ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕರಣೀಯ ಯೋಜನೆ

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳಲ್ಲಿ ಅಜ್ಜಿಯರಿಂದ ಮಕ್ಕಳಿಗೆ ಕಥೆ ಹೇಳಿಸುವ ವಿನೂತನ ಕಾರ್ಯಕ್ರಮವನ್ನು ರಾಜಸ್ತಾನ ಸರ್ಕಾರ ಜಾರಿಗೆ ತಂದಿರುವುದು ಸ್ವಾಗತಾರ್ಹ
(ಪ್ರ.ವಾ., ಮೇ18).

ಅಜ್ಜಿಯಂದಿರು ಹೇಳುವ ರಾಜನ ಕಥೆಗಳು, ರಾಜರ ಹೋರಾಟದ ಬದುಕು ಹಾಗೂ ಅಡಗೂಲಜ್ಜಿ ಪಾತ್ರ, ಮಾಯಗಾರನ ವ್ಯಕ್ತಿತ್ವ  ಎಲ್ಲವೂ  ಚಿಕ್ಕಮಕ್ಕಳಲ್ಲಿ ವಿಸ್ಮಯ ಸೃಷ್ಟಿಸಿ ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತವೆ.

ತಿರಸ್ಕಾರಕ್ಕೆ ಒಳಗಾಗಿರುವ ಅಜ್ಜಿಯಂದಿರಿಗೆ  ಒಳ್ಳೆಯ ಕಾಲ ಬರುವ ಸೂಚನೆ ಇದು. ಸದಾ ಮೊಬೈಲು, ವಿಡಿಯೊ ಗೇಮ್‌ಗಳಿಗೆ ಶರಣಾಗಿರುವ ಚಿಕ್ಕಮಕ್ಕಳ ಮನ ಪರಿವರ್ತನೆ ಮಾಡಲು ಅಜ್ಜಿಯು ಕತೆ ಹೇಳಬೇಕು. ಇದರಿಂದ ಮಕ್ಕಳ ವ್ಯಕ್ತಿತ್ವ ವಿಕಸನ, ಸಂಬಂಧಗಳ ಪರಿಚಯ, ಮಾತೃ ಪ್ರೇಮ ವೃದ್ಧಿಸುವುದು.

ಇಂಥ ಕ್ರಮ ಎಲ್ಲಾ ರಾಜ್ಯಗಳು ಕೈಗೊಂಡಲ್ಲಿ ವೃದ್ಧಾಶ್ರಮ ಸೇರುವ ಎಷ್ಟೋ ಮಹಿಳೆಯರು ಮನೆಯಲ್ಲಿಯೇ ಉಳಿದು ಮಕ್ಕಳ ಜೊತೆ ನೆಮ್ಮದಿಯ ಜೀವನ ಸಾಗಿಸಬಹುದು. ಅಜ್ಜಿಯಂದಿರು ಬದುಕಿಗೂ ಒಂದಿಷ್ಟು ಬೆಲೆ ಬಂದೀತು.
– ಪ. ಚಂದ್ರಕುಮಾರ್‌, ಗೌನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT