ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಎಸೆದರೆ ನೋಟಿಸ್‌ ಬರುತ್ತೆ ಹುಷಾರ್‌!

Last Updated 18 ಮೇ 2017, 6:01 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸವಾಲಾಗಿರುವ ಕಸದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವುದಕ್ಕೆ ಹಾಗೂ ಕಸ ಎಸೆಯುವವರ ವಿರುದ್ಧ ಕಾರ್ಯಾಚರಣೆ ನಡೆಸುವುದಕ್ಕೆ ಗಸ್ತು ಕಾರ್ಯಪಡೆ ತಂಡವೊಂದು ಕಾರ್ಯಾ ಚರಣೆಗೆ ಮುಂದಾಗಿದೆ.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ಹೆದ್ದಾರಿ ಇಕ್ಕೆಲಗಳಲ್ಲಿ ಬೇಕಾ ಬಿಟ್ಟಿಯಾಗಿ ಕಸ ಸುರಿಯುವವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವ ಕಠಿಣ ನಿರ್ಧಾರ ಕೈಗೊಳ್ಳುವುದಕ್ಕೆ ಜಿಲ್ಲಾ ಪಂ ಚಾಯಿತಿ ಅಣಿಯಾಗಿದೆ. ಇನ್ನು ಮುಂದೆ ಇಕ್ಕೆಲಗಳಲ್ಲಿ ಅಪ್ಪಿತಪ್ಪಿ ಕಸ ಎಸೆದರೆ ಮನೆಗೆ ನೋಟಿಸ್‌ ಬರೋದು ಖಚಿತ. ತೀವ್ರವಾಗಿ ಕಸದ ಸಮಸ್ಯೆ ಎದು ರಿಸುವ ಇಂತಹ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ನೋಟಿಸ್‌ ನೀಡುವ ಅಸ್ತ್ರವನ್ನು ಬಳಸಿಕೊಳ್ಳುವ ಉದ್ದೇಶದಿಂದ ಮೊದಲ ಹಂತವಾಗಿ ಗಸ್ತು ಕಾರ್ಯಪಡೆ ತಂಡವು ಇಂತಹ ಪ್ರದೇಶಗಳನ್ನು ಅವಲೋಕಿ ಸುವ ಕಾರ್ಯ ಮಾಡುತ್ತಿದೆ.     

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಮಾರ್ಗದರ್ಶನದಲ್ಲಿ ಆಯಾ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವ ದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಸೇರಿದಂತೆ ಐದು ಮಂದಿ ಸದಸ್ಯರನ್ನು ಒಳಗೊಂಡ ಗಸ್ತು ಕಾರ್ಯ ಪಡೆಯ ತಂಡವನ್ನು ರಚನೆ ಮಾಡಲಾ ಗಿದೆ.  ಈ ತಂಡವು ಹೆದ್ದಾರಿಗಳಲ್ಲಿ ಗಸ್ತು ಕಾರ್ಯ ನಡೆಸಲಿದೆ. ಹೆದ್ದಾರಿಗಳಲ್ಲಿ ತಮ್ಮ ವಾಹನ ನಿಲ್ಲಿಸಿ ಕಸ ಎಸೆಯುವವರ ವಾಹನ ಸಂಖ್ಯೆ ದಾಖಲಿಸಿಕೊಂಡು ಮೋಟಾರ ವಾಹನ ಕಾನೂನು ಅಡಿ ಯಲ್ಲಿ  ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಧಕ್ಕೆ ತರುವ ಹಾಗೂ ನೈರ್ಮಲ್ಯ ಹಾಳು ಮಾಡುವವರ ವಿರುದ್ಧ  ಅಪರಾಧ ಪ್ರಕ್ರಿಯೆ ಕಾಯ್ದೆ (ಸಿಆರ್‌ಪಿಸಿ) 133 ರ ಅಡಿಯಲ್ಲಿ ಸಾರಿಗೆ ಪ್ರಾದೇಶಿಕ ಇಲಾಖೆ ಯಿಂದಲೇ ನೋಟಿಸ್‌ ಜಾರಿ ಮಾಡಲಾ ಗುತ್ತದೆ. ನೋಟಿಸ್‌ ಪಡೆದವರು ಕಾನೂನು ಪ್ರಕಾರ ಮುಂದಿನ ಕಾನೂನು ಪ್ರಕ್ರಿಯೆ ಎದುರಿಸಬೇಕಾಗುತ್ತದೆ.

ಜವಾಬ್ದಾರಿಯುತ ಹಾಗೂ ಪ್ರಜ್ಞಾವಂತ ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಹಾಗೂ ಎಚ್ಚರಿಕೆ  ನೀಡುವ ಉದ್ದೇಶದಿಂದ ಇಂತಹ ಈ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯ ಸುಮಾರು 35 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿ ಇರುವ ಇಕ್ಕೆಲಗಳಲ್ಲಿ ಇಂತಹ ಕಸದ ಸಮಸ್ಯೆ ಇದೆ. ಸ್ವಚ್ಛ ಭಾರತ್‌ ಅಡಿಯಲ್ಲಿ ಎಲ್ಲ ಕಡೆಗಳಲ್ಲಿ ಸ್ವಚ್ಛತೆ ಕಾಪಾಡುವುದು ಜಿಲ್ಲಾ ಪಂಚಾಯಿತಿ ಕೆಲಸ ಎಂದು  ಡಾ.ಎಂ.ಆರ್. ರವಿ ತಿಳಿಸಿದ್ದಾರೆ.

ಗಸ್ತು ಕಾರ್ಯ ಪಡೆ ಈಗಾಗಲೇ ಕಾರ್ಯಾಚರಣೆ ಶುರು ಮಾಡಿದೆ. ಬುಧ ವಾರ ಕೊಣಾಜೆ ಹೆದ್ದಾರಿಯಲ್ಲಿ ಹಾಗೂ ಮಂಗಳವಾರ ಮೂಡುಬಿದಿರೆಯಲ್ಲಿ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾ ಚರಣೆಗಳ ಫಲಿತಾಂಶದ ಆಧಾರದಲ್ಲಿ ಆರಂಭಿಕವಾಗಿ 35 ಗ್ರಾಮ ಪಂಚಾಯಿ ತಿಗಳಲ್ಲಿ ಈ ಗಸ್ತು ಕಾರ್ಯಪಡೆ ಕಾರ್ಯಾ ಚರಣೆ ನಡೆಸಲಿದೆ. ಬಳಿಕ ಇದನ್ನು ವಿಸ್ತರಿಸುವ ಆಲೋಚನೆಯೂ ಇದೆ. ಸ್ವಚ್ಛತೆ ಕುರಿತಂತೆ ಜನಸಾಮಾನ್ಯರು ತಮ್ಮ ಜವಾಬ್ದಾರಿ ಅರಿತುಕೊಳ್ಳುವುದು ಅತ್ಯಗತ್ಯ ಎಂದು ಅವರು ಹೇಳಿದರು.

ರಾಮಕೃಷ್ಣ ಮಿಷನ್ ಗ್ರಾಮೀಣ ಪ್ರದೇಶಗಳಲ್ಲೂ ಸ್ವಚ್ಛತಾ ಕಾರ್ಯಕ್ಕೆ ಸಹಕರಿಸುವಂತೆ ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿದೆ. ಈ ಕುರಿತು ಚಿಂತಿಸ ಲಾಗುತ್ತಿದೆ. ಕಾರ್ಯ ಪಡೆಯ ಜತೆಗೆ ಪೊಲೀಸ್‌ ಹಾಗೂ ಇನ್ನಿತರ ಅಧಿಕಾರಿಗ ಳನ್ನು ಕಳುಹಿಸುವ ಕುರಿತು ಸಭೆ ಕರೆಯ ಲಾಗಿದೆ. ಅದರ ನಂತರ ಈ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.

**

ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದು ಕೊಳ್ಳುವುದಕ್ಕೆ ಆಯಾ ಪಂಚಾಯಿತಿ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ನಿರ್ಲಕ್ಷ್ಯ ವಹಿಸಿದರೆ ಪಿಡಿಒಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
–ಡಾ. ಎಂ.ಆರ್. ರವಿ, ಜಿಪಂ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT