ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಗೆ 12ನೇ ಸ್ಥಾನ

Last Updated 22 ಮೇ 2017, 18:14 IST
ಅಕ್ಷರ ಗಾತ್ರ

ಮಾಸ್ಕೊ : ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಹರಿಕೃಷ್ಣ ಮಾಸ್ಕೊ ಫಿಡೆ ಗ್ರ್ಯಾನ್ ಪ್ರಿ ಚೆಸ್ ಟೂರ್ನಿಯಲ್ಲಿ 12ನೇ ಸ್ಥಾನ ಗಳಿಸಿದ್ದಾರೆ.
ಸೋಮವಾರ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಹರಿಕೃಷ್ಣ ಗ್ರ್ಯಾಂಡ್‌ ಮಾಸ್ಟರ್‌ ತೈಮೂರ್‌ ರಾಜಬೊವ್ ಎದುರು ಡ್ರಾ ಮಾಡಿಕೊಂಡರು.

ಬಿಳಿ ಕಾಯಿಗಳೊಂದಿಗೆ ಆಡಿದ ಭಾರತದ ಆಟಗಾರ ಉತ್ತಮ ಆರಂಭ ಪಡೆದರು. ಆದರೆ ಕೊನೆಯಲ್ಲಿ ಅನಗತ್ಯ ತಪ್ಪು ಮಾಡಿದ್ದರಿಂದ ಗೆಲುವು ಅವರ ಕೈತಪ್ಪಿತು. ವಿಶ್ವ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಹರಿಕೃಷ್ಣ 29ನೇ ನಡೆಯಲ್ಲಿ ಡ್ರಾಗೆ ಸಮ್ಮತಿಸಿದರು.

ಒಂಬತ್ತು ಸುತ್ತುಗಳಲ್ಲಿ ಹರಿಕೃಷ್ಣ 4.5 ಪಾಯಿಂಟ್ಸ್ ಪಡೆಯುವ ಮೂಲಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿ ತಮ್ಮ ಸವಾಲು ಕೊನೆಗೊಳಿಸಿದ್ದಾರೆ. 10 ಗ್ರ್ಯಾನ್‌ ಪ್ರಿ ಪಾಯಿಂಟ್ಸ್‌ಗಳನ್ನು ತಮ್ಮ ದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT