ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಂಕಾರಿಕ ಮೀನು ಸಾಕಣೆಗೆ ಪೈಲಟ್ ಯೋಜನೆ

Last Updated 17 ಮೇ 2017, 6:10 IST
ಅಕ್ಷರ ಗಾತ್ರ

ಮಂಗಳೂರು: ಚೆನ್ನೈನಲ್ಲಿ ಭಾರತದ ಮೊದಲ ಅಕ್ವೇಟಿಕ್ ರೇನ್‌ಬೋ ಟೆಕ್ನಾ ಲಜಿ ಪಾರ್ಕ್, ಅತ್ಯಾಧುನಿಕ ಸೌಲಭ್ಯಗ ಳೊಂದಿಗೆ ತಲೆ ಎತ್ತಲಿದ್ದು, ಬಹುವಿಧದ ಅಲಂಕಾರಿಕ ಮೀನುಗಳ ಮೊಟ್ಟೆ ಕೇಂದ್ರ ವನ್ನೂ ಒಳಗೊಳ್ಳಲಿದೆ. ಮೀನುಗಳ ಆಹಾರ ಸಂಸ್ಕರಣಾ ಘಟಕಗಳು ಕೂಡ ಇರಲಿದ್ದು, ಮೂರು ತಿಂಗಳಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಎಂಪೆಡಾ ಅಧ್ಯಕ್ಷ ಡಾ. ಜಯತಿಲಕ್‌ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ನಡೆದ ಮೂರು ದಿನಗಳ ಅಕ್ವಾ ಅಕ್ವೇ ರಿಯಾ ಇಂಡಿಯಾ ಮತ್ಸ್ಯ ಕೃಷಿ ಪ್ರದ ರ್ಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ತಮಿಳುನಾಡಿನ ಪೊನ್ನೇರಿಯಲ್ಲಿ ರುವ ಫಿಶರೀಸ್ ಕಾಲೇಜ್ ಆಂಡ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಈ ಸೌಲಭ್ಯ ವನ್ನು ಅಭಿವೃದ್ಧಿಪಡಿಸುತ್ತಿದೆ. ಅಲಂಕಾ ರಿಕ ಮೀನುಗಳ ರಫ್ತು ಮಾಡುವ ಅತಿ ದೊಡ್ಡ ಎರಡನೇ ತಮಿಳುನಾಡು. ಮೊದಲ ಸ್ಥಾನದಲ್ಲಿ ಪಶ್ಚಿಮ ಬಂಗಾಳ ವಿದೆ. ಪಾರ್ಕ್ ಪೂರ್ಣಗೊಂಡ ನಂತರ ಅಲಂಕಾರಿಕ ಮೀನುಗಳ ತಳಿ ಅಭಿವೃದ್ಧಿ ಮತ್ತು ಸಾಕಣೆ ಮಾಡುವವರಿಗೆ ಮೂರು ವರ್ಷಗಳ ಭೋಗ್ಯಕ್ಕೆ ನೀಡಲಾಗುವುದು ಎಂದು ಹೇಳಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಗವಾದ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾ ರವು ಈ ಯೋಜನೆಯನ್ನು ಮುನ್ನಡೆ ಸುವ ಹೊಣೆ ಹೊತ್ತಿದೆ ಎಂದ ಅವರು, ₹10 ಕೋಟಿ ವೆಚ್ಚದ ಈ ಯೋಜನೆಗೆ ತಮಿಳುನಾಡು ಸರ್ಕಾರದ ನವೀನ ಚಟುವಟಿಕೆಗಳ ಭಾಗವಾಗಿ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಅಧಿಕ ಮೌಲ್ಯದ ಅಲಂಕಾರಿಕ ಮೀನುಗಳ ದೇಶಿ ಮತ್ತುದೇಶಿ ತಳಿಯ ಉತ್ಪಾದನೆಗೆ ಅಗತ್ಯವಾದ ಮೂಲಸೌಕರ್ಯ ಮತ್ತು ಅತ್ಯಾಧುನಿಕ ತಾಂತ್ರಿಕ ನೆರವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಎಆರ್‌ಟಿಪಿಯು ರೋಗ ನಿವಾರಕ ಪ್ರಯೋಗಾಲಯವನ್ನು ಹೊಂದಲಿದ್ದು, ವಿಶಿಷ್ಟ ಮೀನುಗಳ ತಳಿಗಳನ್ನು ವಿದೇಶಗ ಳಿಂದ ಆಮದು ಮಾಡಿಕೊಂಡಾಗ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಸೋಂ ಕುಗಳನ್ನು ನಿವಾರಿಸಲು ಶ್ರಮಿಸಲಿವೆ. ಒಟ್ಟು ಸೌಲಭ್ಯವು ಚೆನ್ನೈ ಸುತ್ತಲಿನ, ವಿಶೇಷವಾಗಿ ಕೋಲತ್ತುರಿನ ಮೀನು ಸಾಕಾಣಿಕೆ ಮಾಡುವವರಿಗೆ ತಜ್ಞರ ನೆರವು ನೀಡಲಿದೆ ಎಂದರು. 

ಎಂಪೆಡಾ ಆರ್ಥಿಕ ನೆರವನ್ನು  ಮತ್ತು ತಂತ್ರಜ್ಞಾನದ ಪರಿಣತಿಯನ್ನು ಒದಗಿ ಸಲು ಮುಂದಾಗಿದೆ. ಸಿಹಿನೀರು ಮತ್ತು ಸಾಗರದ ಅಲಂಕಾರಿಕ ಮೀನುಗಳನ್ನು ಬೆಳೆಯುವ ರಾಜ್ಯಗಳಿಗೆ ಅಗತ್ಯ ನೆರವನ್ನು ಒದಗಿಸುತ್ತದೆ. 2015-16ನೇ ಸಾಲಿನಲ್ಲಿ ಹಿಮಾಚಲ ಪ್ರದೇಶಕ್ಕೆ ₹ 23.79 ಲಕ್ಷ ಆರ್ಥಿಕ ನೆರವನ್ನು ಪ್ರಾಧಿಕಾರ ನೀಡಿದೆ ಎಂದು ಮಾಹಿತಿ ನೀಡಿದರು.

ರಾಜಸ್ಥಾನ, ಪಂಜಾಬ್, ಹರಿ ಯಾಣ, ಅಂಡಮಾನ್ ಮತ್ತು ನಿಕೋ ಬಾರ್ ದ್ವೀಪಗಳು, ಲಕ್ಷ ದ್ವೀಪದಂತಹ ಕಡೆಗಳಲ್ಲಿ  ಅತ್ಯಾಧುನಿಕ ತಂತ್ರಜ್ಞಾನದ ಮೀನು ಮರಿ ಮಾಡುವ ಕೇಂದ್ರಗಳನ್ನು ಸ್ಥಾಪಿಸಲು ಪ್ರಾಧಿಕಾರ ಉದ್ದೇಶಿಸಿದೆ. ರಾಜ್ಯಗಳ ಮಟ್ಟದಲ್ಲಿ ಯೋಜನೆ ಜಾರಿಗೆ ಅಗತ್ಯವಾದ ತಾಂತ್ರಿಕ ನೆರವು ನೀಡು ವುದಕ್ಕೆ ಸಿದ್ಧವಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಮೀನು ಸಾಕಾಣಿಕೆ ಅಭಿವೃದ್ಧಿ ಮಂಡಳಿಯಡಿ ಅಲಂಕಾರಿಕ ಮೀನುಗಳ ಸಾಕಣೆಗೆ ಪೈಲಟ್ ಯೋಜ ನೆಯೊಂದನ್ನು ಆರಂಭಿಸಿದ್ದು, ಇದಕ್ಕಾಗಿ ₹61.98 ಕೋಟಿ ಮೀಸಲಿಡಲಾಗಿದೆ. ಈ ಯೋಜನೆಯ ವ್ಯಾಪ್ತಿಗೆ ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ, ಗುಜ ರಾತ್, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಬರಲಿವೆ ಎಂದು ಹೇಳಿದರು.

**

ಅಧಿಕ ಪ್ರಮಾಣದಲ್ಲಿ ಗುಣಮಟ್ಟದ ಮೀನುಗಳ ಉತ್ಪಾದನೆ ಮತ್ತು ದೇಶೀ ಅಲಂಕಾರಿಕ ಮೀನುಗಳ ತಳಿ ಅಭಿವೃದ್ಧಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ
-ಡಾ. ಜಯತಿಲಕ್‌, ಎಂಪೆಡಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT