ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದ ಹೈಟೆಕ್ ಕಾಲೇಜು

Last Updated 17 ಮೇ 2017, 6:36 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಳೆದ ಸಾಲಿನಲ್ಲಿ ಶೇ 80ರಷ್ಟು ಫಲಿತಾಂಶ ಗಳಿಸಿದೆ. ಕಾಲೇಜಿಗೆ ಅಗತ್ಯವಿರುವ ಎಲ್ಲ  ಮೂಲ ಸೌಲಭ್ಯಗಳು ಕಲ್ಪಿಸಲಾಗಿದ್ದು, 2017ನೇ ಸಾಲಿನಿಂದ ಸ್ನಾತಕೋತ್ತರ ಪದವಿ ತರಗತಿಗಳು ಪ್ರಾರಂಭವಾಗಲಿವೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್‌.ಪಿ.ರಾಜಣ್ಣ ಮಾಹಿತಿ ನೀಡಿದ್ದಾರೆ.

2017-18ನೇ ಸಾಲಿನ ಪದವಿ ತರಗತಿಗಳಿಗೆ ದಾಖಲಾತಿಗಳು ಆರಂಭ ವಾಗಿರುವ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು,  ಶಾಸಕರ ಪ್ರಯತ್ನದಿಂದಾಗಿ ಕಾಲೇಜಿನಲ್ಲಿ ₹36 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ವಿಜ್ಞಾನ ಪ್ರಯೋಗಾಲಯ ಪ್ರಾರಂಭವಾಗಿದೆ. ಶಾಸಕರ ವಿಶೇಷ ಅನುದಾನದಡಿಯಲ್ಲಿ ₹1ಕೋಟಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳ ವ್ಯವಸ್ಥೆ ಹೊಂದಿರುವ  ತರಗತಿ ಕೊಠಡಿಗಳು ನಿರ್ಮಾಣ ಗೊಂಡಿವೆ.

₹60 ಲಕ್ಷ ವೆಚ್ಚದಲ್ಲಿ ಸೆಮಿನಾರ್ ಹಾಲ್‌ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಉಚ್ಯತರ ಶಿಕ್ಷಣ ಅಭಿಯಾನ (ರೂಸಾ)ಅಡಿಯಲ್ಲಿ   ₹2 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್‌ಗಳು  ಸೇರಿದಂತೆ ವಿವಿಧ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬಿ.ಎ, ಹೆಚ್.ಇ.ಪಿ, ಕೆ.ಇ.ಎಸ್, ಕೆ.ಇ.ಜೆ, ಎಚ್.ಇ.ಎಸ್, ಬಿಕಾಂ, ಬಿ.ಬಿ.ಎ, ಮತ್ತು ಬಿ.ಎಸ್ಸಿ, ಪಿ.ಸಿ.ಎಂ ಕೋರ್ಸ್‌ಗಳು ಲಭ್ಯವಿದ್ದು, ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪ ಯೋಗಪಡಿಸಿಕೊಳ್ಳಬೇಕು ಎಂದರು.

ಗುಣಮಟ್ಟ ಪರಿಶೀಲನಾ ಸಮಿತಿ (ಎನ್‌ಎಎಸಿ)ಯಿಂದ ‘ಬಿ’ ಶ್ರೇಣಿ ಪಡೆದಿರುವ ಕಾಲೇಜು, ಯುಜಿಸಿ ವತಿ ಯಿಂದ 2(ಎಫ್), 12(2) ಮಾನ್ಯತೆ ಪಡೆದಿದೆ. ಸರ್ಕಾರದ ಎಲ್ಲ ಮಾನದಂಡ ಅತ್ಯುತ್ತಮವಾಗಿ ನಿರ್ವಹಿಸಿ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಶೈಕ್ಷಣಿಕ ಕಲಿಕಾ ವಾತಾವರಣ ಹೊಂದಿ ರುವ ಕಾರಣದಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಲೀಡ್ ಕಾಲೇಜ್‌ ಆಗಿಯು  ಕಾರ್ಯನಿರ್ವಹಿಸುತ್ತಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಕಾಲೇಜಿನಲ್ಲಿ ವಿವಿಧ ಕಂಪನಿಗಳಿಂದ ಕ್ಯಾಂಪಸ್ ಆಯ್ಕೆ ಮೂಲಕ ಉದ್ಯೋಗ ದೊರೆಕಿಸಿ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.

ನಿಪುಣತೆಗೆ ಒತ್ತು: ಪಠ್ಯದಾಚೆಗಿನ ಚಟುವಟಿಕೆಗಳಿಗೂ  ಹೆಚ್ಚಿನ ಒತ್ತು ನೀಡಿದ್ದರ ಫಲವಾಗಿ 2017ರ ಜನವರಿ ಯಲ್ಲಿ ದೆಹಲಿಯಲ್ಲಿ ನಡೆದ ಆರ್‌ಡಿ ಪೆರೇಡ್‌ನಲ್ಲಿ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿ ಮನುಸೂರ್‌ ಭಾಗ ವಹಿಸಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಕಲಾ ವಿಭಾಗದ ಐಚ್ಛಿಕ ಕನ್ನಡ ವಿಷಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 3ನೇ ರ್ಯಾಂಕ್ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಪಠ್ಯ ಪುಸ್ತಕದ ಜೊತೆಗೆ ವಿದ್ಯಾರ್ಥಿಗಳ ನಿಪುಣ ಹೆಚ್ಚಿಸುವ ಸಲುವಾಗಿ ಇಂಗ್ಲಿಷ್ ಸಂವಹನ, ಸಾಮಾನ್ಯ ಜ್ಞಾನ ಕಲಿಕೆ, ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಸಮಾಜ ವಿಜ್ಞಾನ ವೇದಿಕೆ, ವಾಣಿಜ್ಯ ವೇದಿಕೆ, ನೇಗಿಲಯೋಗಿ ಸಾಹಿತ್ಯ ವೇದಿಕೆಗಳ ಮೂಲಕ ವಿವಿಧ ವಿಷ ಯಗಳಿಗೆ ಸಂಬಂಧಿಸಿದಂತೆ ತಜ್ಞರಿಂದ ಪ್ರತಿ ತಿಂಗಳು ಉಪನ್ಯಾಸ ಕೊಡಿಸ ಲಾಗುತ್ತಿದೆ. 30 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಕಾಲೇಜಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿ ಗಳಿಗೆ ಲಭ್ಯ ವಿದ್ದು ಗ್ರಂಥಾಲಯ ಕಂಪ್ಯೂಟರಿ ಕರಣ ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನ: ಬಡವರು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ದಿಂದ ವಂಚಿತರಾಗ ಬಾರದು ಎನ್ನುವ ದೃಷ್ಠಿಯಿಂದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗಾಗಿಯೇ ಸರ್ಕಾರ ಹಲ ವಾರು ವಿದ್ಯಾರ್ಥಿ ವೇತನಗಳ ಸೌಲಭ್ಯ ಜಾರಿಗೆ ತಂದಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ಗಳಿಗೆ ‘ವಿದ್ಯಾಸಿರಿ’, ಹೆಣ್ಣು ಮಕ್ಕಳಿ ಗಾಗಿ ಶುಲ್ಕ ಪಾವತಿಯಲ್ಲಿ ವಿನಾಯಿತಿ ಹಾಗೂ ವಿಶೇಷ ವಿದ್ಯಾರ್ಥಿ ವೇತನ ಸೌಲಭ್ಯವಿದೆ.
ವಿದ್ಯಾರ್ಥಿನಿಯರಿಗಾಗಿ ‘ಸಂಚಿ ಹೊನ್ನಮ್ಮ’ ವಿದ್ಯಾರ್ಥಿ ವೇತನ, ಶೇ60ಕ್ಕಿಂತಲೂ ಹೆಚ್ಚು ಅಂಗಳಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸರ್.ಸಿ.ವಿ.ರಾಮನ್ ಹಾಗೂ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಜಿಂದಾಲ್‌ ಹಾಗೂ ನಗರ ಸಭೆಯಿಂ ದಲೂ ವಿದ್ಯಾರ್ಥಿ ವೇತನ ದೊರೆಯಲಿದೆ.

ಕಡಿಮೆ ವಾರ್ಷಿಕ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ ರಾಜೀವ್‌ಗಾಂಧಿ ವಿದ್ಯಾಭ್ಯಾಸ ಸಾಲ ಯೋಜನೆ ಇದೆ. ಇದರಲ್ಲಿ ಮೂರು ವರ್ಷದ ಪದವಿ ಹಂತದ ಶಿಕ್ಷಣಕ್ಕೆ ಅಗತ್ಯ ಇರುವಷ್ಟು ಸಾಲ ಸೌಲಭ್ಯ ಅತಿ ಕಡಿಮೆ ಬಡ್ಡಿದರದಲ್ಲಿ ದೊರೆಯಲಿದೆ. ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಉಚಿತವಾಗಿ ಲ್ಯಾಪ್‌ ಟಾಪ್‌ ನೀಡ ಲಾಗುತ್ತಿದೆ. ಅಲ್ಪಸಂಖ್ಯಾತ ನಿಗಮ ದಿಂದಲೂ ವಿದ್ಯಾರ್ಥಿವೇತನಗಳ ಸೌಲಭ್ಯವಿದೆ ವಿದ್ಯಾರ್ಥಿ ವೇತನ ನೇರವಾಗಿ ವಿದ್ಯಾರ್ಥಿಗಳ ಖಾತೆಗಳಿಗೆ ಜಮಾ ಆಗಲಿದೆ ಎಂದು ತಿಳಿಸಿದರು.

***

ವಿದ್ಯಾರ್ಥಿಗಳಿಗೆ ಶುಲ್ಕ ಮಾಹಿತಿ

ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿನಿಯರಿಗೆ ₹2,435 ಶುಲ್ಕ, ವಿದ್ಯಾರ್ಥಿಗಳಿಗೆ ₹3,335 ನಿಗದಿಪಡಿಸಲಾಗಿದೆ. ಎಸ್.ಎಸ್.ಎಲ್.ಸಿ ಅಂಕಪಟ್ಟಿ ನಕಲು ಪ್ರತಿ, ದ್ವಿತೀಯ ಪಿಯುಸಿ ಮೂಲ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವರ್ಗಾವಣೆ ಪತ್ರಗಳೊಂದಿಗೆ ಕಾಲೇಜಿನ ವೇಳೆಯಲ್ಲಿ ಕಚೇರಿಯನ್ನು ಸಂರ್ಪಕಿಸ ಬಹುದಾಗಿದೆ ಎಂದು ಪ್ರಾಂಶುಪಾಲ ಎಸ್‌.ಪಿ. ರಾಜಣ್ಣ ಮಾಹಿತಿ ನೀಡಿದರು. ಕಾಲೇಜಿಗೆ ದಾಖಲಾದ ನಂತರ ವಿವಿಧ ವಿದ್ಯಾರ್ಥಿ ವೇತನಗಳ ಮೂಲಕ ವಿದ್ಯಾರ್ಥಿ ಪಾವತಿಸಿರುವ ಶುಲ್ಕ, ಪಠ್ಯ ಪುಸ್ತಕಗಳಿಗೆ ಖರ್ಚು ಮಾಡಿರುವ ಹಣ ವಾಪಾಸ್ ಸಿಗಲಿದೆ. ಈ ಎಲ್ಲ ಸೌಲಭ್ಯಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಾಗಲಿವೆ ಎಂದು ಅವರು ತಿಳಿಸಿದ್ದಾರೆ.

**

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಾವುದೇ ಸೌಲಭ್ಯದ ಕೊರತೆ ಇಲ್ಲ. ತಾಲ್ಲೂಕಿನ ವಿದ್ಯಾರ್ಥಿಗಳು ಸರ್ಕಾರ ನೀಡಿರುವ  ಸೌಲಭ್ಯ ಪಡೆದುಕೊಳ್ಳಿ
–ಟಿ.ವೆಂಕಟರಮಣಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT