ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಣೆ ತಂಡದ ಸಾಧನೆ ತೃಪ್ತಿಕರ’

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್ : ‘ಫೈನಲ್‌ ಪಂದ್ಯದಲ್ಲಿ ಮುಂಬೈ ಬೌಲರ್‌ಗಳ ಉತ್ತಮ ಆಟದಿಂದಾಗಿ ನಮಗೆ ಗೆಲುವು ಕೈಗೂ ಡಲಿಲ್ಲ. ಆದರೂ ನಮ್ಮ  ತಂಡದ ಸಾಧ ನೆಯು ತೃಪ್ತಿ ತಂದಿದೆ’ ಎಂದು ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.

ಪಂದ್ಯದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ನಾಯಕ ಸ್ಮಿತ್ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಅವರು ಕೊನೆಯ ಓವರ್‌ನಲ್ಲಿ  ಔಟಾಗದೇ ಹೋಗಿದ್ದರೆ    ಬೇರೆಯದ್ದೇ ಕಥೆಯಾಗಿ ರುತ್ತಿತ್ತು.  ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಅಜಿಂಕ್ಯ ರಹಾನೆ (44 ರನ್) ಮತ್ತು ಸ್ಮಿತ್ (51 ರನ್) ಅವರು ಉತ್ತಮ ಬ್ಯಾಟಿಂಗ್ ಮಾಡಿದ್ದರು.  ಆದರೂ  ಇನ್ನುಳಿದವರಿಂದ ಉತ್ತಮ ವಾದ ಜೊತೆಯಾಟ ಮೂಡಿಬರಲಿಲ್ಲ. ಆದ್ದರಿಂದ ತಂಡವು ಹಿನ್ನಡೆ ಅನು ಭವಿಸಿತು’ ಎಂದರು.

ಸ್ಪಾಟ್ ಫಿಕ್ಸಿಂಗ್‌ ಹಗರಣದಲ್ಲಿ ಕಳಂಕಿತಗೊಂಡಿದ್ದ  ರಾಜಸ್ತಾನ ರಾಯಲ್ಸ್ ಮತ್ತು ಚೆನ್ಣೈ ಸೂಪರ್‌ ಕಿಂಗ್ಸ್‌ ತಂಡಗಳನ್ನು 2015ರಲ್ಲಿ ಎರಡು ವರ್ಷಗಳ ಕಾಲ ಅಮಾನತು ಗೊಳಿಸಲಾಗಿತ್ತು.  ಆದ್ದರಿಂದ ಪುಣೆ  ಮತ್ತು ಗುಜರಾತ್ ಲಯನ್ಸ್‌ ತಂಡಗಳು ಹೋದ ವರ್ಷದಿಂದ ಕಣಕ್ಕಿಳಿದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT