ಚುಟುಕು ಸುದ್ದಿ

ಕೆ.ಎ.ಎಸ್ ಪರೀಕ್ಷೆಗೆ ಮಾಹಿತಿ

ವಿಜಯನಗರದ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೆ.ಎ.ಎಸ್. ಪರೀಕ್ಷೆಗೆ ಉಚಿತ ಮಾಹಿತಿ ಮತ್ತು ಮಾರ್ಗದರ್ಶನದ ಉಪನ್ಯಾಸವನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.

ವಿಜಯನಗರದ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೆ.ಎ.ಎಸ್. ಪರೀಕ್ಷೆಗೆ ಉಚಿತ ಮಾಹಿತಿ ಮತ್ತು ಮಾರ್ಗದರ್ಶನದ ಉಪನ್ಯಾಸವನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ವಿವಿಧ ವಿಷಯಗಳ ವಿಷಯ ತಜ್ಞರು  ಹಾಜರಿರುತ್ತಾರೆ.

ಸಂಪರ್ಕ: 9916399276.

ಉಚಿತ ತರಬೇತಿ
ಬನಶಂಕರಿಯ ರೆಗಲ್ ತರಬೇತಿ ಸಂಸ್ಥೆಯು ಅಂಗವಿಕಲ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಅಭ್ಯರ್ಥಿಗಳಿಗೆ 2 ತಿಂಗಳ ಉಚಿತ ಕೆ.ಎ.ಎಸ್. ತರಬೇತಿಗೆ ಅರ್ಜಿ ಆಹ್ವಾನಿಸಿದೆ
ಆಸಕ್ತರು ಮೇ 21ರಂದು ತಮ್ಮ ಕಚೇರಿಗೆ ಬಂದು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂಪರ್ಕ: 8150081988.

ರಫ್ತು ನಿರ್ವಹಣೆ
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರವು ರಫ್ತು ನಿರ್ವಹಣಾ ತರಬೇತಿಯನ್ನು ಜೂನ್ 19ರಿಂದ 24ರವರೆಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದೆ.

ಆಸಕ್ತ ಕೈಗಾರಿಕೋದ್ಯಮಿಗಳು, ರಫ್ತುದಾರರು, ರಫ್ತು ಕ್ಷೇತ್ರಕ್ಕೆ ಪ್ರವೇಶಿಸುವವರು ತರಬೇತಿಯಲ್ಲಿ ಭಾಗವಹಿಸಬಹುದು. ಸಂಪರ್ಕ: 9880958218.

ಪ್ರತಿಭಾ ಪುರಸ್ಕಾರ
ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯಿಂದ 2017ರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು  ಮೇ 31 ಕೊನೆಯ ದಿನ.
ವಿಳಾಸ: ಗೌರವ ಕಾರ್ಯದರ್ಶಿ, ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ, ಎಸ್.ಜೆ.ಎಂ. ಟವರ್‌್ಸ, ಸಂ.18, ಶೇಷಾದ್ರಿ ರಸ್ತೆ, ಗಾಂಧಿ ನಗರ.

ಸಂಪರ್ಕ: 22266416.

ಪಿಎಚ್.ಡಿ ಪದವಿ
ವಾಣಿಜ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ರೇಣುಕಾದೇವಿ ಅವರು ಪ್ರಾಧ್ಯಾಪಕಿ ಸಿಂಥಿಯಾ ಮಿನೆಜಸ್‌  ಮಾರ್ಗದರ್ಶನದಲ್ಲಿ ‘ನಿರ್ವಹಣಾ ವಿಜ್ಞಾನ’ದಲ್ಲಿ  ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ  ಬೆಂಗಳೂರು ವಿಶ್ವವಿದ್ಯಾಲಯ  ಪಿಎಚ್‌.ಡಿ ಪದವಿ ನೀಡಿದೆ.

ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ಪದ್ಮಶಾಲಿ ಸಂಘವು ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನಿಸಿದೆ. ಪದ್ಮಶಾಲಿ ಸಮುದಾಯದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ, ವೈದ್ಯಕೀಯ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಮೇ 30ರೊಳಗೆ ಅರ್ಜಿ ಸಲ್ಲಿಸಬಹುದು.
ವಿಳಾಸ: ಕರ್ನಾಟಕ ಪದ್ಮಶಾಲಿ ಸಂಘದ ವಿದ್ಯಾರ್ಥಿ ನಿಲಯ, ನಂ.7/1, 2ನೇ ಅಡ್ಡರಸ್ತೆ, ಎನ್.ಆರ್.ರಸ್ತೆ, ಕಲಾಸಿಪಾಳ್ಯ. ಸಂಪರ್ಕ: 9590768058.

ಮೇವು ಉತ್ಪಾದನೆ ತರಬೇತಿ
ಹೆಸರಘಟ್ಟದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವು (ಇಂಡೋ-ಡ್ಯಾನಿಷ್ ಫಾರಂ) ಮೇ 22 ರಿಂದ 27ರವರೆಗೆ 6 ದಿನಗಳ ಹೈನುಗಾರಿಕೆ ಹಾಗೂ ಮೇವು ಉತ್ಪಾದನೆ ಬಗ್ಗೆ  ರೈತರು ಹಾಗೂ ನಿರುದ್ಯೋಗಿ ಯುವಕರಿಗೆ ತರಬೇತಿ ಶಿಬಿರ ಏರ್ಪಡಿಸಿದೆ. 
ವಿಳಾಸ ದೃಢೀಕರಣ ಪತ್ರದೊಂದಿಗೆ ಆಸಕ್ತರು ಮೇ 22ರಂದು ಬೆಳಿಗ್ಗೆ 10ಕ್ಕೆ ಕೇಂದ್ರದಲ್ಲಿ ಹೆಸರು ನೋಂದಾಯಿಸಬಹುದು. ತರಬೇತಿ ಅವಧಿಯಲ್ಲಿ ವಸತಿಗೃಹಕ್ಕೆ ದಿನಕ್ಕೆ ₹ 25 ನೀಡಬೇಕು. ಊಟ ಮತ್ತು ಪ್ರಯಾಣ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸಬೇಕು.
ಸಂಪರ್ಕ: 080-28466397.

Comments
ಈ ವಿಭಾಗದಿಂದ ಇನ್ನಷ್ಟು
ಕೆರೆಗಳ ಜೀವನಾಡಿ ರಾಜಕಾಲುವೆ ಸಂರಕ್ಷಣೆಗೂ ಆದ್ಯತೆ ಕೊಡಿ

ಬೆಂಗಳೂರು
ಕೆರೆಗಳ ಜೀವನಾಡಿ ರಾಜಕಾಲುವೆ ಸಂರಕ್ಷಣೆಗೂ ಆದ್ಯತೆ ಕೊಡಿ

28 May, 2017
ಮುಂದುವರಿದ ಮಳೆ: ಜನಜೀವನ ಅಸ್ತವ್ಯಸ್ತ

ಬೆಂಗಳೂರು
ಮುಂದುವರಿದ ಮಳೆ: ಜನಜೀವನ ಅಸ್ತವ್ಯಸ್ತ

28 May, 2017

ಬೆಂಗಳೂರು
ಔಷಧಿ ಲಭ್ಯತೆ ವಿವರ

ಸರ್ಕಾರಿ ಆಸ್ಪತ್ರೆಗಳ ಆವರಣ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳಿಗೆ ಹೊಂದಿಕೊಂಡಿರುವ ಔಷಧಿ ಅಂಗಡಿಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ.

28 May, 2017
ಕೆರೆ ಸ್ವಚ್ಛಗೊಳಿಸಲು ತಿಂಗಳ ಗಡುವು

ದೊರೆಸ್ವಾಮಿ ಎಚ್ಚರಿಕೆ
ಕೆರೆ ಸ್ವಚ್ಛಗೊಳಿಸಲು ತಿಂಗಳ ಗಡುವು

28 May, 2017
ಮೆಟ್ರೊ: ಮೂರು ದಿನ ಸಂಚಾರ ವ್ಯತ್ಯಯ

ಬೆಂಗಳೂರು
ಮೆಟ್ರೊ: ಮೂರು ದಿನ ಸಂಚಾರ ವ್ಯತ್ಯಯ

28 May, 2017