ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಧಾನಿಗೆ ಪತ್ರ ಬರೆದರೆ ರಸ್ತೆ ಆಗುವುದಿಲ್ಲ’

Last Updated 18 ಮೇ 2017, 5:56 IST
ಅಕ್ಷರ ಗಾತ್ರ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಬಹುತೇಕ ರಸ್ತೆ ಕಾಮಗಾರಿ ಸಹಿತ ನೂರಾರು ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾ ರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಆದರೆ ಕೆಲವು ರಾಜಕೀಯ ಪ್ರೇರಿತ ವ್ಯಕ್ತಿಗಳು ಜನಸಾಮಾನ್ಯರ ಗಮನ ಬೇರೆಡೆಗೆ ಸೆಳೆಯುವುದಕ್ಕಾಗಿ ಪ್ರಧಾನಿಗೆ ಪತ್ರ ಬರೆದಿರುವುದಾಗಿ ಪುಕ್ಕಟೆ ಪ್ರಚಾರ ತಂತ್ರ ಅನುಸರಿಸುತ್ತಿದ್ದಾರೆ. ಇಂತಹ ಪತ್ರಗಳಿಂದ ಯಾವುದೇ ರಸ್ತೆ ಅಭಿವೃದ್ಧಿ ಸಾಧ್ಯವಿಲ್ಲ, ಹಾಗಿದ್ದರೆ ದೇಶದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸೇರಿದಂತೆ ವಿಧಾನ ಸಭೆಯೂ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಲೇವಡಿ ಮಾಡಿದರು.

ತಾಲ್ಲೂಕಿನ ನರಿಕೊಂಬು ಗ್ರಾಮದ ಬೋಳಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ₹5.92 ಕೋಟಿ ವೆಚ್ಚದಲ್ಲಿ ನಡೆಯಲಿರುವ 'ಗಾಂಧಿ ಪಥ-ಗ್ರಾಮ ಪಥ' ರಸ್ತೆ ಅಭಿವೃದ್ಧಿ ಯೋಜನೆ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಲ್ಲಿನ ಮೇಲ್ಕಾರ್ ಬಿರ್ವ ಸೆಂಟರ್ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರ್.ಟಿ.ಒ. ಕಚೇರಿ ತೆರೆಯಲಿದ್ದು, ಬಿ.ಸಿ.ರೋಡ್- ಪಾಣೆಮಂಗಳೂರು- ನಂದಾವರ ಕ್ಷೇತ್ರ ಸಂಪರ್ಕಕ್ಕಾಗಿ ನೇತ್ರಾವತಿ ನದಿ ತೀರದಲ್ಲಿ ಸರ್ವ ಋತು ರಸ್ತೆ ನಿರ್ಮಾಣಗೊಳ್ಳಲಿದೆ. ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತದಿಂದ ಜಕ್ರಿಬೆಟ್ಟು ತನಕ ಆರು ಪಥದಲ್ಲಿ ರಸ್ತೆ ಅಭಿವೃದ್ಧಿಗೊಳ್ಳಲಿದ್ದು, ₹37 ಕೋಟಿ ವೆಚ್ಚದಲ್ಲಿ ಅಜಿಲಮೊಗರು-ಕಡೇಶ್ವಾಲ್ಯ ಸಂಪರ್ಕ ಸೇತುವೆ ಕಾಮಗಾರಿಯೂ ನಡೆಯಲಿದೆ’ ಎಂದು ಅವರು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಮಲಾಕ್ಷಿ ಕೆ. ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋ ಧರ ಕರ್ಬೆಟ್ಟು,  ಸದಸ್ಯ ಕಿಶೋರ್ ಶೆಟ್ಟಿ , ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಎಂಜಿನಿಯರ್ ಜಯಾನಂದ ಪೂಜಾರಿ, ಪ್ರಮುಖರಾದ ಅಲೋನ್ಸ್ ಮಿನೇಜಸ್, ರವೀಂದ್ರ ಸಪಲ್ಯ, ಮಾಧವ ಕರ್ಬೆಟ್ಟು, ಪ್ರೇಮನಾಥ ಶೆಟ್ಟಿ, ಕೃಷ್ಣಪ್ಪ ಪೂಜಾರಿ ನಾಟಿ, ಸುಲೈಮಾನ್, ವಿಶ್ವನಾಥ ಪೂಜಾರಿ, ತ್ರಿವೇಣಿ ಇದ್ದರು.

ಸಾಮಾಜಿಕ ಮುಂದಾಳು ಎನ್. ಪ್ರಕಾಶ್ ಕಾರಂತ ಪ್ರಾಸ್ತಾವಿಕವಾಗಿ ಮಾತನಾ ಡಿದರು.

ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕೆ.ಡಿ.ಪಿ. ಸದಸ್ಯ ಉಮೇಶ್ ಬೋಳಂತೂರು ಸ್ವಾಗತಿಸಿ, ಆಲ್ಬಟರ್್ ಮಿನೇಜಸ್ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

**

ಬಹುಗ್ರಾಮ ನೀರಿನ ಯೋಜನೆ

ನರಿಕೊಂಬು ಗ್ರಾಮದ ಪಾಣೆಮಂಗಳೂರು-ಕರ್ಬೆಟ್ಟು ರಸ್ತೆಯನ್ನು 'ನಮ್ಮ ಗ್ರಾಮ ನಮ್ಮ ರಸ್ತೆ'ಯೋಜನೆಯಡಿ ಈಗಾಗಲೇ ಅಭಿವೃದ್ಧಿಪಡಿಸಿದ್ದು, ಇದೀಗ ₹5.92 ಕೋಟಿ ವೆಚ್ಚದಲ್ಲಿ 9 ಮೀಟರ್ ವಿಸ್ತಾರದಲ್ಲಿ ನಿನ್ನಿಪಡ್ಪು-ಬೋಳಂತೂರು ರಸ್ತೆ ಅಭಿವೃದ್ಧಿಗೊಳ್ಳಲಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.

‘ಮುಂದಿನ 11 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು,  ಐದು ವರ್ಷಗಳ ತನಕ ರಸ್ತೆಯ ಮೇಲುಸ್ತುವಾರಿ ಹೊಣೆ ಗುತ್ತಿಗೆದಾರರಿಗೆ ವಹಿಸಲಾಗಿದೆ. ₹12 ಕೋಟಿ ವೆಚ್ಚದಲ್ಲಿ ನರಿಕೊಂಬು ಮತ್ತು ಶಂಭೂರು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳ್ಳಲಿದೆ’ ಎಂದು ಸಚಿವರು ತಿಳಿಸಿದರು.

ಇದೇ ವೇಳೆ ಪಾಣೆಮಂಗಳೂರು ಸತ್ಯದೇವತೆ ಗುಡಿ ಬಳಿ ಹೆದ್ದಾರಿ ಸಂಪರ್ಕಿಸಲು ಅಂಡರ್ ಪಾಸ್ ನಿರ್ಮಾಣ ಅಗತ್ಯವಿದೆ ಎಂದು ಸ್ಥಳೀಯ ಕೃಷಿಕ ಮಂಜುನಾಥ ಭಟ್ ಸಚಿವರ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT