ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆ ಬದಲಾಗದು

Last Updated 17 ಮೇ 2017, 19:30 IST
ಅಕ್ಷರ ಗಾತ್ರ

‘ಭಗವಾನ್‌’ ಶಬ್ದಕ್ಕೆ ನಾನು ನೀಡಿದ್ದ ವಿಶ್ಲೇಷಣೆಗೆ ಚಂಪಾ ಅವರ ಪ್ರತಿಕ್ರಿಯೆ ನೋಡಿದೆ (ವಾ.ವಾ., ಮೇ 17). ನಾನು ‘ಭಗವಾನ್’ ಪದದ ಅರ್ಥವನ್ನು ತಿರುಚಿ ಹೇಳಿದ್ದಲ್ಲ.

ಎರಡೂವರೆ ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಬುದ್ಧನ ಅನುಯಾಯಿಗಳು ಪ್ರಾರ್ಥನೆಯಲ್ಲಿ ‘ಭಗವಾನರೆಂದರೆ ಸಂಸಾರದ ಸೂತ್ರಗಳನ್ನು ಕತ್ತರಿಸಿಕೊಂಡವನು, ಆಶೆಗಳ ಬಂಧನದಿಂದ ಪಾರಾದವನು, ನಿರ್ವಾಣದ ಆಚೆಯ ದಡಕ್ಕೆ ಸಂದವನು’ ಎಂತಲೇ ಅರ್ಥೈಸಿ ಬುದ್ಧನ ವರ್ಣನೆಯನ್ನು ಮಾಡುತ್ತಾರೆ. 

ಇದಕ್ಕೆ ಯಾವ ಪಾಂಡಿತ್ಯವೂ ಬೇಕಾಗಿಲ್ಲ. ಇತ್ತೀಚಿನ ನಿಘಂಟಿನಿಂದ ಈ ಪರಂಪರೆಯ ಅರ್ಥ ಬದಲಾಗುವುದಿಲ್ಲ. ನಾವೆಲ್ಲ ಗೌರವಿಸುವ ದೊಡ್ಡ ಸಾಹಿತಿ, ಅವರಿಗೆ ಉಚಿತವಲ್ಲದ ಭಾಷೆ ಉಪಯೋಗಿಸಿದ್ದರಿಂದ ನೋವಿನಿಂದ  ಈ ವಿವರಣೆ ಕೊಡಬೇಕಾಯಿತು. ಇನ್ನು ಸಾಕು. ಕ್ಷಮೆ ಇರಲಿ.
-ರಮಾಕಾಂತ ಪುರಾಣಿಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT