ಬೆಳಗಾವಿ

‘ಟಿಕೆಟ್‌: ಹೈಕಮಾಂಡ್‌ ತೀರ್ಮಾನ ಅಂತಿಮ’

‘ಕಾಂಗ್ರೆಸ್ ಸಮುದ್ರವಿದ್ದಂತೆ. ಇದು ಯಾರ ಮೇಲೂ ನಿಂತಿಲ್ಲ. ಯಾರೂ ಅನಿವಾರ್ಯರಲ್ಲ. ಮುಖಂಡರ ನಡುವೆ ಭಿನ್ನಾಭಿಪ್ರಾಯ ವಿದ್ದರೆ ವರಿಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ’

ಬೆಳಗಾವಿ: ‘ಟಿಕೆಟ್‌ ಹಂಚಿಕೆ ಬಗ್ಗೆ ವರಿಷ್ಠರ ತೀರ್ಮಾನವೇ ಅಂತಿಮ’ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಇಲ್ಲಿನ ಪ್ರವಾಸಿಮಂದಿರದಲ್ಲಿ ಗುರು ವಾರ ಸಾರ್ವಜನಿಕರ ಕುಂದುಕೊರತೆ ಆಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಸಮುದ್ರವಿದ್ದಂತೆ. ಇದು ಯಾರ ಮೇಲೂ ನಿಂತಿಲ್ಲ. ಯಾರೂ ಅನಿವಾರ್ಯರಲ್ಲ. ಮುಖಂಡರ ನಡುವೆ ಭಿನ್ನಾಭಿಪ್ರಾಯ ವಿದ್ದರೆ ವರಿಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

‘ಯಮಕನಮರಡಿ ಕ್ಷೇತ್ರದಲ್ಲಿ ಸಹೋದರ ಲಖನ್‌ ಜಾರಕಿಹೊಳಿಗೆ ಟಿಕೆಟ್‌ ನೀಡಲಾಗುವುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ. ಯಾರಿಗೆ ಟಿಕೆಟ್‌ ಕೊಡಬೇಕು ಎನ್ನುವು ದನ್ನು ವರಿಷ್ಠರು ನಿರ್ಧರಿಸುತ್ತಾರೆ. 30 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತ ನಾಗಿ ಪಕ್ಷಕ್ಕೆ ದುಡಿದಿದ್ದೇನೆ. ಜನರು ಸಮಾಜಸೇವೆಗೆ ಅವಕಾಶ ಕಲ್ಪಿಸಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳು ತ್ತೇನೆ’ ಎಂದರು.

‘ಮುಂದಿನ ವಿಧಾನಸಭೆ ಚುನಾವಣೆ ಬಳಿಕ ದೇಶದಾದ್ಯಂತ ಕಾಂಗ್ರೆಸ್ ಗಾಳಿ ಬೀಸಲಿದೆ. ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಹಗಲುಗನಸು ಕಾಣುತ್ತಿದ್ದಾರೆ’ ಎಂದು ಟೀಕಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕ್ಯಾತನಗೇರಾ ಗ್ರಾಮದ ಯುವಕರ ಪಡೆ ಸಾಧನೆ

ಹಳಿಯಾಳ
ಕ್ಯಾತನಗೇರಾ ಗ್ರಾಮದ ಯುವಕರ ಪಡೆ ಸಾಧನೆ

26 May, 2017
ರೋಹಿಣಿ ಮಳೆ ನಿರೀಕ್ಷೆಯಲ್ಲಿ ಕೃಷಿಕ

ಚಿಕ್ಕೋಡಿ
ರೋಹಿಣಿ ಮಳೆ ನಿರೀಕ್ಷೆಯಲ್ಲಿ ಕೃಷಿಕ

26 May, 2017

ಬೈಲಹೊಂಗಲ
‘ಗುಣಮಟ್ಟದ ಶಿಕ್ಷಣವೇ ಇಲಾಖೆ ಗುರಿ’

‘2017-, 18ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆ ಇದೀಗ ಪ್ರಾರಂಭ ವಾಗುತ್ತಿದೆ. 1ರಿಂದ 10ನೇ ತರಗತಿಯ ವರೆಗೆ ಗುಣಮಟ್ಟದ ಶಿಕ್ಷಣವನ್ನು ಅನುಭವಿ ಶಿಕ್ಷಕರಿಂದ ನೀಡಲಾಗುತ್ತಿದೆ....

26 May, 2017

ಚನ್ನಮ್ಮನ ಕಿತ್ತೂರು
ಬೇಸಿಗೆ ದಾಹ ತೀರಿಸಲು ನೀರಿನ ವ್ಯವಸ್ಥೆ

ಇಷ್ಟು ದುಡ್ಡು ಕೊಟ್ಟರೆ ನಮ್ಮೂರಿನಲ್ಲಿ ಅರ್ಧ ಲೀಟರ್‌ ಹಾಲು ಸಿಕ್ಕುತ್ತದೆ. ಕುಡಿಯುವ ನೀರಿನಲ್ಲೂ ವ್ಯವಹಾರ ನಡೆಸಲು ಇಚ್ಛಿಸದ ಪುಣ್ಯಾತ್ಮರು, ಜನರ ದಾಹ ತಣಿಸಲು ಮುಂದಾಗಿರುವುದು...

26 May, 2017

ಬೆಳಗಾವಿ
ಮರಾಠಿಯಲ್ಲಿ ದಾಖಲೆಪತ್ರ ನೀಡಲು ಪಟ್ಟು

ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳ ಫಲಕಗಳಲ್ಲಿ ಕನ್ನಡದೊಂದಿಗೆ ಮರಾಠಿ ಭಾಷೆಯನ್ನೂ ಬಳಸಬೇಕು. ಸರ್ಕಾರಿ ಬಸ್‌ಗಳ ಮಾರ್ಗಸೂಚಿ ಫಲಕಗಳನ್ನೂ ಮರಾಠಿಯಲ್ಲಿ ಬರೆಸ­ಬೇಕು. ಸರ್ಕಾರಿ ಕಚೇರಿಗಳಲ್ಲಿ ಮರಾಠಿ­­ ಯಲ್ಲಿಯೇ...

26 May, 2017