ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ರಲ್ಲಿ ಹಿಂದೂರಾಷ್ಟ್ರದ ಸ್ಥಾಪನೆ: ಪ್ರಭು

Last Updated 18 ಮೇ 2017, 6:14 IST
ಅಕ್ಷರ ಗಾತ್ರ

ಮಂಗಳೂರು: ಸನಾತನ ಸಂಸ್ಥೆಯ ಸಂಸ್ಥಾಪಕ ಡಾ.ಜಯಂತ ಅಠಾವಲೆ ಅವರ ಅಮೃತ ಮಹೋತ್ಸವದ ಅಂಗವಾಗಿ ಹಿಂದೂ ರಾಷ್ಟ್ರ ಜಾಗೃತಿ ಅಭಿ ಯಾನ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದಲ್ಲಿ ಮಂಗಳ ವಾರ ಹಿಂದೂ ಮೆರವಣಿಗೆ ನಡೆಯಿತು.

ಬಲ್ಮಠದ ಜ್ಯೂಸ್ ಜಂಕ್ಷನ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಹಿಂದೂ ಏಕತಾ ಮೆರವಣಿಗೆಯನ್ನು ನಡೆಸಲಾಯಿತು. ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಶ್ರೀರಾಮ ಸೇನೆ, ಹಿಂದೂ ಯುವಸೇನೆ, ಹಿಂದೂ ಮಹಾಸಭಾ ಸೇರಿದಂತೆ ವಿವಿಧ ಸ್ಥಳೀಯ ಹಿಂದೂಪರ ಸಂಘಟನೆಗಳು, ಭಜನಾ ಮಂಡಳಿಗಳು ಭಾಗವಹಿಸಿದ್ದವು.

ಧರ್ಮಧ್ವಜದ ಪೂಜೆ ಮಾಡುವ ಮೂಲಕ ಮೆರವಣಿಗೆ ಆರಂಭ ವಾಯಿತು.

ರಣರಾಗಿಣಿ ಮಹಿಳಾ ಶಾಖೆಯ ಸದಸ್ಯರು ಮತ್ತು ಚಿಕ್ಕಮಕ್ಕಳು, ಝಾನ್ಸಿ ರಾಣಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ವೀರ ವನಿತೆಯರ ವೇಷ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಹಿಂದೂ ರಾಷ್ಟ್ರದ ಘೋಷಣೆ ಮಾಡಿದರು. ಹಿಂದೂ ರಾಷ್ಟ್ರಸ್ಥಾಪನೆಯ ಸಂದೇಶ ನೀಡುವ ಚಿತ್ರರಥಗಳು ಮೆರವಣಿಗೆಯಲ್ಲಿದ್ದವು.

ಹಿಂದೂ ರಾಷ್ಟ್ರ ಸ್ಥಾಪನೆಯ ಘೋಷಣೆಗಳನ್ನು ಕೂಗುವ ಮೂಲಕ ಅಲ್ಲಲ್ಲಿ ಧರ್ಮಧ್ವಜಕ್ಕೆ ಪೂಜೆ ಸಲ್ಲಿಸಲಾ ಯಿತು. ಮೆರವಣಿಗೆಯು ಸಾಗುವಾಗ ನಗರದ ಮುಖ್ಯ ವೃತ್ತಗಳಲ್ಲಿ ಸಮಿತಿಯ ಪ್ರಶಿಕ್ಷಣ ವರ್ಗದಿಂದ ತರಬೇತಿ ಪಡೆದ ವರು, ಲಾಠಿ, ನಾನ್ ಚಾಕೂ, ಖಡ್ಗದ ಮೂಲಕ ಸ್ವಯಂ ರಕ್ಷಣೆಯನ್ನು ಮಾಡುವ ಪ್ರಾತ್ರಕ್ಷಿಕೆ ಮಾಡಿ ತೋರಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾ ಗದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದೂ ಸಂಘಟಕರಾದ ಉದಯಶಂಕರ್, ‘ಇಂದು ಸನಾತನ ಸಂಸ್ಥೆ ಹಾಗೂ ಹಲವು ವಿವಿಧ ಹಿಂದು ತ್ವವಾದಿ ಸಂಘಟನೆಗಳ ಕಾರ್ಯದ ಫಲವಾಗಿ ಹಿಂದೂ ಸಮಾಜದ ಅಸ್ತಿತ್ವ ಉಳಿದಿದೆ. ನಾವು ಇಂದೂ ಜಾಗೃತವಾ ಗದಿದ್ದರೆ, ಕಾಶ್ಮೀರದಲ್ಲಿ ಹಿಂದೂಗಳ ಮೇಲಾದ ಆಕ್ರಮಣಗಳು ನಮ್ಮ ಮೇಲೆ ಆಗುವ ದಿನಗಳು ದೂರವಿಲ್ಲ’ ಎಂದು ಹೇಳಿದರು.

ಸನಾತನ ಸಂಸ್ಥೆಯ ರಾಜ್ಯ ಪ್ರಸಾರ ಸೇವಕ ಕಾಶೀನಾಥ ಪ್ರಭು ಮಾತನಾಡಿ, ಡಾ. ಜಯಂತ ಆಠಾವಲೆ ಅವರ ಅಧ್ಯಾತ್ಮ ಹಾಗೂ ಧರ್ಮಪ್ರಸಾರದ ಕಾರ್ಯ ಇಂದು ವಿಶ್ವದ 185 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನಡೆಯುತ್ತಿದೆ. ಅವರ ಸಂಕಲ್ಪದಂತೆ 2023 ರಲ್ಲಿ ಹಿಂದೂರಾಷ್ಟ್ರದ ಸ್ಥಾಪನೆಯಾಗಲಿದೆ. ವಿಶ್ವಕಲ್ಯಾಣದ ಈ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಅವರು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಚಂದ್ರ ಮೊಗೇರ, ಉದ್ಯಮಿ ಅನಂತ್ ಕಾಮತ್ ವೇದಿಕೆ ಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT