ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಸಾಗಣೆಯ ಉಚಿತ ಸೇವೆ!

Last Updated 24 ಮೇ 2017, 10:17 IST
ಅಕ್ಷರ ಗಾತ್ರ

ಬಳ್ಳಾರಿ: ನಗರದಲ್ಲಿ ಎಲ್ಲಿಯೇ ಆದರೂ ಬಡವರು, ಅನಾಥರು, ವೃದ್ಧಾಶ್ರಮದ ವೃದ್ಧರು ಸಾವಿಗೀಡಾದರೆ ಪಾಲಿಕೆಯ 24ನೇ ವಾರ್ಡಿನ ಸದಸ್ಯ ಎಂ.ಗೋವಿಂದ ರಾಜುಲು ಅವರಿಗೆ ಮೊದಲ ಕರೆ ಹೋಗುತ್ತದೆ. ಕರೆ ಬಂದ ಕೂಡಲೇ ಅವರು ತಮ್ಮ ‘ಉಚಿತ ವೈಕುಂಠ ರಥ’ವನ್ನು ಕಳಿಸುತ್ತಾರೆ. ತಾವು ನೇಮಿಸಿದ ಚಾಲಕ ಲಭ್ಯವಿರದಿದ್ದರೆ ತಾವೇ ವಾಹನ ಚಾಲನೆ ಮಾಡಿ ಶವ ವನ್ನು ಅಂತ್ಯಸಂಸ್ಕಾರ ಸ್ಥಳಕ್ಕೆ ಸಾಗಿಸು ತ್ತಾರೆ!

ಅಸಹಾಯಕರ ಸಾವಿನ ಕರೆಗೆ ಓಗೊಡುವ ಅವರ ಈ ವಿಶಿಷ್ಟ ಸೇವೆ ಇಂದಿನದ್ದಲ್ಲ. ಹತ್ತು ವರ್ಷದಿಂದಲೂ ಈ ಸೇವೆ ನಡೆಯುತ್ತಿದೆ ಎಂಬುದೇ ವಿಶೇಷ. ಈ ಸೇವೆಯನ್ನು ಅನೂಚಾನವಾಗಿ ಮುಂದುವರಿಸಲು ಅವರು ಕೆಲವೊಮ್ಮೆ ಪೆಟ್ರೋಲ್‌ಬಂಕ್‌ನಲ್ಲಿ ಡೀಸೆಲ್‌ ಸಾಲ ಪಡೆದಿರುವ ನಿದರ್ಶನಗಳೂ ಉಂಟು.

ಸಾವೇ ಪ್ರೇರಣೆ: ಉಚಿತವಾಗಿ ಶವ ಸಾಗಿಸುವ ಈ ಸೇವೆಗೆ ಅವರ ವಾರ್ಡಿನಲ್ಲಿ ಒಂದು ದಶಕದ ಹಿಂದೆ ನಡೆದ ವ್ಯಕ್ತಿಯೊಬ್ಬರ ಸಾವೇ ಪ್ರೇರಣೆ ಎಂಬುದು ಗಮನಾರ್ಹ. ಇದುವೆಗೆ ಈ ವಾಹನದಲ್ಲಿ 4863 ಶವ ಸಾಗಣೆ ನಡೆದಿದೆ.

‘2007 ನವೆಂಬರ್‌ 16ರಿಂದ ವಾಹನ ಸೇವೆ ಲಭ್ಯವಿದೆ. ಅದೇ ತಿಂಗಳ 10ರಂದು ಧಾರಾಕಾರ ಮಳೆ ಸುರಿದಿತ್ತು. ಅಂದು ಮೃತಪಟ್ಟವರೊಬ್ಬರ ಶವವನ್ನು ಸಾಗಿಸಲು ವಾಹನ ಬೇಕಿತ್ತು. ಆದರೆ ಮಳೆಯಲ್ಲಿ ವಾಹನ ಕೊಡಲು ಸ್ಮಶಾನದ ಸಿಬ್ಬಂದಿ ನಿರಾಕರಿಸಿದರು. ಇಂಥ ಸನ್ನಿವೇಶ ಬಡಜನರಿಗೆ ಎದುರಾಗ ಬಾರದು ಎಂದು ಅಂದೇ ನಿಶ್ಚಯಿಸಿದೆ’ ಎಂದು ಗೋವಿಂದರಾಜುಲು ‘ಪ್ರಜಾ ವಾಣಿ’ಯೊಂದಿಗೆ ತಮ್ಮ ನೆನಪುಗಳನ್ನು ಬಿಚ್ಚಿಟ್ಟರು.

‘ನನ್ನ ಬಳಿ ಇದ್ದ ಬೊಲೆರೋ ವಾಹನವನ್ನು ಮಾರಿ ₹ 7 ಲಕ್ಷ ನೀಡಿ ಬೆಂಗಳೂರಿನಲ್ಲಿ ವಾಹನವನ್ನು ಖರೀದಿ ಸಿದೆ. ಈ ಸೇವೆ ನನ್ನ ವಾರ್ಡ್‌ನಲ್ಲಿ ಮಾತ್ರವಲ್ಲದೆ, ನಗರದ 34 ವಾರ್ಡ್‌ ನಲ್ಲೂ ಲಭ್ಯವಿದೆ. ಯಾರೇ ಕರೆ ಮಾಡಿ ದರೂ ಉಚಿತವಾಗಿ ಶವಸಾಗಿಸಿ ಮರಣ ಪ್ರಮಾಣಪತ್ರವನ್ನೂ ಕೊಡಿಸುತ್ತೇನೆ’ ಎಂದು ಹೇಳಿದರು.

ಬಡತನ: ‘ಬಡತನದ ಕುಟುಂಬದಿಂದ ಬಂದಿರುವ ನನಗೆ ಬಡವರ ಕಷ್ಟಗಳ ಅರಿವಿದೆ. ತಂದೆ–ತಾಯಿ ಹಾಗೂ ಪಾಲಿಕೆ ಸದಸ್ಯನಾಗಿ ಆಯ್ಕೆ ಮಾಡಿರುವ ಮತ ದಾರರ ಪ್ರೋತ್ಸಾಹದಿಂದ ಇದುವರೆಗೂ ಸೇವೆ ಮುಂದುವರಿದಿದೆ. ಯಾರೊಬ್ಬರ ಬಳಿಯೂ ಕೈಚಾಚದೆ ಈ ಸೇವೆಯನ್ನು ಮಾಡುತ್ತಿರುವುದು ಧನ್ಯತೆ ಮೂಡಿಸಿದೆ’ ಎಂದರು.

ಅಂತ್ಯಸಂಸ್ಕಾರ: ನಗರ ಹೊರವಲಯದ ಬಳ್ಳಾರಿಯ ವೃದ್ಧರ ಆಶ್ರಮದಲ್ಲಿ ಮಂಗಳವಾರ ಮೃತಪಟ್ಟ ಶಿರಸಿಯ ಸೀತಮ್ಮ ಎಂಬುವವರ ಶವವನ್ನು ಅವರು ‘ಉಚಿತ ವೈಕುಂಠ ರಥ’ದಲ್ಲಿ ಸಾಗಿಸಲು ತಾವೇ ವಾಹನ ಚಾಲನೆ ಮಾಡಿದರು. ವೃದ್ಧೆಯ ಸಂಬಂಧಿಕರು ಬಾರದೇ ಇದ್ದುದರಿಂದ ಅಂತ್ಯಸಂಸ್ಕಾರ ದ ನೇತೃತ್ವವವನ್ನೂ ವಹಿಸಿದ್ದರು.

* * 

ಶವ ಸಾಗಿಸಲು ಶಕ್ತರಲ್ಲದವರಿಗಾಗಿ ಆರಂಭಿಸಿದ ಉಚಿತ ವಾಹನ ಸೇವೆಗೆ ಉತ್ತಮ ಸ್ಪಂದನೆ ದೊರಕಿದೆ. ಎಲ್ಲ ವಾರ್ಡಿನ ಜನರೂ ಈ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ
–ಎಂ.ಗೋವಿಂದರಾಜುಲು, ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT