ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಡಿಪು-–ಮೂಳೂರು ರಸ್ತೆ ಸಂಪೂರ್ಣ ಬಂದ್

Last Updated 23 ಮೇ 2017, 5:48 IST
ಅಕ್ಷರ ಗಾತ್ರ

ಮುಡಿಪು:ಮುಡಿಪು- ಇರಾ ನಡುವಿನ ಮೂಳೂರು ರಸ್ತೆಯು ಹೊಂಡಮಯ ಗೊಂಡು ಸಂಚಾರಕ್ಕೆ ತೊಂದರೆಯಾ ಗಿದ್ದು, ಕೆಐಎಡಿಬಿ ವ್ಯಾಪ್ತಿಗೆ ಬರುವ ಮೂಳೂರು ರಸ್ತೆಯನ್ನು ಕೂಡಲೇ ಸಂಚಾರ ಯೋಗ್ಯ ಮಾಡುವಂತೆ ಆಗ್ರಹಿಸಿ ಮೂಳೂರು ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ರಸ್ತೆ ತಡೆ ನಡೆಸಿದರು.

ಇರಾ ಮುಡಿಪು ವ್ಯಾಪ್ತಿಯಲ್ಲಿ ಬಹು ತೇಕ ಎಲ್ಲ ಕಡೆಯು ರಸ್ತೆಯು ಅಭಿವೃದ್ದಿಗೊಂಡಿದ್ದು, ಕೆಐಎಡಿಪಿ ವ್ಯಾಪ್ತಿಯ ಮುಳೂರು ರಸ್ತೆ ಮಾತ್ರ ಅಭಿವೃದ್ಧಿ ಕಾಣದೆ ಬಾಕಿ ಉಳಿದಿದೆ. ಈ ಭಾಗದ ನಾಗರಿಕರು ಕೆಐಎಡಿಬಿ ಅಧಿಕಾರಿಗಳಲ್ಲಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ, ಈ ರಸ್ತೆಯ ಅಭಿವೃದ್ಧಿ ಆಗುತ್ತಿಲ್ಲ ಎಂದು ದೂರಿದರು.

ಈ ರಸ್ತೆಯು ಹೊಂಡದಿಂದ ತುಂಬಿದ್ದು, ರಸ್ತೆಯೂ ಕಿರಿದಾಗಿದೆ. ಇದ ರಿಂದ ಹಲವಾರು ಅವಘಡಗಳು ಕೂಡಾ ಸಂಭವಿಸಿವೆ ಎಂದು ಆರೋಪಿಸಿದರು. ಮೂಳೂರು ನಾಗರಿಕ ಸಮಿತಿ ನೇತೃತ್ವದಲ್ಲಿ ಸಭೆ ನಡೆಸಿ ಸೋಮವಾರ ಈ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಭಾಗದಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳು ತೆರಳದಂತೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ ಎಂದು ತಿಳಿಸಿದರು.

ಇರಾ ಪಣೋಲಿಬೈಲು ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್‌ಗಳಿಗೂ ಸಾರ್ವಜನಿಕರು ಅಡ್ಡಿಪಡಿಸಿದ್ದರಿಂದ,  ಬಸ್‌ ಸಂಚಾರವೂ ಸ್ಥಗಿತಗೊಂಡಿತ್ತು. ಪ್ರತಿಭಟನಾ ಸ್ಥಳಕ್ಕೆ ವಿವಿಧ ಜನಪ್ರತಿನಿಧಿಗಳು, ಮುಖಂಡರು ಬಂದು ಭರವಸೆಯ ಮಾತು ಹೇಳಿದರು. ಸಾರ್ವಜನಿಕರು ಮಾತ್ರ ಸಂಜೆಯವರೆಗೆ ಪ್ರತಿಭಟನೆ ಮುಂದುವರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿ ಯಾರ್ ಮಾತನಾಡಿ, ಮೂಳೂರು ರಸ್ತೆಯ ಅವ್ಯವಸ್ಥೆಯಿಂದ ಈ ಭಾಗದ ಜನರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹಲವಾರು ಅಪಘಾತಗಳು ನಡೆಯು ತ್ತಿದೆ. ಇದರಿಂದ ಕೆಐಎಡಿಬಿ ಅಧಿಕಾರಿ ಗಳು ಈ ಬಗ್ಗೆ ಗಮನಹರಿಸಿ ಕೂಡಲೇ ರಸ್ತೆಯನ್ನು ಸರಿಪಡಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ನಿರ್ಧರಿಸ ಲಾ ಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾಗಟ್ಟಿ ಮಾತನಾಡಿ, ಈಗಾಗಲೇ ಸಮಸ್ಯೆ ಕುರಿತು ಕೆಐಎಡಿಬಿ ಅಧಿಕಾರಿ ಗಳೊಂದಿಗೆ ಮಾತನಾಡಿದ್ದು, ಇನ್ನು ಮೂರು ದಿನದೊಳಗೆ ಕೆಲಸ ಆರಂಭಿ ಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ವಿವಿಧ ಜನಪ್ರತಿನಿಧಿಗಳು, ಊರಿನ ಮುಖಂಡರು ಸಾರ್ವಜನಿಕರು ಭಾಗವಹಿಸಿದ್ದರು.

* *

ಅಧಿಕಾರಿಗಳು ಕೂಡಲೇ ಎಚ್ಚೆತ್ತು, ಜನರ ಬೇಡಿಕೆಯನ್ನು ಈಡೇರಿಸಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು.
ದಯಾನಂದ ರೈ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT