ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂತ್‌ ಮಟ್ಟದಿಂದ ಪಕ್ಷ ಕಟ್ಟಿ

Last Updated 25 ಮೇ 2017, 4:49 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಬೂತ್‌ ಮಟ್ಟ ದಿಂದ ಪಕ್ಷ ಕಟ್ಟುವ ಕೆಲಸ ಆರಂಭಿ ಸಲಾಗಿದೆ’ ಎಂದು ಜೆಡಿಎಸ್‌ ಪಕ್ಷದ ಜಿಲ್ಲಾ ವೀಕ್ಷಕ ಲೋಕೇಶ್ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಪಕ್ಷ ಸಂಘಟಿತವಾಗಿದ್ದರೂ ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ  ಮತ್ತಷ್ಟು ಬಲಪಡಿಸಲು ಮೇ ಅಂತ್ಯದೊಳಗೆ ಬೂತ್‌ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು’ ಎಂದರು.

‘ಬೂತ್ ಮಟ್ಟದಲ್ಲಿ 15ರಿಂದ 20 ಕಾರ್ಯಕರ್ತರ ಸಮಿತಿ ರಚಿಸುವುದ ರೊಂದಿಗೆ ಹೋಬಳಿ, ತಾಲ್ಲೂಕು, ಜಿಲ್ಲಾ ಸಮಿತಿಗಳಿಗೆ ಬಲ ತುಂಬುತ್ತೇವೆ. ಎಚ್‌.ಡಿ. ಕುಮಾರಸ್ವಾಮಿ ಅವರ ಕೈ ಬಲ ಪಡಿಸಲು ಮತ್ತು ರಾಜ್ಯದಲ್ಲಿ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ. ಎಲ್ಲಾ ಸಮು ದಾಯಗಳಿಗೂ ಪ್ರಾತಿನಿಧ್ಯ ನೀಡು ವುದರೊಂದಿಗೆ ನಿಷ್ಠಾವಂತ ಕಾರ್ಯ ಕರ್ತರು ಹಾಗೂ ಯುವಕರಿಗೆ ಜವಾ ಬ್ದಾರಿ ಕೊಡುತ್ತೇವೆ’ ಎಂದು ಹೇಳಿದರು.


ಗೆಲ್ಲುವ ಅವಕಾಶ: ಪಕ್ಷದ ಮತ್ತೊಬ್ಬ ಜಿಲ್ಲಾ ವೀಕ್ಷಕ ಆರ್.ವಿ.ಹರೀಶ್, ‘ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಅವಕಾಶವಿದ್ದು, ಕಾರ್ಯಕರ್ತರು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಈಗಿನ ಘಟಕಗಳಲ್ಲಿರುವ ಪದಾಧಿಕಾರಿಗಳನ್ನು ಬದಲಿಸದೆ ಕಾರ್ಯ ಕರ್ತರಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಪಕ್ಷ ಸಂಘಟನೆ ಮಾಡುತ್ತೇವೆ’ ಎಂದು ವಿವರಿಸಿದರು.

‘ಈ ಬಾರಿಯ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಅವಕಾಶ ನೀಡದೆ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಪ್ರಬಲಗೊಳಿಸುತ್ತೇವೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ಬಗ್ಗೆ ಜನರಿಗೆ ಬೇಸರವಿದ್ದು, ರಾಜ್ಯದಲ್ಲಿ ಜೆಡಿಎಸ್ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಜೆಡಿಎಸ್‌ ಈ ಹಿಂದೆ ನಡೆಸಿದ 20 ತಿಂಗಳ ಆಡಳಿತವನ್ನು ಜನ ಮೆಚ್ಚಿಕೊಂಡಿದ್ದಾರೆ. ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಪಕ್ಷದ ಜಿಲ್ಲಾ ಘಟಕದ ಕಾರ್ಯಾ ಧ್ಯಕ್ಷ ನಟರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲ್, ಕೋಚಿಮುಲ್‌ ನಿರ್ದೇಶಕರಾದ ರಾಮಕೃಷ್ಣೇಗೌಡ, ಜಯಸಿಂಹ ಕೃಷ್ಣಪ್ಪ,  ಶ್ರೀಕೃಷ್ಣ, ಗೋಪಾ ಲಕೃಷ್ಣ, ಭಕ್ತವತ್ಸಲಂ, ಮಂಗಮ್ಮ ಮುನಿಸ್ವಾಮಿ, ರಾಜೇಶ್ವರಿ ಇದ್ದರು.

*
2018ರ ಚುನಾವಣೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡುತ್ತೇವೆ.  ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ.
-ಜಿ.ಕೆ.ವೆಂಕಟಶಿವಾರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT