ್ಲದ ಕಾಲದಲ್ಲಿ ಅದಕ್ಕಾಗಿ ತನುಮನ ಧನವನ್ನು ಅರ್ಪಿಸಿಕೊಂಡವರು ಬಾಪಟ್ ಎಂದರು.

ಸಂಭಾಷಣೆ ಪ್ರಧಾನವಾಗಿರುವ ಶ್ರೀರಂಗರ ನಾಟಕಗಳ ಪೈಕಿ ‘ರಂಗ ಭಾರತ’ವನ್ನು ರಂಗದ ಮೇಲೆ ತರುವಾಗ ಮಾತನ್ನು ಗೌಣವಾಗಿಸಿ ಪ್ರದರ್ಶನ ಕಳೆಕಟ್ಟುವಂತೆ ಮಾಡಿದ್ದು ಬಾಪಟ್‌ರ ವಿಶೇಷತೆ. ರಂಗ ವಿನ್ಯಾಸದ ಬಗ್ಗೆ ಅವರಿಗೆ ಅಪೂರ್ವ ಕಲ್ಪನೆ ಇತ್ತು ಎಂದು ಹೇಳಿದರು.

ಪತ್ರಕರ್ತ ಎಚ್‌.ಬಿ.ರಾಘವೇಂದ್ರ, ರಂಗ ನಿರ್ದೇಶಕ ಗೌರಿಶಂಕರ್‌ ಪ್ರತಿಕ್ರಿಯಿಸಿದರು. ರಂಗಕರ್ಮಿ ಎಸ್.ಮಾಲತಿ ಅಧ್ಯಕ್ಷತೆ ವಹಿಸಿದ್ದರು.   ಟ್ರಸ್ಟ್‌ನ ಅಧ್ಯಕ್ಷ ಬಸ್ತಿ ಸದಾನಂದ ಪೈ ಹಾಜರಿದ್ದರು. ಮಂಜುನಾಥ್‌ ಜೇಡಿಕುಣಿ ಗೋಷ್ಠಿಯನ್ನು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT