ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ಟೋಬರ್‌ನಲ್ಲಿ ನಮ್ ಮದ್ವೆ’

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಬಹಳ ದಿನದಿಂದ ಮದುವೆಯಾಗ್ತೀವಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ನಾಗಚೈತನ್ಯ ಮತ್ತು ಸಮಂತಾ ಕೊನೆಗೂ ತಮ್ಮ ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಅಕ್ಟೋಬರ್‌ನಲ್ಲಿ ಮದುವೆ ನಿಶ್ಚಯವಾಗಿದೆ’ ಎಂದು ಮಾಹಿತಿ ನೀಡಿದ ನಾಗಚೈತನ್ಯ. ‘ಗೋವಾದಲ್ಲಿ ‘ಡೆಸ್ಟಿನೇಶನ್ ವೆಡ್ಡಿಂಗ್’ ಮಾಡಿಕೊಳ್ಳುವ ಆಸೆ ಇದೆ. ಜೊತೆ ನಮ್ಮ ಮತ್ತು ಸಮಂತಾ ಮನೆಯ ಸಂಪ್ರದಾಯದಂತೆ ಮದುವೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು ನಾಗಚೈತನ್ಯ.

ಅಕ್ಟೋಬರ್ ಮೊದಲ ವಾರದಲ್ಲಿ ಗೋವಾಗೆ ಹಾರಲಿರುವ ಜೋಡಿ ಅಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಲು ತುಂಬಾ ಉತ್ಸುಕರಾಗಿದ್ದಾರೆ. ಕುಟುಂಬ ಮತ್ತು ಗೆಳೆಯರೊಂದಿಗೆ ಗೋವಾ ಡೆಸ್ಟಿನೇಶನ್ ವೆಡ್ಡಿಂಗ್ ಜೊತೆಗೆ, ಹೈದರಾಬಾದ್‌ನಲ್ಲೂ ಆರತಾಕ್ಷತೆ ಇಟ್ಟುಕೊಳ್ಳಲಿದ್ದಾರೆ.

ಯಾವುದೋ ಒಂದು ವಿಶೇಷ ಸ್ಥಳಕ್ಕೆ ಹೋಗಿ ಮದುವೆಯಾಗುವ ಟ್ರೆಂಡ್‌ ಈಗ ಹೆಚ್ಚುತ್ತಿದೆ. ಸಮಂತಾ ನಾಗ ಚೈತನ್ಯ ಕೂಡ ಗೋವಾವನ್ನು ತಮ್ಮ ಡೆಸ್ಟಿನೇಶನ್‌ ವೆಡ್ಡಿಂಗ್‌ ಸ್ಥಳವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT