ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿ ಕಾನೂನು ಜಾರಿಗೆ ಸಲಹೆ

Last Updated 19 ಮೇ 2017, 7:05 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಆದಾಯ ತೆರಿಗೆ ತಿದ್ದುಪಡಿ ಕಾನೂನು ಅನುಷ್ಠಾನ ಸಹಕಾರಿಗಳ ಆದ್ಯ ಕರ್ತವ್ಯ. ಕಾನೂನು ಅನು ಪಾಲನೆಯಲ್ಲಿ ಬರುವ ತೊಂದರೆಗಳಿಗೆ ಪರಿಹಾರ ಕಂಡು ಹಿಡಿದು ಎಲ್ಲಾ ಸಹಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ರಾವ್ ಸಾಹೇಬ ಪಾಟೀಲ ಹೇಳಿದರು.

ಇಲ್ಲಿನ ಕೇಶವ ಕಲಾ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೆಳಗಾವಿಯ ವಿಭಾಗಿಯ ಕಚೇರಿಯು ಅಥಣಿ, ಚಿಕ್ಕೋಡಿ, ರಾಯಬಾಗ ಮತ್ತು ಹುಕ್ಕೇರಿ ತಾಲ್ಲೂಕಗಳ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯ ನಿರ್ವಾಹಕರಿಗಾಗಿ ಆದಾಯ ತೆರಿಗೆ ತಿದ್ದುಪಡಿ ಕಾನೂನು ಕುರಿತು ಸಹಕಾರಿಗಳಲ್ಲಿ ಡಿಜಿಟಲೀಕರಣ ಹಾಗೂ ತಾಂತ್ರಿಕತೆಯ ಅಳವಡಿಕೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾ ಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆದಾಯ ತೆರಿಗೆ ಕಾನೂನು ತಿದ್ದುಪಡಿಯಿಂದಾಗಿ ಸಹಕಾರಿ ಸಂಘ ಸಂಸ್ಥೆಗಳ ಠೇವು ಹಾಗೂ ಸಾಲ ಸದಸ್ಯರ ಸಾಲ ವ್ಯವಹಾರಗಳಲ್ಲಿ ಬಹಳಷ್ಟು ಅನಾನುಕೂಲತೆ ಆಗಿದ್ದು, ಇಂದಿನ ತರಬೇತಿ ಶಿಬಿರದಲ್ಲಿ ನುರಿತ ಉಪನ್ಯಾಸಕರು ಕಾನೂನು ತಿದ್ದುಪಡಿಗಳ ಮಾಹಿತಿ ಹಾಗೂ ತೊಂದರೆಗಳಿಗೆ ಪರಿಹಾರಗಳ ಮೇಲೆ ಸೂಕ್ತ ಮಾರ್ಗದರ್ಶನ  ನಿಡಲಿದ್ದಾರೆ. ಅದರ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಜಯಾನಂದ ಜಾಧವ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೋಡಿ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ. ಬಿ. ಪೂಜಾರ ಮಾತನಾಡಿದರು.ಉಪನ್ಯಾಸಕ ಬಿ.ವಿ. ರವೀಂದ್ರನಾಥ್, ಆದಾಯ ತೆರಿಗೆ ಇಲಾಖೆಯ ಅಧಿಕಾರಿ ವಿ.ಕೆ. ಪಿಸೆ, ಪಿ. ಬಿ. ದೇಸಾಯಿ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಹಪ್ರಧಾನ ವ್ಯವಸ್ಥಾಪಕ ರಘುನಂದನ್ ಕೆ. ಉಪಸ್ಥಿತರಿದ್ದರು.ರಿಜನಲ್ ಮ್ಯಾನೇಜರ ಜಿ.ಎಸ್. ಟೋಪಣ್ಣನವರ ಸ್ವಾಗತಿಸಿದರು. ಓಂಕಾರ ಧರಣಿ ಕಾರ್ಯಕ್ರಮ ನಿರೂಪಿಸಿದರು. ಗಂಗಾರಾಮ ಕೋಳಾಪ್ಟೇ ವಂದಿಸಿದರು.

**

ಕೇಂದ್ರ ಸರ್ಕಾರವು ದೇಶದಲ್ಲಿ ಆರ್ಥಿಕ ಸುಧಾರಣೆ ದೃಷ್ಟಿಯಿಂದ ಆಯಕರ ಕಾಯ್ದೆಗೆ  ತಿದ್ದುಪಡಿ ತಂದಿದೆ. ಇದರಿಂದ ಆರ್ಥಿಕ ಸುಧಾರಣೆ ಆಗಲಿದೆ
ರಾವಸಾಹೇಬ ಪಾಟೀಲ
ಸಂಯುಕ್ತ ಸಹಕಾರಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT