ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎವರೆಸ್ಟ್‌ನಲ್ಲಿ ನಾಪತ್ತೆಯಾಗಿದ್ದ ಭಾರತೀಯ ಪರ್ವತಾರೋಹಿಯ ಮೃತದೇಹ ಪತ್ತೆ

Last Updated 22 ಮೇ 2017, 13:51 IST
ಅಕ್ಷರ ಗಾತ್ರ

ಕಾಠ್ಮಂಡು: ಎವರೆಸ್ಟ್ ಚಾರಣದ ವೇಳೆ ನಾಪತ್ತೆಯಾಗಿದ್ದ ಭಾರತೀಯ ಯುವಕ ರವಿಕುಮಾರ್ (27) ಅವರ ಮೃತದೇಹ ಪತ್ತೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ರವಿಕುಮಾರ್ ಉತ್ತರಪ್ರದೇಶದ ಮೊರಾದಾಬಾದ್‌ನವರು.

ಪರ್ವತಾರೋಹಣ ಮಾಡಿ ವಾಪಸಾಗುತ್ತಿದ್ದ ವೇಳೆ ಶನಿವಾರ ಅವರು ಸಹಚರಿಂದ ಸಂಪರ್ಕ ಕಡಿದುಕೊಂಡಿದ್ದರು. ಸುಮಾರು 200 ಅಡಿ ಪ್ರಪಾತಕ್ಕೆ ಕುಸಿದು ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದಾರೆ.

8,200 ಅಡಿ ಎತ್ತರದ ‘ಬಾಲ್ಕನಿ’ ಎಂದೇ ಪ್ರಸಿದ್ಧಗೊಂಡಿರುವ (ಈ ಪ್ರದೇಶವನ್ನು ಡೆತ್‌ ಝೋನ್ ಎಂದೂ ಕರೆಯಲಾಗುತ್ತಿದೆ) ಪ್ರದೇಶದಲ್ಲಿ ಅವರು ಪ್ರಪಾತಕ್ಕೆ ಬಿದ್ದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ನಿರ್ದೇಶಕ ದಿನೇಶ್ ಭಟ್ಟಾರಾಯ್ ತಿಳಿಸಿದ್ದಾರೆ. ರವಿಕುಮಾರ್ ಅವರ ಪರ್ವತಾರೋಹಣ ಮಾರ್ಗದರ್ಶಕ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೊಂಗ್ಯಾ ಶೆರ್ಪಾ ಅವರನ್ನು ರಕ್ಷಿಸಲಾಗಿದೆ.

ಸಂಪರ್ಕ ಕಡಿದುಕೊಂಡು 24 ಗಂಟೆ ಕಳೆದರೂ ಪತ್ತೆಯಾಗದಿರುವುದರಿಂದ ರವಿಕುಮಾರ್ ಮೃತಪಟ್ಟಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ನೇಪಾಳ ಪರ್ವತಾರೋಹಿಗಳ ಸಂಘಟನೆಯ ಅಧ್ಯಕ್ಷ ಆಂಗ್ ಶೆರಿಂಗ್ ಶೆರ್ಪಾ ಅಭಿಪ್ರಾಯಪಟ್ಟಿದ್ದರು.

ರವಿಕುಮಾರ್ ಸಾವಿನೊಂದಿಗೆ ಎವರೆಸ್ಟ್ ಪರ್ವತಾರೋಹಣದ ವೇಳೆ ಇತ್ತೀಚೆಗೆ ಮೃತಪಟ್ಟ ಪರ್ವತಾರೋಹಿಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. 1953ರ ನಂತರ ಇದುವರೆಗೆ ಎವರೆಸ್ಟ್ ಪರ್ವತಾರೋಹಣದ ವೇಳೆ ಒಟ್ಟು 300 ಜನ ಮೃತಪಟ್ಟಿದ್ದಾರೆ. ಸುಮಾರು 200 ಮೃತದೇಹಗಳು ಇದುವರೆಗೆ ಪತ್ತೆಯಾಗಿಲ್ಲ ಎಂದು ಮೂಲಗಳು ಅಂದಾಜಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT