, ನಮ್ಮಲ್ಲಿ ಒಳ್ಳೆಯ ನಾಯಕರಿದ್ದಾರೆ, ಆದರೆ ನಮ್ಮ ವ್ಯವಸ್ಥೆ ಹಾಳಾಗಿದೆ: ರಜನಿಕಾಂತ್ | ಪ್ರಜಾವಾಣಿ
ನಾನು ಅಪ್ಪಟ ತಮಿಳಿಗ

ನಮ್ಮಲ್ಲಿ ಒಳ್ಳೆಯ ನಾಯಕರಿದ್ದಾರೆ, ಆದರೆ ನಮ್ಮ ವ್ಯವಸ್ಥೆ ಹಾಳಾಗಿದೆ: ರಜನಿಕಾಂತ್

ಒಂದು ವೇಳೆ ಯಾರಾದರೂ ತಮಿಳುನಾಡು ಬಿಟ್ಟು ಹೋಗಿ ಎಂದು ನನ್ನಲ್ಲಿ ಹೇಳಿದರೆ ಬೇರೆ ಯಾವುದೇ ರಾಜ್ಯದಲ್ಲಿ ನೆಲೆಯೂರುವುದಕ್ಕಿಂತ ನಾನು ನೇರ ಹಿಮಾಲಯಕ್ಕೆ ಹೊರಟು ಹೋಗುವೆ.

ರಜನಿಕಾಂತ್

ಕೊಡಂಬಕ್ಕಂ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುತ್ತಾರೆಯೇ? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ರಜನಿಕಾಂತ್ ಅವರಲ್ಲಿ ಕೇಳಿದಾಗ, ನೀವು ನಮ್ಮ ಮನೆಗೆ ಹೋಗಿ, ನಿಮ್ಮ ಕೆಲಸ ಮಾಡಿ. ಯಾವಾಗ ಯುದ್ಧ ಮಾಡುವ ಪರಿಸ್ಥಿತಿ ಬರುತ್ತದೋ ಆವಾಗ ನೋಡಿಕೊಳ್ಳೋಣ ಎಂದು ಹೇಳುವ ಮೂಲಕ ಅವರು ರಾಜಕೀಯ ಪ್ರವೇಶದ ಊಹಾಪೋಹಗಳನ್ನು ಮತ್ತೆ ಜೀವಂತವಾಗಿರಿಸಿದ್ದಾರೆ.

ತಮಿಳುನಾಡಿನಾದ್ಯಂತವಿರುವ ಅಭಿಮಾನಿಗಳನ್ನು ಭೇಟಿ ಮಾಡುವ ಉದ್ದೇಶದಿಂದ 5 ದಿನಗಳ ಕಾಲ ಅಭಿಮಾನಿಗಳೊಂದಿಗಿನ ಸಂವಾದ ಕಾರ್ಯಕ್ರಮ ನಡೆಸಿದ ರಜನಿ, ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕಿದೆ ಎಂದು ಹೇಳಿದ್ದಾರೆ. 

ಡಿಎಂಕೆ ಕಾರ್ಯಾಧ್ಯಕ್ಷ  ಎಂ.ಕೆ ಸ್ಟಾಲಿನ್, ಪಿಎಂಕೆ ಯುವ ಘಟಕ ನೇತಾರ ಅನ್ಬುಮಣಿ ರಾಮದಾಸ್, ವಿಸಿಕೆ ಮುಖ್ಯಸ್ಥ ತಿರುಮವಲವನ್ ಮತ್ತು ನಾಮ್ ತಮಿಳರ್ ಕಟ್ಚಿ ನೇತಾರ ಸೀಮಾನ್ ಮೊದಲಾದ ಉತ್ತಮ ನಾಯಕರು ತಮಿಳುನಾಡನ್ನು ಮುನ್ನಡೆಸಬಲ್ಲವರಾಗಿದ್ದಾರೆ. ಆದರೆ ನಮ್ಮ ರಾಜಕೀಯ ವ್ಯವಸ್ಥೆಯೇ ಹಾಳಾಗಿದೆ.

ಸ್ಟಾಲಿನ್ ಅವರಿಗೆ ಅಧಿಕಾರ ಕೊಟ್ಟರೆ ಅವರು ಅದ್ಭುತಗಳನ್ನು ಸೃಷ್ಟಿಸಬಲ್ಲರು ಎಂದು ಚೋ.ರಾಮಸ್ವಾಮಿ ಹೇಳುತ್ತಿದ್ದರು. ಸ್ಟಾಲಿನ್ ಒಬ್ಬ ಉತ್ತಮ ಆ ಆಡಳಿತಗಾರ. ಅನ್ಬುಮಣಿ ರಾಮದಾಸ್ ಅವರು ವಿದ್ಯಾವಂತ ಮತ್ತು ಅವರಲ್ಲಿ ಉತ್ತಮ ಯೋಚನೆಗಳಿವೆ. ಸೀಮಾನ್ ಅವರ ಯೋಚನೆಗಳ ಬಗ್ಗೆ ನಾನು ಅಚ್ಚರಿ ಪಟ್ಟಿದ್ದೇನೆ. ಆದರೆ ನಮ್ಮ ವ್ಯವಸ್ಥೆಯೇ ಹಾಳಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕೊಳೆತು ಹೋಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ  ಬದಲಾಗಿದೆ. ಜನರ ಕಲ್ಪನೆಯಲ್ಲಿರುವ ಪ್ರಜಾಪ್ರಭುತ್ವವು ಬದಲಾಗಲೇ ಬೇಕು.

ಏತನ್ಮಧ್ಯೆ,ತಮಿಳುನಾಡಿನಲ್ಲಿ ರಾಜಕೀಯಕ್ಕೆ ಪ್ರವೇಶಿಸಲು ನೀವೊಬ್ಬ 'ತಮಿಳಿಗ' ಅಲ್ಲ ಎಂಬುದು ನಿಮಗೆ ಅಡ್ಡಿಯಾಗುತ್ತಿದೆಯೇ ಎಂದು ಕೇಳಿದಾಗ, ನಾನೊಬ್ಬ 'ಅಪ್ಪಟ ತಮಿಳಿಗ' ಎಂದಿದ್ದಾರೆ ರಜನಿ. 

ಒಂದು ವಿಷಯವನ್ನು ನಾನಿಲ್ಲಿ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನಾನು ತಮಿಳಿಗ ಅಲ್ಲ ಎಂಬ ಪ್ರಶ್ನೆ ಪದೇ ಪದೇ ಉದ್ಭವಿಸುತ್ತಲೇ ಇದೆ. 23 ವರ್ಷ ನಾನು ಕರ್ನಾಟಕದಲ್ಲಿದ್ದೆ. ಆದರೆ ನಾನು 44 ವರ್ಷಗಳನ್ನು ತಮಿಳುನಾಡಿನಲ್ಲಿ ಕಳೆದಿದ್ದೇನೆ. ನಾನೊಬ್ಬ ಮರಾಠಿ/ಕನ್ನಡಿಗನಾಗಿ ನಾನಿಲ್ಲಿ ಬಂದೆ. ತಮಿಳುನಾಡಿನ ಜನರು ನನ್ನನ್ನು ಬೆಂಬಲಿಸಿದರು. ನನಗೆ ಎಲ್ಲವನ್ನೂ ಕೊಟ್ಟರು. ತಮಿಳುನಾಡಿನ ಜನರ ಬೆಂಬಲದಿಂದ ನಾನು ತಮಿಳಿಗನಾದೆ. ನಾನೊಬ್ಬ ಅಪ್ಪಟ ತಮಿಳಿಗ. ನನ್ನ ಹಿರಿಯರು ಕೃಷ್ಣಗಿರಿ ಜಿಲ್ಲೆಯವರು.

ಒಂದು ವೇಳೆ ಯಾರಾದರೂ ತಮಿಳುನಾಡು ಬಿಟ್ಟು ಹೋಗಿ ಎಂದು ನನ್ನಲ್ಲಿ ಹೇಳಿದರೆ ಬೇರೆ ಯಾವುದೇ ರಾಜ್ಯದಲ್ಲಿ ನೆಲೆಯೂರುವುದಕ್ಕಿಂತ ನಾನು ನೇರ ಹಿಮಾಲಯಕ್ಕೆ ಹೊರಟು ಹೋಗುವೆ.

ಸಾಮಾಜಿಕ ತಾಣಗಳಲ್ಲಿ ಬರುವ ನಕಾರಾತ್ಮಕ ವಿಷಯಗಳಿಗೆ ಕಿವಿಗೊಡಬೇಡಿ ಎಂದು ಅಭಿಮಾನಿಗಳಿಗೆ ಹೇಳಿದ ಅವರು, ನಾನು ಮೇಲೆ ಹೇಳಿದ ಮಾತುಗಳನ್ನು ಯಾರೂ ರಾಜಕೀಯಕ್ಕಾಗಿ ಬಳಸಿ ಅದರ ಬಗ್ಗೆ ಚರ್ಚೆ ಮಾಡಬೇಡಿ.  ರಾಜಕೀಯ ಅಂದರೆ ವಿಪಕ್ಷಗಳು ಇರಲೇ ಬೇಕು. ವಿರೋಧ ಪಕ್ಷ ಇಲ್ಲದೇ ಇದ್ದರೆ ಯಾರೂ ಬೆಳೆಯುವುದಿಲ್ಲ. ಆದರೆ ಸಾಮಾಜಿಕ ತಾಣದಲ್ಲಿ ಕೆಲವೊಂದು ಕಾಮೆಂಟ್‍ಗಳನ್ನು ನೋಡಿದರೆ, ಜನರು ಯಾಕೆ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂಬುದು ನನಗರ್ಥವಾಗುತ್ತಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮಹಾರಾಷ್ಟ್ರ: ಜಮೀನಿನಲ್ಲಿ ಎರಡನೇ ಮಹಾಯುದ್ಧ ಕಾಲದ ಜೀವಂತ ಬಾಂಬ್‌ ಪತ್ತೆ

ಆತಂಕದಲ್ಲಿ ರೈತ
ಮಹಾರಾಷ್ಟ್ರ: ಜಮೀನಿನಲ್ಲಿ ಎರಡನೇ ಮಹಾಯುದ್ಧ ಕಾಲದ ಜೀವಂತ ಬಾಂಬ್‌ ಪತ್ತೆ

26 Apr, 2018
‘ಸುಪ್ರೀಂ’ ನ್ಯಾಯಮೂರ್ತಿ ನೇಮಕ: ನ್ಯಾ.ಕೆ.ಎಂ.ಜೋಸೆಫ್‌ ಹೆಸರು ಶಿಫಾರಸು ಮರುಪರಿಶೀಲಿಸಲು ಕೊಲಿಜಿಯಂಗೆ ಕೇಂದ್ರ ಮನವಿ

ನವದೆಹಲಿ
‘ಸುಪ್ರೀಂ’ ನ್ಯಾಯಮೂರ್ತಿ ನೇಮಕ: ನ್ಯಾ.ಕೆ.ಎಂ.ಜೋಸೆಫ್‌ ಹೆಸರು ಶಿಫಾರಸು ಮರುಪರಿಶೀಲಿಸಲು ಕೊಲಿಜಿಯಂಗೆ ಕೇಂದ್ರ ಮನವಿ

26 Apr, 2018
ದೇಶದ ಕುಖ್ಯಾತ ವನ್ಯಜೀವಿ ಅಪರಾಧಿಗಳ ಪಟ್ಟಿಯಲ್ಲಿ ಸಲ್ಮಾನ್‌ ಖಾನ್‌

ಡೆಹ‌್ರಾಡೂನ್‌
ದೇಶದ ಕುಖ್ಯಾತ ವನ್ಯಜೀವಿ ಅಪರಾಧಿಗಳ ಪಟ್ಟಿಯಲ್ಲಿ ಸಲ್ಮಾನ್‌ ಖಾನ್‌

26 Apr, 2018
ನ್ಯಾಯಾಂಗದಲ್ಲಿ ಸರ್ಕಾರದ ಹಸ್ತಕ್ಷೇಪ: ಸುಪ್ರೀಂ ಕೋರ್ಟ್‌ ವಕೀಲರ ಸಂಘ ಆರೋಪ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇಮಕ
ನ್ಯಾಯಾಂಗದಲ್ಲಿ ಸರ್ಕಾರದ ಹಸ್ತಕ್ಷೇಪ: ಸುಪ್ರೀಂ ಕೋರ್ಟ್‌ ವಕೀಲರ ಸಂಘ ಆರೋಪ

26 Apr, 2018
13 ಶಾಲಾ ಮಕ್ಕಳ ದುರ್ಮರಣ

ಲಖನೌ
13 ಶಾಲಾ ಮಕ್ಕಳ ದುರ್ಮರಣ

26 Apr, 2018