ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ಗೆದ್ದರೂ ಸಿಗದ ಅಧಿಕಾರ

Last Updated 22 ಮೇ 2017, 5:39 IST
ಅಕ್ಷರ ಗಾತ್ರ

ವಾಡಿ: ಪಟ್ಟಣದ ಪುರಸಭೆಗೆ ಚುನಾವಣೆ ಮುಗಿದು ಇಂದಿಗೆ 42 ದಿನಗಳು ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ  ಪ್ರಕಟವಾಗಿಲ್ಲ. ಹೀಗಾಗಿ ಸದಸ್ಯರಿಗೆ ಇನ್ನೂ ಪುರಸಭೆ ಪ್ರವೇಶ ಸಾಧ್ಯವಾಗಿಲ್ಲ.

ಪುರಸಭೆಯ 23 ವಾರ್ಡ್‌ಗಳಿಗೆ ಏ. 7ರಂದು ಚುನಾವಣೆ ನಡೆದು 9ರಂದು ಫಲಿತಾಂಶ ಪ್ರಕಟವಾಗಿದೆ. ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ದಿನದಿಂದ ಅವರ ಸದಸ್ಯತ್ವ ಅವಧಿ ಆರಂಭವಾಗುತ್ತದೆ. ಆದರಿಂದ ವಿಜೇತರು ಇನ್ನೂ ಕೇವಲ ನಾಮಕಾವಸ್ಥೆ ಸದಸ್ಯರಾಗಿ ಮಾತ್ರ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ 13 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ  6 ಸ್ಥಾನ, ನಾಲ್ವರುಪಕ್ಷೇತರರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮೀಸಲಾತಿ ಪ್ರಕಟಣೆಗೆ ಕಾಯುತ್ತಿದ್ದಾರೆ. ಮೀಸಲಾತಿ ಪ್ರಕಟಗೊಳ್ಳದ ಕಾರಣ ಆಯ್ಕೆಗೊಂಡಿರುವ ಸದಸ್ಯರು ವಾರ್ಡ್‌­ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊ­ಳ್ಳಲು ಸಾಧ್ಯವಾಗುತ್ತಿಲ್ಲ. ವಾರ್ಡ್‌ನ ನಾಗರಿಕರು ಸೌಲಭ್ಯಕ್ಕಾಗಿ ಸದಸ್ಯರಲ್ಲಿ ಮನವಿ ಸಲ್ಲಿಸಿದ್ದರೂ ಪ್ರಯೋಜನ ವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೀಸಲಾತಿ ಪ್ರಕಟವಾಗದ ಕಾರಣ ಸೇಡಂನ ಸಹಾಯಕ ಆಯುಕ್ತರು ಪುರಸಭೆ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು , ಇದರಿಂದ ಪ್ರತಿಯೊಂದು ತೀರ್ಮಾನ ಹಾಗೂ ಅಂಕಿತಕ್ಕೆ ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

* * 

ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಮೀಸಲಾತಿ ಪ್ರಕಟಗೊಳ್ಳದ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸದಸ್ಯರು  ಜನರ ಸಮಸ್ಯೆಗಳಿಗೆ ಸ್ಪಂದಿಸದಂತಾಗಿದೆ
ವೀರಣ್ಣ ಯಾರಿ
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT