ಬೆಂಗಳೂರು

ಯುವ ಕಾಂಗ್ರೆಸ್‌ ಚುನಾವಣೆ ಅಕ್ರಮ ಆರೋಪ

ಯುವ ಕಾಂಗ್ರೆಸ್‌ ಜಿಲ್ಲಾ ಮತ್ತು ನಗರ ಘಟಕಗಳ ಪದಾಧಿಕಾರಿಗಳ ಆಯ್ಕೆ ಸಂಬಂಧದ ಮತ ಎಣಿಕೆ ಗುರುವಾರ ನಡೆಯಿತು. ಚುನಾವಣಾ ಅಧಿಕಾರಿಯೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗುಂಪೊಂದು ಆರೋಪಿಸಿತು.

ಬೆಂಗಳೂರು: ನಗರ ಯುವ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್‌ ಭವನದ ಮುಂಭಾಗದಲ್ಲಿ ಗದ್ದಲ ನಡೆಸಿದರು.

ಜಿಲ್ಲಾ ಮತ್ತು ನಗರ ಘಟಕಗಳ ಪದಾಧಿಕಾರಿಗಳ ಆಯ್ಕೆ ಸಂಬಂಧದ ಮತ ಎಣಿಕೆ ಗುರುವಾರ ನಡೆಯಿತು. ಚುನಾವಣಾ ಅಧಿಕಾರಿಯೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗುಂಪೊಂದು ಆರೋಪಿಸಿತು.

‘ಚುನಾವಣೆಯಲ್ಲಿ 1.05 ಲಕ್ಷ ಮತ ಚಲಾವಣೆ ಆಗಿದೆ ಎಂದು ಬುಧವಾರ ಹೇಳಿಕೆ ನೀಡಿದ್ದ ಚುನಾವಣಾಧಿಕಾರಿ, ಗುರುವಾರ 1.40 ಲಕ್ಷ ಎಂದು ಮಾತು ಬದಲಿಸಿದ್ದಾರೆ.  ಹೆಚ್ಚುವರಿ ಮತಗಳು ಎಲ್ಲಿಂದ ಬಂದವು’ ಎಂದು ಪ್ರಶ್ನಿಸಿ, ಕೆಲವು ಕಾರ್ಯಕರ್ತರು ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿದರು.

‘ಮತಪೆಟ್ಟಿಗೆಗಳ ಒಳಗೆ ನಕಲಿ ಮತಪತ್ರಗಳನ್ನು ಸೇರಿಸಲಾಗಿದೆ.  ಹೀಗಾಗಿ  ಇಡೀ  ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸಬೇಕು’ ಎಂದು ಆಗ್ರಹಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮತ ಎಣಿಕೆ ನಡೆಯುತ್ತಿದ್ದ ಕೊಠಡಿಗೆ ನುಗ್ಗಿದ ಗುಂಪೊಂದು ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮುಂದಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಕಾರಣಕ್ಕೆ ಸುಮಾರು 4 ಗಂಟೆ ಕಾಲ ಮತ ಎಣಿಕೆ  ಸ್ಥಗಿತಗೊಂಡಿತು.

ಹಿರಿಯ ನಾಯಕರ ಗುಂಪೊಂದು ಚುನಾವಣಾ ಅಕ್ರಮಕ್ಕೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿ  ಚುನಾವಣಾ ಕಣದಲ್ಲಿರುವವರ ಬೆಂಬಲಿಗರು ಭಾರತೀಯ ಯುವ ಕಾಂಗ್ರೆಸ್‌ ಘಟಕಕ್ಕೆ ಇತ್ತೀಚೆಗೆ ದೂರು ನೀಡಿದ್ದರು.

ಯುವ ಕಾಂಗ್ರೆಸ್‌ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗೆ ಪದಾಧಿಕಾರಿಗಳ ಆಯ್ಕೆಗೆ ಮೇ 14ರಿಂದ 16ರವರೆಗೆ ಚುನಾವಣೆ ನಡೆದಿತ್ತು. ರಾಜ್ಯ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯ ಮತ ಎಣಿಕೆ ಇದೇ 20ರಂದು ನಡೆಯಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಪೆರಿಫೆರಲ್‌ ವರ್ತುಲ ರಸ್ತೆಗೆ ಬೇಕು ₹20 ಸಾವಿರ ಕೋಟಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮೀಕ್ಷೆ
ಪೆರಿಫೆರಲ್‌ ವರ್ತುಲ ರಸ್ತೆಗೆ ಬೇಕು ₹20 ಸಾವಿರ ಕೋಟಿ

23 Nov, 2017
ಪುರಾತನ ಮಾವಿನ ಮರಕ್ಕೆ ಕಲಾತ್ಮಕ ಸ್ಪರ್ಶ

ಹೈದರಾಲಿ, ಟಿಪ್ಪು ಇಲ್ಲಿ ಮಾವಿನ ಸಸಿ ನೆಟ್ಟಿದ್ದರು
ಪುರಾತನ ಮಾವಿನ ಮರಕ್ಕೆ ಕಲಾತ್ಮಕ ಸ್ಪರ್ಶ

23 Nov, 2017
 ಬಿ.ಕಾಶಪ್ಪ ನಿಧನ

ಬೆಂಗಳೂರು
ಬಿ.ಕಾಶಪ್ಪ ನಿಧನ

23 Nov, 2017
ಲೋಕಾಯುಕ್ತ ಪೊಲೀಸರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ

ಬೆಂಗಳೂರು
ಲೋಕಾಯುಕ್ತ ಪೊಲೀಸರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ

23 Nov, 2017

ಬೆಂಗಳೂರು
ಇಬ್ಬರು ಎಂಜಿನಿಯರ್‌ಗಳಿಗೆ ಹಿಂಬಡ್ತಿ

ಬಿಬಿಎಂಪಿ ನಗರ ಯೋಜನೆ ಸಹಾಯಕ ನಿರ್ದೇಶಕರಾಗಿದ್ದ ಪಿ.ವಿ. ಚಂದ್ರಶೇಖರ್ ಮತ್ತು ಪ್ರಭುಶರಣ್‌ ಹಿಂಬಡ್ತಿಗೆ ಆದೇಶಿಸಲಾಗಿದೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಾದ ಈ ಇಬ್ಬರು 2013ರಲ್ಲಿ ನಿಯೋಜನೆ...

23 Nov, 2017