ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛ ಭಾರತಕ್ಕೆ ಸಹಕಾರ ಅಗತ್ಯ’

Last Updated 24 ಮೇ 2017, 9:04 IST
ಅಕ್ಷರ ಗಾತ್ರ

ಮುಂಡರಗಿ: ‘ಸ್ವಚ್ಛ ಭಾರತ ನಿರ್ಮಾಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರ ಅತ್ಯಗತ್ಯವಾಗಿದ್ದು,  ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿ ಕೊಳ್ಳುವ ಮೂಲಕ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಬೆಂಬಲ ನೀಡಬೇಕು’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಪಟ್ಟಣದ ಪುರಸಭೆ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ‘ಸ್ವಚ್ಛ ಮುಂಡರಗಿ-– ಸ್ವಚ್ಛ ಭಾರತ’ ಆಂದೋ ಲನ ಮಾಸಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಬಹುತೇಕ ಗ್ರಾಮೀಣ ಭಾಗಗಳಲ್ಲಿ ಶೌಚಾಲಯ ಇಲ್ಲದ ಕಾರಣ ಮಹಿಳೆ ಯರು ಬಯಲನ್ನು ಆಶ್ರಯಿಸಬೇಕಾಗಿದೆ. ಶೌಚಾಲಯ ನಿರ್ಮಿಸಿಕೊಳ್ಳುವ ಕುಟುಂಬಗಳಿಗೆ  ಸರ್ಕಾರ ₹ 15ಸಾವಿರ ಸಹಾಯ ಧನ ನೀಡುತ್ತಿದೆ. ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳ ಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ಮೇಟಿ ಮಾತನಾಡಿ, ‘ಶೌಚಾಲಯ ನಿರ್ಮಿಸಿಕೊಳ್ಳಲು ಮಹಿಳೆಯರ ಜೊತೆಗೆ ಪುರುಷರು ಕೈಜೋಡಿಸಬೇಕು. ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ಕೊಡಬೇಕು’ ಎಂದರು. ನಿವೃತ್ತ ಉಪನ್ಯಾಸಕ ಆರ್.ಎಲ್. ಪೊಲೀಸ ಪಾಟೀಲ ಮತ್ತು ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್ ‘ಪಟ್ಟಣದಲ್ಲಿ ಈಗಾ ಗಲೇ 5,368  ಶೌಚಾಲಯಗಳಿದ್ದು, ಇನ್ನು 1,600ಕ್ಕೂ ಹೆಚ್ಚು ಶೌಚಾಲಯ ಗಳ ಅಗತ್ಯವಿದೆ. ಆಗಸ್ಟ್‌್ 15ರ ಒಳಗೆ 636 ಶೌಚಗೃಹ ನಿರ್ಮಿಸುವ ಗುರಿ ಹೊಂದಿದ್ದೇವೆ’ ಎಂದರು.

ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಅಧ್ಯಕ್ಷತೆ ವಹಿಸಿದ್ದರು. ಉಪಾ ಧ್ಯಕ್ಷ ಬಸವರಾಜ ನರೇಗಲ್, ಸದಸ್ಯ ರಾದ ಶಾರದಾ ದೇಸಾಯಿ, ಪ್ರಭು ಅಬ್ಬಿಗೇರಿ, ವೀರೇಶ ಸಜ್ಜನರ, ದಾನೇಶ್ವರಿ ಭಜಂತ್ರಿ, ರೇಖಾ    ದೇಸಾಯಿ, ಶಂಕರಗೌಡ ಪಾಟೀಲ, ಮುಖಂಡರಾದ ಬಸವರಾಜ ದೇಸಾಯಿ, ಮಂಜುನಾಥ ಇಟಗಿ, ಪಾಲಾಕ್ಷಿ ಗಣದಿನ್ನಿ, ಆರ್.ಎ . ಹೊಸಮನಿ, ಎ.ಪಿ.ದಂಡಿನ, ಎಂ.ಜಿ. ವಡ್ಡಟ್ಟಿ, ಶರಣಪ್ಪ ಕುಬಸದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT