ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಕಲ್ಪಿಸಿ

Last Updated 21 ಮೇ 2017, 19:30 IST
ಅಕ್ಷರ ಗಾತ್ರ

ಮೂಲಸೌಕರ್ಯ ಕಲ್ಪಿಸಿ
ಪೀಣ್ಯ ಬಳಿಯ ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿರುವ ಕಾಳಿಕಾನಗರದಲ್ಲಿ ರಸ್ತೆಗಳಿಗೆ ವರ್ಷಗಳಿಂದ ಡಾಂಬರು ಹಾಕಿಲ್ಲ. ಇನ್ನೇನು ಮಳೆಗಾಲ ಆರಂಭವಾಗುವ ಹಂತದಲ್ಲಿದೆ. ರಸ್ತೆಯ ಕೆಸರಿನಿಂದಾಗಿ ಜನರು ಓಡಾಡಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ರಸ್ತೆಗಳಿಗೆ ಡಾಂಬರು ಹಾಕಿಸಿಕೊಡಬೇಕಾಗಿ ವಿನಂತಿ.  ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕಾಗಿದೆ
–ನೊಂದ ನಾಗರಿಕರು, ಕಾಳಿಕಾನಗರ

ಕಾರ್ಯಕ್ರಮದ ಅವಧಿ ಹೆಚ್ಚಿಸಲಿ
ಆಕಾಶವಾಣಿಯ ಭಾರತೀಯ ಸಂಗೀತ ವಾಹಿನಿ ಅಮೃತವರ್ಷಿಣಿ ಕಾರ್ಯಕ್ರಮವನ್ನು ನಾನು ಬಹಳ ಇಷ್ಟಪಟ್ಟು ಕೇಳುತ್ತೇನೆ. ಇದರಲ್ಲಿ ಬೆಳಿಗ್ಗೆ ಮತ್ತು ಸಂಜೆ ಕೆಲವು ಅತ್ಯುತ್ತಮ ಹಿಂದೂಸ್ತಾನಿ – ಕರ್ನಾಟಕ ಸಂಗೀತ ವಿದ್ವಾಂಸರ ಸಂಗೀತ ಕಛೇರಿಗಳು ಬಹಳ ಚೆನ್ನಾಗಿರುತ್ತವೆ. ಇವು ಶ್ರೋತೃಗಳಿಗೆ ಬಹಳ ಪ್ರಿಯವಾಗಿ, ಆಸಕ್ತಿಯಿಂದ ಕೇಳುವಂತೆ ಮಾಡುತ್ತಿದೆ.

ಆದರೆ, ಬೆಳಿಗ್ಗೆ ಪ್ರಸಾರವಾಗುವ ನಾದಯೋಗ ಧ್ಯಾನ ಸಂಗೀತದಲ್ಲಿ ಪುನರಾವರ್ತನೆ ಜಾಸ್ತಿ. ಇದನ್ನು ಸರಿಪಡಿಸಿ ಅಮೂಲ್ಯ ಮಂತ್ರಗಳನ್ನು ಪ್ರಸಾರ ಮಾಡಬೇಕು. ಅದೇ ರೀತಿ ಗೀತಾರಾಧನೆ ಬೆಳಗಿನ ಕಾರ್ಯಕ್ರಮದಲ್ಲಿ ಅಪರೂಪದ ದೇವರ ನಾಮಗಳು, ವಚನಗಳ ಗಾಯನ  ಪ್ರಾತಃಕಾಲಕ್ಕೆ ಎಲ್ಲಾ ಶ್ರೋತೃಗಳಿಗೂ ಮಹದಾನಂದ ಹಾಗೂ ಕೇಳಿದವರಿಗೆ ಪೂರ್ಣ ಧನ್ಯತಾಭಾವ ಬರುವ ರೀತಿಯಲ್ಲಿ ಈ ಕಾರ್ಯಕ್ರಮ ಪ್ರತಿದಿನ ಮೂಡಿಬರಬೇಕು.

ಈಗ ಕಿರಿಯ ಕಲಾವಿದರೂ ಸಹ ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದಾರೆ. ಇಂತಹವರನ್ನು ಆಹ್ವಾನಿಸಿ ಕಾರ್ಯಕ್ರಮ  ರೂಪಿಸಲಿ. ಇನ್ನು ಸಂಜೆಯ ಕಾರ್ಯಕ್ರಮಗಳಲ್ಲಿ ಅಪರೂಪವಾಗುತ್ತಿರುವ ಕಥಾ ಕಾಲಕ್ಷೇಪ ಮತ್ತು ಗಮಕ ಕಾರ್ಯಕ್ರಮಗಳಿಗೂ ಸ್ಥಾನ ಸಿಗಲಿ. ಹಿಂದಿನ ಪ್ರಸಿದ್ಧ ಕೀರ್ತನಕಾರರ ಕಥಾ ಕಾಲಕ್ಷೇಪ (ಹರಿಕಥೆ) ಧ್ವನಿ ಸುರುಳಿಗಳು ಲಭ್ಯವಿದ್ದರೆ, ಅದನ್ನು ಪ್ರಸಾರ ಮಾಡಿದರೆ ಶ್ರೋತೃಗಳಿಗೆ ಮಹದಾನಂದವಾಗುತ್ತದೆ. ಸಂಬಂಧಪಟ್ಟವರು ಇತ್ತ ಗಮನಿಸಲಿ.
– ಎ.ಕೆ.ಆನಂದಮೂರ್ತಿ, ನಾಗೇಂದ್ರ ಬ್ಲಾಕ್‌

ವಿಧಾನಸೌಧ ಕಂಗೊಳಿಸುವಂತೆ ಮಾಡಿ
ಪ್ರತಿದಿನ ಲಕ್ಷಾಂತರ ಸಾರ್ವಜನಿಕರು, ಪ್ರವಾಸಿಗರು ವಿಧಾನಸೌಧ ನೋಡಲು ಬರುತ್ತಿರುತ್ತಾರೆ. ಆದರೆ ಅಲ್ಲಿ  ವಿಧಾನಸೌಧ ಅದೇ ಎಂದು ಗೊತ್ತಾಗುವ ಯಾವುದೇ ದೊಡ್ಡ ಬೋರ್ಡ್‌ ಇಲ್ಲ. ಹೀಗಾಗಿ ವಿಧಾನಸೌಧದ ಮುಂದೆ ನಾಮಫಲಕ ಆಳವಡಿಸಬೇಕು.

ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಈ  ಮೂರು ಭಾಷೆಯಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ವಿಧಾನಸೌಧ ಎಂಬ ಬೋರ್ಡ್‌ ನೇತು ಹಾಕಿದರೆ ಎಲ್ಲರಿಗೂ ಬೇಗ ಗೊತ್ತಾಗುತ್ತದೆ. ಇನ್ನು ಲಾಲ್‌ಬಾಗ್‌ ಪ್ರವೇಶದ್ವಾರದಲ್ಲಿರುವಂತೆ  ಅದನ್ನು ಡಿಜಿಟಲೀಕರಣ ಮಾಡಿದರೆ  ಇನ್ನಷ್ಟು ಉತ್ತಮ. ಇದರಿಂದ ವಿಧಾನಸೌಧಕ್ಕೆ ಮತ್ತಷ್ಟು ಮೆರುಗು ಬರಲಿದೆ. ಸಂಬಂಧಪಟ್ಟವರು ಈ ಬಗ್ಗೆ ಯೋಚಿಸಲಿ.
– ಮೋಹನ್‌ರಾವ್‌ ಮುಸಲೆ, ನಂದಿನಿ ಲೇಔಟ್‌

ಅಂಚೆಪೆಟ್ಟಿಗೆ ಬಂತು: ಅಭಿನಂದನೆಗಳು
ಮೇ 1ರ ಪ್ರಜಾವಾಣಿಯ ‘ಮೆಟ್ರೊ’ದಲ್ಲಿ ‘ಕುಂದು ಕೊರತೆ’ ವಿಭಾಗದಲ್ಲಿ ಪ್ರಕಟವಾಗಿದ್ದ ‘ಅಂಚೆಪೆಟ್ಟಿಗೆ ಅಳವಡಿಸಿ’ ಶೀರ್ಷಿಕೆಯ ಲೇಖನಕ್ಕೆ ಸ್ಪಂದಿಸಿದ ಅಂಚೆ ಇಲಾಖೆಯ ಅಧಿಕಾರಿಗಳು ಬಿ.ಕೆ. ಸರ್ಕಲ್‌ನಲ್ಲಿ ಅಂಚೆ ಪೆಟ್ಟಿಗೆಯನ್ನು ಅಳವಡಿಸಿ ಪತ್ರ ವ್ಯವಹಾರಸ್ಥರಿಗೆ ಅನುಕೂಲ ಮಾಡಿರುತ್ತಾರೆ. ನಮ್ಮ ಈ ಸಮಸ್ಯೆಯನ್ನು ಪ್ರಕಟಿಸಿದ ‘ಪ್ರಜಾವಾಣಿ ಮೆಟ್ರೊ’ಗೆ ಹಾಗೂ ಅಂಚೆ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಿಗೆ ನನ್ನ ಅಭಿನಂದನೆಗಳು.
–ವಿ. ಹೇಮಂತಕುಮಾರ್, ಜೆ.ಪಿ.ನಗರ 8ನೇ ಹಂತ

ಕುಂದುಕೊರತೆಗೆ ನೀವೂ ಬರೆಯಿರಿ
ನಮ್ಮ ವಿಳಾಸ: ಸಂಪಾದಕರು, ಪ್ರಜಾವಾಣಿ,  ‘ಕುಂದು–ಕೊರತೆ’ ವಿಭಾಗ. ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560001. ಇ–ಮೇಲ್‌: metropv@prajavani.co.in,  ವಾಟ್ಸ್‌ಆ್ಯಪ್‌–9513322931

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT