ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಸುಂದರಿ ‘ಶ್ರದ್ಧಾ’ ಸಿದ್ಧಾಂತ

Last Updated 15 ಮೇ 2017, 19:30 IST
ಅಕ್ಷರ ಗಾತ್ರ

ಸರಳ ಸುಂದರಿ ಶ್ರದ್ಧಾ ಕಪೂರ್‌, ತಮ್ಮ 20ನೇ ವಯಸ್ಸಿಗೆ ಸಿನಿಮಾ ಗಲ್ಲಿಯಲ್ಲಿ ಹೆಜ್ಜೆ ಊರಿದವರು. ಶ್ರದ್ಧಾ ಅಭಿನಯದ ‘ಹಾಫ್‌ ಗರ್ಲ್‌ಫ್ರೆಂಡ್‌’, ‘ಹಸೀನಾ’ ಚಿತ್ರಗಳು ಸದ್ಯದಲ್ಲೇ ತೆರೆಕಾಣಲಿವೆ. ಸೈನಾ ನೆಹ್ವಾಲ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲು ಈಗಾಗಲೇ ಚಿತ್ರವೊಂದಕ್ಕೆ ಸಹಿಹಾಕಿದ್ದಾರೆ. ಪಾದರಸದಂಥ ದೇಹ, ಆಕರ್ಷಕ ವ್ಯಕ್ತಿತ್ವದ ಹದಪಾಕದಂತಿರುವ ಶ್ರದ್ಧಾ ಗ್ಲಾಮರ್ ಕಾಪಾಡಿಕೊಳ್ಳಲು ಏನೇನು ಮಾಡ್ತಾರೆ ಗೊತ್ತಾ?

ವಯಸ್ಸು: 30 ವರ್ಷ

ಎತ್ತರ: 5.5 ಅಡಿ

ತೂಕ: 52 ಕೆ.ಜಿ

ಇಷ್ಟದ ಬಣ್ಣ: ಹಳದಿ, ನೇರಳೆ

ಹವ್ಯಾಸ: ಶೂ ಸಂಗ್ರಹಿಸುವುದು, ಓದುವುದು ಹಾಗೂ ಅಡುಗೆ ಮಾಡುವುದು

ಇಷ್ಟದ ತಿಂಡಿ: ಫಿಶ್‌ ಕರಿ, ರವಾ ಫ್ರೈಡ್‌ ಫಿಶ್‌, ಜಿಲೇಬಿ

ಸಂಭಾವನೆ: ಸಿನಿಮಾವೊಂದಕ್ಕೆ ಸುಮಾರು ₹4 ಕೋಟಿ

ಏನಿಷ್ಟ: ರುಚಿರುಚಿಯಾದ ತಿಂಡಿ ತಿನ್ನುವುದು, ವಿಶಿಷ್ಟ ಸ್ಥಳಗಳಿಗೆ ಭೇಟಿ ನೀಡುವುದು, ಪರ್ವತಾರೋಹಣ, ಸ್ಕೂಬಾ ಡೈವಿಂಗ್‌ನಂಥ ಸಾಹಸ ಕ್ರೀಡೆಗಳು.
ತ್ವಚೆಯ ರಕ್ಷಣೆಗೆ: ಎದ್ದ ತಕ್ಷಣ ನೀರು ಕುಡಿಯುವುದು, ಮೊಯಿಸ್ಚರೈಸರ್‌ ಬಳಕೆ. ಬಿಸಿಲಿಗೆ ಸನ್‌ಸ್ಕ್ರೀನ್‌, ಲಿಪ್‌ಬಾಂ ಬಳಕೆ.

ಫಿಟ್‌ನೆಸ್‌: ಬೆಳಿಗ್ಗೆಯ ತಿಂಡಿಗೆ ಬಗೆಬಗೆಯ ಹಣ್ಣುಗಳು. ಕಾರ್ಬೊಹೈಡ್ರೇಟ್‌, ಪ್ರೊಟೀನ್‌, ವಿಟಮಿನ್‌ಗಳಿರುವ ಆಹಾರಕ್ಕೆ ಆದ್ಯತೆ. ಚಿಪ್ಸ್‌, ಬರ್ಗರ್‌, ಪಿಜ್ಜಾ ಸೇರಿದಂತೆ ಜಂಕ್‌ಫುಡ್‌ ಸೇವನೆ ಅಪರೂಪ. ಚಾಕೊಲೇಟ್‌ ಮತ್ತು ಐಸ್‌ಕ್ರೀಂ ಬಲು ಇಷ್ಟ.

ಬೆಳಿಗ್ಗೆ 7ಕ್ಕೆ ಜಿಮ್‌ನಲ್ಲಿ ವ್ಯಾಯಾಮ. ಯೋಗ, ಧ್ಯಾನ ಅವರಿಗಿಷ್ಟ. ಜುಂಬಾ, ಹಿಪ್‌ಹಾಪ್‌, ಬೆಲ್ಲಿ ನೃತ್ಯಾಭ್ಯಾಸ ಬಳುಕುವ ಕಾಯಕ್ಕೆ ಪೂರಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT