ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೈ ಲವ–ಕುಶ’ ಪೋಸ್ಟರ್ ಬಿಡುಗಡೆ

Last Updated 21 ಮೇ 2017, 19:30 IST
ಅಕ್ಷರ ಗಾತ್ರ

ತೆಲುಗು ಚಿತ್ರರಂಗದ ಸ್ಟಾರ್ ನಟ ಜ್ಯೂನಿಯರ್ ಎನ್‌ಟಿಆರ್ ಅವರ ಬಹುನಿರೀಕ್ಷಿತ ‘ಜೈ ಲವ–ಕುಶ’ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಜ್ಯೂ.ಎನ್‌ಟಿಆರ್‌ ಅವರ ಹುಟ್ಟುಹಬ್ಬದಂದು (ಮೇ 20) ಬಿಡುಗಡೆಯಾಗಿರುವ ಪೋಸ್ಟರ್‌ಗಳನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದು ಪೋಸ್ಟರ್‌ನಲ್ಲಿ ಮಾಮೂಲಿನಂತೆ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಎನ್‌ಟಿಆರ್‌, ಮತ್ತೊಂದರಲ್ಲಿ ಕೋಳ ತೊಟ್ಟ ಕೈಗಳಿಂದ ನಮಸ್ಕಾರ ಮಾಡುವ ಭಂಗಿಯಲ್ಲಿದ್ದಾರೆ.

‘ಲವ–ಕುಶ’ ಹೆಸರಿಗೆ ತಕ್ಕಂತೆ ಅಣ್ಣತಮ್ಮಂದಿರ ಕತೆಯುಳ್ಳ ಚಿತ್ರ ಎನ್ನಲಾಗುತ್ತಿದೆ. ಚಿತ್ರದಲ್ಲಿ ಎನ್‌ಟಿಆರ್‌ ಸಹೋದರನ ಪಾತ್ರ ಯಾರು ನಿರ್ವಹಿಸುತ್ತಿದ್ದಾರೆಂಬುದು ಬಹಿರಂಗಗೊಂಡಿಲ್ಲ.

ರಾಶಿ ಖನ್ನಾ ಮತ್ತು ನಿವಿತಾ ಥಾಮಸ್ ಅವರು ಇಬ್ಬರು ನಾಯಕಿ ಪಾತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ಕೆ.ಎಸ್.ರವೀಂದ್ರ ನಿರ್ದೇಶಿಸುತ್ತಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಚಿತ್ರ ಖಳನಾಯಕನ ಪಾತ್ರದಲ್ಲಿ ಕನ್ನಡದ ದುನಿಯಾ ವಿಜಯ್ ಮಿಂಚಲಿರುವುದು ವಿಶೇಷ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT