ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಶಾಖೆ ಬೇಕು

Last Updated 22 ಮೇ 2017, 19:30 IST
ಅಕ್ಷರ ಗಾತ್ರ
ಶಿರಾ ತಾಲ್ಲೂಕಿನ ಬರಗೂರು ಸಮೀಪದ ದೊಡ್ಡಬಾಣಗೆರೆ ಗ್ರಾಮ, ಆಂಧ್ರಪ್ರದೇಶ ಗಡಿಭಾಗಕ್ಕೆ ಹೊಂದಿಕೊಂಡಿದ್ದು ರಾಜ್ಯದ ಕಟ್ಟ ಕಡೆಯ ಪ್ರದೇಶವಾಗಿದೆ. ಈ ಗ್ರಾಮ, ಹತ್ತು ಹಳ್ಳಿಗಳಿಂದ ಕೂಡಿದ ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ.
 
ನಮ್ಮೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಇದ್ದು ಗ್ರಾಮದಲ್ಲಿ ಒಟ್ಟು ಜನಸಂಖ್ಯೆ 2,400 ಇದೆ. ಇಲ್ಲಿ ರೈತರು, ಹಾಲಿನ ಡೇರಿ ಗ್ರಾಹಕರು, ಬೀಡಿ ಕಾರ್ಮಿಕರು, ಕೂಲಿ ಕಾರ್ಮಿಕರು, ಸ್ತ್ರೀ ಶಕ್ತಿ ಸ್ವ–ಸಹಾಯ ಸಂಘಗಳ ಸದಸ್ಯರು, ಪುರುಷ ಸ್ವ–ಸಹಾಯ ಸಂಘಗಳವರು ಗಣನೀಯ ಆರ್ಥಿಕ ವಹಿವಾಟು ನಡೆಸುತ್ತಿದ್ದಾರೆ.
 
ಅವರ ದೈನಂದಿನ ಜೀವನಕ್ಕೆ ಆರ್ಥಿಕ ವಹಿವಾಟು ನಡೆಸಲು 14–15 ಕಿ.ಮೀ. ದೂರವಿರುವ ಬರಗೂರು ಗ್ರಾಮದ ಬ್ಯಾಂಕ್‌ಗೆ ಹೋಗಬೇಕು. ಬರಗೂರಿಗೆ ಹೋಗಿ ಬರಲು ಹೆಚ್ಚಿನ ಬಸ್‌ ಸೌಕರ್ಯ ಇಲ್ಲ. ರೈತರು, ವೃದ್ಧರು, ವಿದ್ಯಾರ್ಥಿಗಳು, ದಿನಗಟ್ಟಲೆ ಬ್ಯಾಂಕ್‌ಗೆ ಅಲೆದಾಡುವಂತಾಗಿದೆ. 
 
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಗಮನಹರಿಸಿ ದೊಡ್ಡಬಾಣಗೆರೆ ಗ್ರಾಮದಲ್ಲಿ ಯಾವುದಾದರೂ ಬ್ಯಾಂಕ್‌ ಶಾಖೆ ತೆರೆದು ಜನರ ಬವಣೆ ನೀಗಿಸಬೇಕಿದೆ.
ಈ. ತಿಪ್ಪೇಸ್ವಾಮಿ, ದೊಡ್ಡಬಾಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT