ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲೇ ‘ಅಂತಿಮ’ ದರ್ಶನ

Last Updated 18 ಮೇ 2017, 19:30 IST
ಅಕ್ಷರ ಗಾತ್ರ

ಪ್ರಿಯ ವ್ಯಕ್ತಿಗಳು ನಮ್ಮನ್ನು ಅಗಲಿದಾಗ, ಅಂತಿಮ ಸಂಸ್ಕಾರಕ್ಕೆ ಹೋಗಿ ಸಂತಾಪ ಸೂಚಿಸುತ್ತೇವೆ. ಆದರೆ ಇಂಗ್ಲೆಂಡ್‌ನಲ್ಲಿ ಜನರು ಅಂತಿಮ ಸಂಸ್ಕಾರಕ್ಕೆ ಹೋಗಲಾರದಷ್ಟು ಸೋಮಾರಿಗಳಾಗಿದ್ದಾರೆ. ಹಾಗೆಂದು ಅವರೇನೂ ಮೃತರ ಅಂತಿಮ ದರ್ಶನ ಪಡೆಯದಷ್ಟು ಕ್ರೂರಿಗಳಲ್ಲ.

ಅಂತರ್ಜಾಲದ ಮೂಲಕ ಅಂತ್ಯಕ್ರಿಯೆಯನ್ನೂ ಆನ್‌ಲೈನ್‌ ಮೂಲಕ ನೋಡುವ ಟ್ರೆಂಡ್‌ ಅಲ್ಲಿ ಆರಂಭವಾಗಿದೆ. ಈ ವಿಷಯ ರಾಯಲ್ ಲಂಡನ್ ವಿಮೆ ಸಂಸ್ಥೆಯ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

18ರಿಂದ 34 ವಯೋಮಾನದಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಈ ಪದ್ಧತಿಗೆ ಮೊರೆ ಹೋಗಿದ್ದಾರಂತೆ. ಅಂತಿಮ ಸಂಸ್ಕಾರದ ವಿಡಿಯೊವನ್ನು ಖಾಸಗಿ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದಕ್ಕೆ ಪಾಸ್‌ವರ್ಡ್‌ ನೀಡಲಾಗುತ್ತದೆ.

ಅಂತಿಮ ಸಂಸ್ಕಾರಕ್ಕೆ ಬರಲು ಸಾಧ್ಯವಾಗದವರು ತಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ಗಳಲ್ಲಿ ಅಂತಿಮ ದರ್ಶನ ಪಡೆಯುತ್ತಾರೆ. ಶವಸಂಸ್ಕಾರಕ್ಕೆ ಸಾಕ್ಷಿಯಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT