ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೇನ್‌ಲೆಸ್ ಸ್ಟೀಲ್ ಮಾಧ್ಯಮದ ಕಲೆಗಾರ

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ಬಹುತೇಕರಿಗೆ ಸ್ಟೀಲ್ ತಟ್ಟೆ ಅಥವಾ ಊಟದ ಡಬ್ಬ ನಿತ್ಯಬಳಕೆಯ ವಸ್ತುಗಳಷ್ಟೆ. ಸುಬೋಧ್ ಗುಪ್ತ ಅವರಿಗೆ ಹಾಗನಿಸುವುದಿಲ್ಲ. ಸಾಮಾನ್ಯ ಲೋಹದ ವಸ್ತುಗಳನ್ನು ಕಲಾಕೃತಿಯಾಗಿ ಮೂಡಿಸುವುದರಲ್ಲಿ ಅವರು ನಿಸ್ಸೀಮರು. 
 
ಸುಬೋಧ್ ಗ್ರಾಮೀಣ ಬಿಹಾರದವರು. ತಾವು ಕೆಲಸ ಮಾಡುತ್ತಿದ್ದ ರಂಗತಂಡಕ್ಕೆ ಪೋಸ್ಟರ್‌ಗಳನ್ನು ಮಾಡಲಾರಂಭಿಸಿದಾಗ ಕಲೆಯಲ್ಲಿ ಅವರಿಗೆ ಆಸಕ್ತಿ ಮೂಡಿತು. ಪಾಟ್ನಾದ ‘ಕಾಲೇಜ್ ಆಫ್ ಆರ್ಟ್ಸ್’ ಸೇರಿದರು.

ಸುದ್ದಿಪತ್ರಿಕೆಯೊಂದರ ‘ಇಲ್ಲಸ್ಟ್ರೇಟರ್’ ಆಗಿ ಅರೆಕಾಲಿಕ ಕೆಲಸವನ್ನೂ ಮಾಡಿದರು. ಕೆಲವೇ ವರ್ಷಗಳಲ್ಲಿ ಭಾರತದ ಸಮಕಾಲೀನ ಕಲೆ ಮೂಡಿಸುವ ಪ್ರಮುಖರಲ್ಲಿ ಒಬ್ಬರಾಗಿ ಸುಬೋಧ್ ಗುರ್ತಿಸಿಕೊಂಡರು. 
 
ಕಂಚು, ಅಮೃತಶಿಲೆ, ಕಂಚು ಹಾಗೂ ಮರ – ಎಲ್ಲವುಗಳಿಂದಲೂ ಕಲೆ ಮೂಡಿಸಬಲ್ಲ ಸುಬೋಧ್, ಸ್ಟೇನ್‌ಲೆಸ್ ಸ್ಟೀಲ್ ಅನ್ನು ತಮ್ಮತನದ ಕಲಾಮಾಧ್ಯಮವನ್ನಾಗಿ ಮಾಡಿಕೊಂಡದ್ದು ವಿಶೇಷ. ನಾಟಕೀಯವಾದ ಕಲಾಕೃತಿಗಳನ್ನು ರೂಪಿಸುವಾಗ ಅವರ ತಲೆಯಲ್ಲಿ ಭಾರತೀಯರ ನಿರೀಕ್ಷೆಗಳು ಇದ್ದೇ ಇರುತ್ತವೆ.

‘ಮೈ ಮದರ್ ಅಂಡ್ ಮಿ’ ಎಂಬ ಅವರ ಹತ್ತು ಅಡಿಯ ಸಿಲಿಂಡರ್ ಆಕಾರ ಕಲಾಕೃತಿ ಮೂಡಿದ್ದು ಸಗಣಿಯಿಂದ. ಸ್ಟೀಲ್ ಬಕೆಟ್‌ನಿಂದ ಚೆಲ್ಲುವಂತೆ ಭಾಸವಾಗುವ ಇತರ ಪಾತ್ರೆಗಳನ್ನು ಬಳಸಿ ರೂಪಿಸಿದ ಕಲಾಕೃತಿ ‘ಸ್ಪಿಲ್ಸ್’. ನವದೆಹಲಿಯ ‘ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್’ನಲ್ಲಿ ‘ದಾದಾ’ ಶೀರ್ಷಿಕೆಯ ಆಲದ ಮರದ ಕಲಾಕೃತಿ ಇದೆ.

ಮರದ ಎಲೆಗಳ ಜಾಗದಲ್ಲಿ ಹೊಳೆಯುವ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಅವರು ಬಳಸಿದ್ದಾರೆ. ‘ಹಂಗ್ರಿ ಗಾಡ್’ ಎಂಬ ಅಸ್ಥಿಪಂಜರವನ್ನು ಕೂಡ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಉಪಯೋಗಿಸಿ ಅವರು ಮೂಡಿಸಿದ್ದಾರೆ. 
 
ಪೇಂಟಿಂಗ್, ಫೋಟೊಗ್ರಫಿ ಹಾಗೂ ವಿಡಿಯೊ ಮಾಧ್ಯಮಗಳಲ್ಲೂ ಸುಬೋಧ್ ಅವರದ್ದು ಪಳಗಿದ ಕೈ. ನ್ಯೂಯಾರ್ಕ್‌ನ ‘ಗುಗೆನ್್ಹೀಮ್ ಮ್ಯೂಸಿಯಂ’, ‘ಟೆಟೆ ಬ್ರಿಟನ್’ ಹಾಗೂ ‘ಹ್ಯೂಸರ್ ಅಂಡ್ ವರ್ತ್ ಕಲಾ ಗ್ಯಾಲರಿ’ಗಳಲ್ಲಿ ಸುಬೋಧ್ ಗುಪ್ತ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT