ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿಹಿತ್ಲುವಿನಲ್ಲಿ ನಾಳೆಯಿಂದ ಸರ್ಫಿಂಗ್‌ ಕಲರವ

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಇಂಡಿಯನ್‌ ಓಪನ್ ಆಫ್‌ ಸರ್ಫಿಂಗ್‌’ ಆರಂಭಕ್ಕೆ ಇನ್ನು ಒಂದು ದಿನ ಬಾಕಿ ಇರುವಾಗಲೇ ತಮಿ ಳುನಾಡು, ಗೋವಾ, ಕೇರಳ, ರಷ್ಯಾ, ಫ್ರಾನ್ಸ್‌, ಜರ್ಮನಿ, ಆಫ್ರಿಕಾದ ಮಡ ಗಾಸ್ಕರ್‌ನಿಂದ  ಬಂದಿರುವ ಸರ್ಫರ್‌ಗಳು ಬುಧವಾರ ತಾಲೀಮು ನಡೆಸಿದರು.

ಇವರ ಜತೆಗೆ ಸ್ಥಳೀಯ ಸರ್ಫಿಂಗ್‌ ಕ್ಲಬ್‌ನ ನೂರಾರು ಸರ್ಫರ್‌ಗಳು ಕೂಡಾ ಅಭ್ಯಾಸ ನಡೆಸಿದರು. ‘ರಾಷ್ಟ್ರ ಮಟ್ಟದ ಸರ್ಫಿಂಗ್‌ ಸ್ಪರ್ಧೆಗೆ ಮೂರು ತಿಂಗಳಿಂದ ಮೂಲ್ಕಿ ಮಂತ್ರ ಕ್ಲಬ್‌ನ ಸರ್ಫರ್‌ಗಳು ಸಿದ್ಧತೆ ನಡೆಸುತ್ತಿ ದ್ದಾರೆ. 14 ವರ್ಷ ವಯೋಮಿತಿಯೊಳ ಗಿನ 8 ವರ್ಷದ ಸರ್ಫರ್‌ ಪ್ರತಿ ಎಂಬಾತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ’ ಎಂದು ಕ್ಲಬ್‌ನ ಮುಖ್ಯಸ್ಥ ಸಮಂತ ಹೇಳಿದರು.

ಈ ಸರ್ಫಿಂಗ್‌ ಕೂಟಕ್ಕೆ ರಾಯಭಾರಿಗಳಾಗಿ ನಟ ಸುನಿಲ್‌ ಶೆಟ್ಟಿ, ಆಫ್ರಿಕದ ಮಾಜಿ ಕ್ರಿಕೆಟ್‌ ಆಟಗಾರ ಜಾಂಟಿ ರೋಡ್ಸ್‌ ಪಾಲ್ಗೊಳ್ಳಲಿದ್ದಾರೆ. .
ನೇಹಾಲ್‌, ಸತ್ಯಶ್ರೀ ಕೃಷ್ಣ, ತನ್ವಿ ಜಗದೀಶ್‌, ಸಿಂಚನಾ ಗೌಡ, ಅನೀಷಾ ಸೇರಿದಂತೆ ಭಾರತದ ಸರ್ಫರ್‌ಗಳು ಸಸಿಹಿತ್ಲು ಬೀಚ್‌ನಲ್ಲಿ ಅಭ್ಯಾಸ ನಡೆಸಿದರು.

ಮಹೇಶ್‌ ಕನ್ನೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT