ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಪೂರಕ...

Last Updated 21 ಮೇ 2017, 19:30 IST
ಅಕ್ಷರ ಗಾತ್ರ

ಹೊಸ ತೆರಿಗೆ ವ್ಯವಸ್ಥೆಯು ದೇಶದಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು  ಬಲಪಡಿಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಸಹಕಾರ ವೃದ್ಧಿಸಲಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ, ಸರ್ಕಾರದ ಹಣಕಾಸು ಮತ್ತು ಬಾಹ್ಯ ಸ್ಪರ್ಧಾತ್ಮಕತೆ ಹೆಚ್ಚಿಸಲಿದೆ.

ರಾಜ್ಯ ಸರ್ಕಾರಗಳು, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡದೆ  ವರಮಾನ ವೃದ್ಧಿಸುವ ಹಾದಿಗೆ ಮರಳಲು ಈ ವ್ಯವಸ್ಥೆ ಅತ್ಯುತ್ತಮವಾಗಿದೆ.

ಜಿಎಸ್‌ಟಿಎನ್‌: ಸರಕು ಮತ್ತು ಸೇವಾ ತೆರಿಗೆ ಸಂಪರ್ಕ ಜಾಲವು (ಜಿಎಸ್‌ಟಿಎನ್‌), ತೆರಿಗೆ ವ್ಯವಸ್ಥೆಯ ವ್ಯಾಪ್ತಿಗೆ ಒಳಪಡುವ ಎಲ್ಲರಿಗೂ ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯ ಕಲ್ಪಿಸಿಕೊಡಲಿದೆ.

‘ಜಿಎಸ್‌ಟಿಎನ್‌’, ದೇಶದ ಅತಿದೊಡ್ಡ  ತೆರಿಗೆ ಸುಧಾರಣಾ ಕ್ರಮದ ಬೆನ್ನೆಲುಬು ಆಗಿ ಕಾರ್ಯನಿರ್ವಹಿಸಲಿದೆ. ತೆರಿಗೆದಾರರು ‘ಜಿಎಸ್‌ಟಿಎನ್‌’ಗೆ ನೋಂದಾಯಿಸಿಕೊಳ್ಳುವ ಪ್ರಕ್ರಿಯೆಗೆ  ಜೂನ್‌ 1ರಿಂದ ಮತ್ತೆ ಚಾಲನೆ ನೀಡಲಾಗುತ್ತಿದೆ.

84 ಲಕ್ಷ ತೆರಿಗೆದಾರರ ಪೈಕಿ ಮೊದಲ ಹಂತದಲ್ಲಿ 60.5 ಲಕ್ಷದಷ್ಟು ತೆರಿಗೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಜೂನ್‌ 1ರಿಂದ 15 ದಿನಗಳವರೆಗೆ  ನೋಂದಣಿ ಪ್ರಕ್ರಿಯೆ ನಡೆಯಲಿದೆ.

62 ಸಾವಿರ ತೆರಿಗೆ ಅಧಿಕಾರಿಗಳ ಪೈಕಿ ಇದುವರೆಗೆ 24 ಸಾವಿರ ಅಧಿಕಾರಿಗಳಿಗೆ ಈ ಸಂಬಂಧ ಸಮಗ್ರ ಸ್ವರೂಪದ ತರಬೇತಿ ನೀಡಲಾಗಿದೆ.  ಜೂನ್‌ 15ರಿಂದ ಉಳಿದ ಅಧಿಕಾರಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ.

‘ಜಿಎಸ್‌ಟಿಎನ್‌’ ಅಭಿವೃದ್ಧಿಪಡಿಸಿರುವ  ನೋಂದಣಿ, ಪಾವತಿ ಮತ್ತು ರಿಟರ್ನ್ಸ್‌ ಮಾದರಿಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಪ್ರಾಯೋಗಿಕ ಪರೀಕ್ಷೆ: ‘ಜಿಎಸ್‌ಟಿಎನ್‌’, ಜಿಎಸ್‌ಟಿ ಸಾಫ್ಟ್‌ವೇರ್‌ನ ಕಾರ್ಯನಿರ್ವಹಣೆಯನ್ನು  ಈ ತಿಂಗಳ 2 ರಿಂದ 16ರವರೆಗೆ ಪ್ರಾಯೋಗಿಕವಾಗಿ
ಪರೀಕ್ಷಿಸಲಾಗಿದೆ.

ಹೊಸ ವ್ಯವಸ್ಥೆ ಕಾರ್ಯನಿರ್ವಹಿಸುವ ಬಗ್ಗೆ  ತೆರಿಗೆ ಪಾವತಿದಾರರಿಗೆ ಇಲ್ಲಿ ಪ್ರಾಯೋಗಿಕ ಅನುಭವ ದೊರೆಯುತ್ತಿದೆ. ಬ್ಯಾಂಕ್‌ಗಳು, ಲೆಕ್ಕಪತ್ರ ಸಂಸ್ಥೆಗಳೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ.  ಇದೊಂದು ಬಗೆಯಲ್ಲಿ ರಂಗತಾಲೀಮು ರೀತಿಯಲ್ಲಿ ನಡೆಯುತ್ತಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿನ ಅನುಭವ ಆಧರಿಸಿ ಅಗತ್ಯ ಬಿದ್ದರೆ ಜಿಎಸ್‌ಟಿ ಸಾಫ್ಟ್‌ವೇರ್‌ನಲ್ಲಿ ಅಗತ್ಯ ಬದಲಾವಣೆ ತರಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT