ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳ ಸಾರ, ಬದುಕಿಗೆ ಆಧಾರ

ಬಸವಮಂದಿರದ ಜಯಬಸವಾನಂದ ಸ್ವಾಮೀಜಿ ಹೇಳಿಕೆ
Last Updated 22 ಮೇ 2017, 5:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಸವಾದಿ ಶರಣರ ಪ್ರತಿಯೊಂದು ವಚನಗಳೂ ಅಣಿಮುತ್ತು ಗಳು. ಅವುಗಳಿಂದ ಕನ್ನಡ ಭಾಷೆಗೆ ವಿಶ್ವ ಮಾನ್ಯತೆ ದೊರೆತಿದೆ ಎಂದು ವಿರಕ್ತಮಠ ಬಸವಮಂದಿರದ ಜಯಬಸವಾನಂದ ಸ್ವಾಮೀಜಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಂಭಕ ಸಾಂಸ್ಕಂತಿಕ ಪ್ರತಿಷ್ಠಾನದ ಸಹಯೋಗದಲ್ಲಿ ನಗರ ಹೊರವಲಯದ ಬಸವಮಂದಿರದಲ್ಲಿ  ಈಚೆಗೆ ಏರ್ಪ ಡಿಸಿದ್ದ ಎ.ಎಂ.ಬಸವೇಗೌಡ ಮತ್ತು ಚಿಕ್ಕಬಸಪ್ಪ, ನಾಗಮ್ಮ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಚನ ಸಾಹಿತ್ಯವು ಕನ್ನಡ ಭಾಷೆ ಯನ್ನು ಶ್ರೀಮಂತಗೊಳಿಸಿದೆ. ಸುಲಭ ವಾಗಿ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಚನಗಳನ್ನು ಕಟ್ಟಿಕೊಟ್ಟಿದ್ದಾರೆ. ಶರಣರ ಅನುಭವಗಳು ಮತ್ತು ತತ್ವಗಳು ಅವುಗಳಲ್ಲಿ ಅಡಕವಾಗಿವೆ. ಇಂದಿನ ಎಲ್ಲ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ ಇದೆ ಎಂದು ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕುಂದೂರು ಅಶೋಕ್  ಮಾತನಾಡಿ, ‘ಮಾತು ಮತ್ತು ಕೃತಿಯನ್ನು ಬದುಕಿನಲ್ಲಿ ಸಮನ್ವಯಗೊಳಿಸಿ ಕೊಂಡರೆ ಜೀವನಕ್ಕೊಂದು ಅರ್ಥ ಮತ್ತು ಘನತೆ ಬರುತ್ತದೆ. ಕಾಯಕದಿಂದ ಕೈಲಾಸ ಕಾಣಬೇಕೇ ಹೊರತು ಕೈಲಾಸ ಕಾಣುವುದೇ ಕಾಯಕವಾಗಬಾರದು’ ಎಂದು ಹೇಳಿದರು.

ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಸಾಹಿತಿ ಶೃಂಗೇರಿ ಶಿವಣ್ಣ ಅವರಿಗೆ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ (ಕನ್ನಡ ಮಾಧ್ಯಮ) ಹೆಚ್ಚು ಅಂಕ ಗಳಿಸಿದ ಕೊಪ್ಪ ಸದ್ಗುರು ಪ್ರೌಢಶಾಲೆಯ ಜಿ.ಆರ್. ಕಾರ್ತಿಕ್, ದ್ವಿತೀಯ ಪಿಯುನಲ್ಲಿ (ಕನ್ನಡ ಮಾಧ್ಯಮ) ಹೆಚ್ಚು ಅಂಕ ಗಳಿಸಿದ ಯಗಟಿ ಸರ್ಕಾರಿ ಪದವಿಪೂರ್ವ ಕಾಲೇ ಜಿನ ಪಿ.ಎಂ.ಅಶ್ವಿನಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹಧನ ನೀಡಲಾಯಿತು.

ಐಡಿಎಸ್‌ಜಿ ಕಾಲೇಜಿನ ಪ್ರೊ.ಎಚ್. ಎಂ.ಮಹೇಶ್ ಅವರು ‘ಬಸವಣ್ಣನವರ ವಚನದಲ್ಲಿ ಸಾಮರಸ್ಯದ ನೆಲೆಗಳು’ ಹಾಗೂ ಸಾಹಿತಿ ಹೊಸೂರು ಪುಟ್ಟರಾಜು ಅವರು ‘ವಚನ ಸಾಹಿತ್ಯದಲ್ಲಿ ಕಾಯಕ ಪ್ರಜ್ಞೆ ಮತ್ತು ಸಹಜೀವನ’ ಕುರಿತು ಉಪನ್ಯಾಸ ನೀಡಿದರು.

ಯಗಟಿ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ರಾಜಣ್ಣ, ಸಾಹಿತಿ ಬೆಳವಾಡಿ ಮಂಜುನಾಥ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕ್ಯಾತನಬೀಡು ರವೀಶ್ ಬಸಪ್ಪ, ಸೂರಿಪ್ರಭು, ಲೋಕೇಶಪ್ಪ, ಎಚ್.ಬಿ.ಸುರೇಶ್, ರಮೇಶ್ ಬೊಂಗಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT