ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಜೋಡಿಸಿದ ಐಫೋನ್‌ ಮಾರುಕಟ್ಟೆಗೆ

Last Updated 21 ಮೇ 2017, 19:40 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದ ತಂತ್ರಜ್ಞಾನ ದೈತ್ಯ  ಕಂಪೆನಿ ಆ್ಯಪಲ್‌, ಭಾರತದಲ್ಲಿ ಪ್ರಾಯೋಗಿಕವಾಗಿ ಜೋಡಣೆ ಮಾಡಿದ ಐಫೋನ್‌ಗಳ ಮಾರಾಟ ಆರಂಭಿಸಿದೆ.

ಸೀಮಿತ ಸಂಖ್ಯೆಯ  ‘ಐಫೋನ್‌ ಎಸ್ಇ’ಗಳನ್ನು  ದೇಶದ ಆಯ್ದ ಮಳಿಗೆಗಳಲ್ಲಿ  ಮಾತ್ರ ಮಾರಾಟ ಮಾಡಲಾಗುವುದು ಎಂದು ಉದ್ಯಮದ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಆ್ಯಪಲ್‌ ಯಾವುದೇ ಸ್ಪಷ್ಟನೆ ವಿವರಣೆ ನೀಡಿಲ್ಲ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಿನ್ಯಾಸ ಮಾಡಿದ ಮತ್ತು ಭಾರತದಲ್ಲಿ ಜೋಡಣೆ ಮಾಡಿದ ಫೋನ್‌ ಎಂದು ಬಾಕ್ಸ್‌ ಮೇಲೆ ಮುದ್ರಿಸಲಾಗಿದೆ. 32 ಜಿ.ಬಿ ಸಂಗ್ರಹಣಾ ಸಾಮರ್ಥ್ಯದ ಐಫೋನ್‌ ಎಸ್‌ಇ ಬೆಲೆ ₹27,800 ಎಂದು ನಮೂದಿಸಲಾಗಿದೆ.

ಬೆಂಗಳೂರು ಘಟಕದಲ್ಲಿ ಏಪ್ರಿಲ್‌ನಲ್ಲಿ ಈ ಫೋನ್‌ಗಳ ಜೋಡಣಾ ಕಾರ್ಯ ಮುಗಿದಿದೆ ಎಂದು ಮೂಲಗಳು ತಿಳಿಸಿವೆ.

ಆ್ಯಪಲ್‌ ತನ್ನ ಬಹು ಜನಪ್ರಿಯ 4 ಇಂಚು ಪರದೆಯ ‘ಐಫೋನ್‌ ಎಸ್‌ಇ’ಗಳ ಪ್ರಾಯೋಗಿಕ ಜೋಡಣೆಗೆ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಕೆಲವು ದಿನಗಳ ಹಿಂದೆ ಚಾಲನೆ ನೀಡಿತ್ತು.

ಸಣ್ಣ ಪ್ರಮಾಣದಲ್ಲಿ ಜೋಡಣೆ ಆರಂಭಿಸಿದ್ದ ಕಂಪೆನಿ, ಈ ತಿಂಗಳ ಒಳಗೆ ದೇಶಿ ಮಾರುಕಟ್ಟೆಗೆ ಮೊಬೈಲ್‌ ಬಿಡುಗಡೆ ಮಾಡುವುದಾಗಿಯೂ ಹೇಳಿತ್ತು. ಆ್ಯಪಲ್‌ ಸಂಸ್ಥೆ ಪರವಾಗಿ ತೈವಾನಿನ  ವಿಸ್ಟ್ರನ್‌ ಈ ಫೋನ್‌ ತಯಾರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT