ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಿಕ್ಷಣ ಇಲಾಖೆ

Last Updated 16 ಮೇ 2017, 9:07 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ವನದುರ್ಗ ಗ್ರಾಮದ ಸರ್ಕಾರಿ ಹಿರಿಯ ಕನ್ಯಾ ಪ್ರಾಥಮಿಕ ಶಾಲೆಗೆ ಹಾಕಿದ ಬೀಗವನ್ನು ಭಾನುವಾರ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಗ್ರಾಮಸ್ಥರ ಮಧ್ಯಸ್ಥಿಕೆ ಯಿಂದ ಬಗೆಹರಿಸಿ, ತೆರವು ಗೊಳಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಅವರ ನಿರ್ದೇಶನದ ಮೇರೆಗೆ ಗ್ರಾಮಕ್ಕೆ ಭಾನುವಾರ ತೆರಳಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿದ್ದಣ್ಣ ಮಾನಸೂಣಗಿ, ಗ್ರಾಮದ ಮುಖಂಡರ ಹಾಗೂ ಪಾಲಕರ ಜೊತೆ ಸಮಾ ಲೋಚನೆ ನಡೆಸಿದರು.

ಜೂನ್ ತಿಂಗಳಲ್ಲಿ ನಾಲ್ವರು ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು ಹಾಗೂ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳ ಲಾಗುವುದು. ಅಲ್ಲದೆ, ಶಿಕ್ಷಕಿ ಮಂಜುಳಾ ಅವರು ವರ್ಗಾವಣೆ ಮಾಡಿಕೊಳ್ಳಲು ಬಯಸಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಆಗ ತಾಲ್ಲೂಕು ಪಂಚಾಯಿತಿ ಸದಸ್ಯ ಹಣಮಂತರಾಯ ದೊರೆ ದಳಪತಿ ಸಮ್ಮತಿಸಿ, ಪಾಲಕರು ಹಾಗೂ ಗ್ರಾಮಸ್ಥರು ಅಗತ್ಯ ಸಹಕಾರ ನೀಡುತ್ತಾರೆ. ಸಿಬ್ಬಂದಿಯ ಮೇಲೆ ನಮ್ಮದು ಯಾವುದೇ ದ್ವೇಷವಿಲ್ಲ. ಒಟ್ಟಾರೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಯಾಗಬಾರದು ಎಂಬುದು ಗ್ರಾಮಸ್ಥರ ಕಾಳಜಿ ಎಂದರು.

ಶಿಕ್ಷಕಿಯನ್ನು ವರ್ಗಾವಣೆ ಗೊಳಿಸು ವಂತೆ ಗ್ರಾಮಸ್ಥರು ಕಳೆದ ಸೋಮವಾರ (ಮೇ 8) ಶಾಲೆಗೆ ಬೀಗಹಾಕಿ ಪ್ರತಿಭಟಿಸಿದ್ದರು.ಶಿಕ್ಷಣ ಇಲಾಖೆಯ ಅಧಿಕಾರಿ ಸೈಫ್ಸ್ ಸಾಬ್, ಚೆನ್ನಪ್ಪ ಕಾಶಿರಾಜ, ಭೀಮರಾಯ ಹುಣಸಿಗಿಡ, ಮಾನಯ್ಯ ಪಡದಳ್ಳಿ, ನಾಗರಾಜ ಗುತ್ತೆದಾರ, ಭಾಷುಮಿಯಾ, ಹಣಮಂತರಾಯ, ಮಂಜುನಾಥ ಗುಡಗುಂಟಿ, ಮಂಜು ನಾಥ, ರಾಮರಾಜ ನಾಯಕಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT