ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಸಾಧನೆಗೆ ಕೌಶಲ ಮುಖ್ಯ’

Last Updated 21 ಮೇ 2017, 8:56 IST
ಅಕ್ಷರ ಗಾತ್ರ

ಕಾರ್ಕಳ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅನನ್ಯ ಕೌಶಲವನ್ನು ಮೈಗೂಡಿಸಿಕೊಳ್ಳಬೇಕು ಎಂದು ನಿರ್ದೇಶಕ ಡಾ.ಎ ಎನ್ ಪರಮೇಶ್ವರನ್ ಹೇಳಿದರು.

ತಾಲ್ಲೂಕಿನ ನಿಟ್ಟೆ ಎನ್.ಎಂ.ಎ.ಎಂ ತಾಂತ್ರಿಕ ಕಾಲೇಜಿನ ಐಇಇಇ ಸ್ಟೂಡೆಂಟ್ ಚಾಪ್ಟರ್ ಮಂಗಳೂರು ಉಪವಿಭಾಗದ ವತಿಯಿಂದ ಅಂತರ್ ಕಾಲೇಜು ಎಂ.ಟೆಕ್ ಪ್ರೊಜೆಕ್ಟ್ ಸ್ಪರ್ಧೆ ‘ಐ ಸ್ಕ್ವಯರ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ತಮ್ಮ ಆಸಕ್ತ ಕ್ಷೇತ್ರದಲ್ಲಿ ಅತ್ಯಾಕರ್ಷಕ ಪ್ರೊಜೆಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದರು. ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಮಾತನಾಡಿ, ‘ಎಂ.ಟೆಕ್ ವಿದ್ಯಾರ್ಥಿಗಳಿಗೆ ತಮ್ಮ ಪ್ರೊಜೆಕ್ಟ್ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸ್ಪರ್ಧೆ ಐ ಸ್ಕ್ವಯರ್ ಕನೆಕ್ಟ್ ಆಯೋಜಿಸಲಾಗಿದೆ. ಸರ್ಕ್ಯುಟ್ ಮತ್ತು ನಾನ್‌ಸರ್ಕ್ಯುಟ್ ಎಂಬ ಎರಡು ವಿಭಾಗದಲ್ಲಿ ನಡೆಸಲಾಗುತ್ತಿದೆ’ ಎಂದರು.

ವಿದ್ಯಾರ್ಥಿಗಳಾದ ಶ್ರೀನಿಧಿ ಮತ್ತು ಮಹಿಮಾ ಹಾಡಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕ ದಿಲೀಪ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಐಇಇಇ ಸ್ಟೂಡೆಂಟ್ ಚಾಪ್ಟರ್ ಮಂಗಳೂರು ಉಪವಿಭಾಗದ ಸದಸ್ಯ ಡಾ.ಕೆ.ವಿ.ಎಸ್.ಎಸ್.ಎಸ್ ಸಾಯಿರಾಮ್ ವಂದಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕಿ ಪ್ರಭಾನಿರಂಜನ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT