ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಳಯ್ಯ ತತ್ವಾದರ್ಶ ಸರ್ವಕಾಲಿಕ

Last Updated 23 ಮೇ 2017, 8:27 IST
ಅಕ್ಷರ ಗಾತ್ರ

ಚಡಚಣ: ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರೊಂದಿಗೆ ಅನುಭವ ಮಂಟಪ ಸ್ಥಾಪಿಸಿ ಸಮಾಜದಲ್ಲಿ ಸಮಾನತೆಗೆ ಶ್ರಮಿಸಿದ ಮಹಾ ಶಿವಶರಣ  ಸಮಗಾರ ಹರಳಯ್ಯನವರ ತತ್ವ, ಆದರ್ಶಗಳು ಸರ್ವಕಾಲಿಕ ಎಂದು ಶಾಸಕ ರಾಜೂ ಆಲಗೂರ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾದ ಉತ್ತರ ಕರ್ನಾಟಕ ಮಟ್ಟದ ಮಹಾ ಶಿವಶರಣ ಸಮಗಾರ ಹರಳಯ್ಯನವರ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹರಳಯ್ಯ ಸಮಾಜದವರು ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಂಘಟನೆ ಹಾಗೂ ಹೋರಾಟ ಅಗತ್ಯ ಎಂದರು.
ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿದ್ದಪ್ಪ ಅವಜಿ ಪ್ರಾಸ್ತಾವಿಕವಾಗಿ ಮಾತನಾಡಿ,‘ಸಮಾಜ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ದಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹರಳಯ್ಯ ಸಮಾಜಕ್ಕೆ ವಿಶೇಷ ಪ್ರಾತಿನಿಧ್ಯ ಕಲ್ಪಿಸುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಗಾರ ಹರಳಯ್ಯ ಸರ್ಕಾರಿ ನೌಕರ ಸಂಘದ ಚಡಚಣ ವಲಯ ಘಟಕದ ಅಧ್ಯಕ್ಷ ಬಸವರಾಜ ಇಂಗಳೆ, ‘ಕುರಿ, ಕೋಳಿ, ಹಂದಿ ಮೇಕೆಗಳ ಸಮೀಕ್ಷೆ ಮಾಡುವ ಸರ್ಕಾರ ಸಮಗಾರ ಸಮುದಾಯದ ಸಮೀಕ್ಷೆಗೆ  ಏಕೆ ಮುಂದಾಗಿಲ್ಲ’ ಎಂದು ಪ್ರಶ್ನಿಸಿದರು.

ಅಲ್ಲದೇ, ಅಲ್ಪಸಂಖ್ಯಾತರಾದ ಈ ಸಮಾಜಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು. ಸಮಗಾರ ಹರಳಯ್ಯ ಸಮಾಜ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗದೀಶ ಬೆಟಗೇರಿ, ಮಹಾರಾಷ್ಟ್ರ ಹರಳಯ್ಯ ಸಮಾಜದ ಅಧ್ಯಕ್ಷೆ ಬಿಸೋರೆ ಸರೋಜಾದೇವಿ, ಜಿಲ್ಲಾ ಘಟಕದ ಅಧ್ಯಕ್ಷ ಜಟ್ಟೆಪ್ಪ ಕಬಾಡೆ, ಪ್ರಶಾಂತ ಹೊಸಮನಿ, ಚಂದ್ರಶೇಖರ ಮುಂಡೊಡಗಿ, ಸಾನ್ನಿಧ್ಯ ವಹಿಸಿದ್ದ ಹೊನಮೋರೆ ಮಹಾರಾಜ, ಮಾತೋಶ್ರೀ ಯೋಗೇಶ್ವರಿ ಆಶೀರ್ವಚನ ನೀಡಿದರು.

ಮುಖಂಡ ಗೋಪಾಲ ಕಾರಜೋಳ, ಜಿಲ್ಲಾ ಪಂಚಾಯ್ತಿ ಸದಸ್ಯ ಭೀಮಾಶಂಕರ ಬಿರಾದಾರ, ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ  ಪಾಟೀಲ, ಸೈದು ಕೊಡಹೊನ್ನ ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ ಸಮಾಜ ಸಂಘದ ಚಡಚಣ ವಲಯ ಅಧ್ಯಕ್ಷ ಮಲ್ಲಪ್ಪ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT