ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಂಡಿಯಲ್ಲಿ ರದ್ದಾದ ಹಳೇ ನೋಟುಗಳು ಪತ್ತೆ

Last Updated 22 ಮೇ 2017, 6:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಸಿದ್ಧಾರೂಢಸ್ವಾಮಿ ಮಠದ ಕಾಣಿಕೆ ಪೆಟ್ಟಿಗೆಯಲ್ಲಿ ರದ್ದಾದ ಹಳೇ ನೋಟುಗಳು ಪತ್ತೆಯಾಗಿವೆ. ಮಠದ ಟ್ರಸ್ಟ್‌ನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಇದೇ 17ರಂದು ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಎಣಿಕೆ ಮಾಡುವಾಗ ₹1000ದ 15 ನೋಟುಗಳು ಮತ್ತು ₹500ರ 12 ಹಳೇ ನೋಟುಗಳು ಪತ್ತೆಯಾಗಿವೆ.

32 ದಿನದಲ್ಲಿ ₹14.23 ಲಕ್ಷ ಸಂಗ್ರಹವಾಗಿದ್ದು, ₹6,840 ಮೌಲ್ಯದ ಚಿನ್ನ–ಬೆಳ್ಳಿ ಪದಾರ್ಥಗಳು ಅದರಲ್ಲಿ ಇದ್ದವು. ಟ್ರಸ್ಟ್‌ ಅಧ್ಯಕ್ಷ ಧರಣೇಂದ್ರ ಜವಳಿ, ಉಪಾಧ್ಯಕ್ಷರಾದ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಎಸ್.ಜಿ. ಗೀತಾ, ಹಣಕಾಸು ಉಪ ಸಮಿತಿ ಕಾರ್ಯಾಧ್ಯಕ್ಷ ವೈ.ಎ. ದೊಡ್ಡಮನಿ, ಧರ್ಮದರ್ಶಿ ಎನ್.ಟಿ. ಮೆಹರವಾಡೆ, ಮಹೇಂದ್ರ ಸಿಂಘಿ, ವಾಸುದೇವ ಸಿದ್ದಪ್ಪ ಘೋಡಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT