ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರಕ್ಕೆ ಜಿಎಸ್‌ಟಿ ಕಾರಣವಾಗದು: ಸ್ಟ್ಯಾನ್ಲೆ

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಮುಂಬೈ: ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ಮೋರ್ಗನ್‌ ಸ್ಟ್ಯಾನ್ಲೆ ಹೇಳಿದೆ.

ಗ್ರಾಹಕ ಬೆಲೆ ಸೂಚ್ಯಂಕ ವ್ಯಾಪ್ತಿಯಲ್ಲಿರುವ ಬಹುತೇಕ ಸಾಮಗ್ರಿಗಳ ತೆರಿಗೆ ದರ ಜಿಎಸ್‌ಟಿಯಲ್ಲಿ ಕಡಿಮೆ ತೆರಿಗೆ ದರ ಮಿತಿಗೆ ಒಳಪಟ್ಟಿರುವುದೇ ಇದಕ್ಕೆ  ಕಾರಣ ಎಂದು ವರದಿ ಹೇಳಿದೆ.

ಸಿಮೆಂಟ್‌, ಉಕ್ಕು, ಗ್ರಾಹಕ ಬಳಕೆ ವಸ್ತುಗಳು ಮತ್ತು ಮಾಧ್ಯಮ ಕ್ಷೇತ್ರದ ಮೇಲೆ ಜಿಎಸ್‌ಟಿ ಸಕಾರಾತ್ಮಕ ಪರಿಣಾಮ ಬೀರಲಿದ್ದು ಮತ್ತು ತೈಲ, ಅನಿಲ, ವಿಮಾನಯಾನ ಉದ್ಯಮಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

ವಾಹನ ತಯಾರಿಕೆ, ಹೋಟೆಲ್‌, ಟೆಲಿಕಾಂ ವಲಯಗಳ ಮೇಲೆ ಯಾವುದೇ ಪರಿಣಾಮವಾಗುವ ಸಾಧ್ಯತೆ  ಕಡಿಮೆ. ಒಂದು ವೇಳೆ ಪರಿಣಾಮವಾದರೂ ಸ್ವಲ್ಪ ಮಟ್ಟಿಗೆ ನಕಾರಾತ್ಮಕವಾಗಿರಲಿದೆ ಎಂದು ವರದಿ ಹೇಳಿದೆ.

ಸಣ್ಣ ಮತ್ತು ಮಧ್ಯಮ ಉದ್ಯಮ ಹಾಗೂ ಕಾರ್ಪೊರೇಟ್ ವಲಯದ ಮೇಲೆ ಜಿಎಸ್‌ಟಿ ಬೀರಬಹುದಾದ ಪರಿಣಾಮಗಳ ಬಗ್ಗೆ ಇನ್ನೂ ಅನಿಶ್ಚಿತತೆ ಇದ್ದು, ಈಗಲೇ ಏನನ್ನೂ ಸ್ಪಷ್ಟವಾಗಿ ಹೇಳಲಾಗದು ಎಂದು ವರದಿ ಹೇಳಿದೆ.

ಆರು ಸರಕುಗಳ ಬಗ್ಗೆ ಜೂ 3ರಂದು ತೀರ್ಮಾನ
ಜೂನ್‌ 3ರಂದು ಸಭೆ ಸೇರಲಿರುವ ಜಿಎಸ್‌ಟಿ ಮಂಡಳಿಯು ಪಾದರಕ್ಷೆ, ಮುತ್ತು ಮತ್ತು ಅಮೂಲ್ಯ ಲೋಹಗಳು, ಬೀಡಿ, ಜವಳಿ, ಬಿಸ್ಕತ್‌ ಮತ್ತು ಕೃಷಿ ಸಲಕರಣೆಗಳ ಮೇಲಿನ ತೆರಿಗೆ ದರಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT