ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 24–5–1967

Last Updated 23 ಮೇ 2017, 19:30 IST
ಅಕ್ಷರ ಗಾತ್ರ
ಅಕಾಬ ಕೊಲ್ಲಿಯಲ್ಲಿ ಇಸ್ರೇಲಿ ನೌಕೆಗಳ ಸಂಚಾರ ನಿಷಿದ್ಧ
ಕೈರೋ, ಮೇ 23– ಅಕಾಬ ಕೊಲ್ಲಿಗೆ ಇಸ್ರೇಲಿ ಹಡಗುಗಳು ಪ್ರವೇಶಿಸುವುದನ್ನು ಸಂಯುಕ್ತ ಅರಬ್ ಗಣರಾಜ್ಯವು ನಿಷೇಧಿಸಿದೆ. ಇಸ್ರೇಲಿನ ದಕ್ಷಿಣಕ್ಕಿರುವ ಅಕಾಬ ಕೊಲ್ಲಿ, ಇಸ್ರೇಲಿಗಿರುವ ಪ್ರತ್ಯೇಕ ಸಮುದ್ರ ದ್ವಾರವಾಗಿದೆ. 
 
ಇಸ್ರೇಲಿ ಹಡಗುಗಳು ಮತ್ತು ಇಸ್ರೇಲಿಗೆ ಸಮರೋಪಯೋಗಿ ವಸ್ತುಗಳನ್ನು ಸಾಗಿಸುವ ಹಡಗುಗಳಿಗೂ ಅಕಾಬ ಕೊಲ್ಲಿಯನ್ನು ಮುಚ್ಚಲು ನಿರ್ಧರಿಸಿರುವುದಾಗಿ ಅರಬ್ ಗಣ ರಾಜ್ಯದ ಅಧ್ಯಕ್ಷ ನಾಸೆರ್‌ರವರು ಇಲ್ಲಿ ಇಂದು ಪ್ರಕಟಿಸಿದರು.
 
ಪ್ರಧಾನಿ ಜೊತೆ ಆಹಾರ ಸಮಸ್ಯೆ ಚರ್ಚಿಸಲು ವಿರೋಧ ಪಕ್ಷಗಳ ನಕಾರ
ನವದೆಹಲಿ, ಮೇ 23– ಆಹಾರ ಪರಿಸ್ಥಿತಿಯನ್ನು ಕುರಿತು ಚರ್ಚಿಸುವುದಕ್ಕಾಗಿ ನಾಳೆ ಪ್ರಧಾನಮಂತ್ರಿಯನ್ನು ಭೇಟಿ ಮಾಡಲು ಪಾರ್ಲಿಮೆಂಟಿನ ವಿರೋಧ ಪಕ್ಷಗಳ ಅನೇಕ ನಾಯಕರು ನಿರಾಕರಿಸಿದ್ದಾರೆ.
 
ಪಾರ್ಲಿಮೆಂಟರಿ ವ್ಯವಹಾರಗಳ ಸಚಿವ ಡಾ. ರಾಂಸುಭಾಗ್‌ ಸಿಂಗ್ ಅವರು ಈ ಸಭೆಯನ್ನು ಕರೆದಿದ್ದಾರೆ. ಪ್ರಧಾನಮಂತ್ರಿಯವರಲ್ಲದೆ ಆಹಾರ ಸಚಿವ ಶ್ರೀ ಜಗಜೀವನರಾಂ ಮತ್ತು ಇತರ ಕೆಲವು ಸಚಿವರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
 
ಅಮೆರಿಕದ ಎಚ್ಚರಿಕೆ
ವಾಷಿಂಗ್ಟನ್, ಮೇ 23– ಇಸ್ರೇಲ್‌ಗೆ ಕೆಂಪು ಸಮುದ್ರದೊಂದಿಗೆ ಏಕಮಾತ್ರ ಸಂಪರ್ಕ ಒದಗಿಸುವ ಅಕಾಬ ಕೊಲ್ಲಿಯಲ್ಲಿ ನೌಕಾ ಸಂಚಾರದ ಬಗ್ಗೆ ಯಾವುದೇ ಹಸ್ತಕ್ಷೇಪದ ವಿರುದ್ಧ ಅಮೆರಿಕದ ಸ್ಟೇಟ್ ಇಲಾಖೆ ಅಧಿಕಾರಿಗಳು ನಿನ್ನೆ ಎಚ್ಚರಿಕೆ ನೀಡಿದರು.
 
ಆದರೆ, ಇಸ್ರೇಲ್–ಅರಬ್ ಯುದ್ಧವನ್ನು ತಡೆಗಟ್ಟಲು ರಷ್ಯವು ಒತ್ತಡವನ್ನು ತರಬಹುದೆಂಬ ಆಶಾಭಾವನೆಯನ್ನು ಆಡಳಿತಾಧಿಕಾರಿಗಳು ಹೊಂದಿದ್ದಾರೆಂದು ವರದಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT