ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣವಾದರೂ ಇಲ್ಲಿ ಸಂತೆ ಇಲ್ಲ

ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ರೈತರ ಸಂತೆ ಆರಂಭಕ್ಕೆ ಒತ್ತಡ – ಹೋರಾಟ ಮಾಡಲು ನಿರ್ಧಾರ
Last Updated 25 ಮೇ 2017, 7:39 IST
ಅಕ್ಷರ ಗಾತ್ರ

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ರೈತರ ಸಂತೆ ಆರಂಭಕ್ಕೆ ಹೋರಾಟ ನಡೆಸಲಾಗುವುದೆಂದು ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ರಾಜ್ಯ ಕಾರ್ಯದರ್ಶಿ ಇಂಡ್ಲವಾಡಿ ಬಸರಾಜ್ ತಿಳಿಸಿದರು .

ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಬುಧವಾರ  ಪ್ರಜಾ ವಿಮೋಚನಾ ಚಳವಳಿ (ಸಮತಾವಾದ)ಯ ನೂತನ ತಾಲ್ಲೂಕು ಘಟಕ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದ ಅವರು, ‘ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡು ದಶಕ ಕಳೆದರೂ ತಾಲ್ಲೂಕಿನಲ್ಲಿ ರೈತರ ಸಂತೆ ಆರಂಭಗೊಳ್ಳದಿರುವುದು ದುರದೃಷ್ಟಕರ, ಆಯ್ಕೆಗೊಂಡ ಜನ ಪ್ರತಿನಿಧಿಗಳು ಜವಾಬ್ದಾರಿವಹಿಸದೆ ಇರುವುದರಿಂದ ರೈತರ ಉತ್ಪಾದಿಸುವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಮಧ್ಯವರ್ತಿಗಳು ರೈತರನ್ನು ಶೋಷಿಸುತ್ತಿದ್ದಾರೆ’ ಎಂದು ದೂರಲಾಗಿದೆ.

ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರದ ಕೊರತೆ ಇದೆ, ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಬಸ್‌ಗಳ ಸಂಚಾರ ಅವಶ್ಯಕತೆ ಇದೆ. ಕಳೆದ ಐದಾರು ವರ್ಷಗಳಿಂದ ಬಿಎಂಟಿಸಿ ಘಟಕ ಕಾಮಗಾರಿ ವಿಳಂಬವಾಗುತ್ತಿದೆ. ಸ್ಥಳೀಯ ಸಮಸ್ಯೆಗಳನ್ನಿಟ್ಟು ಹೋರಾಟ ನಡೆಸಬೇಕು ಎಂದು ಹೇಳಿದರು.

ರಾಜ್ಯ ಘಟಕದ ಅಧ್ಯಕ್ಷ ಕೆ.ಎಲ್.ಶಂಕರ್ ಮಾತನಾಡಿ, ರಾಜ್ಯ ಮಟ್ಟದ ಸಮಸ್ಯೆಗಿಂತ ಗ್ರಾಮ ಪಂಚಾಯಿತಿ ಮಟ್ಟದ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಬೇಕು ಸಮತಾವಾದ ಅಡಿಯಲ್ಲಿ ಎಲ್ಲಾ ವರ್ಗದವರು ಸಂಘಟನೆಯಲ್ಲಿ ಪದಾಧಿಕಾರಿಗಳಾಗಿದ್ದಾರೆ ಸಂಘಟನೆಯಲ್ಲಿ ಒಗ್ಗಟ್ಟು ಮುಖ್ಯ ಎಂದು ಅವರು ಹೇಳಿದರು.

ಪಿ.ವಿ.ಸಿ (ಸಮತಾವಾದ) ರಾಜ್ಯ ಉಪಾಧ್ಯಕ್ಷ ಜಾಲ ಕಿಟ್ಟಿ, ಕಾರ್ಯದರ್ಶಿ ಭವಾನಿ ಪ್ರಸಾದ್, ಸಂಘಟನಾ ಕಾರ್ಯದರ್ಶಿ ಅಗರ ಪಿಳ್ಳರಾಜು ಬೊಸಪ್ಪ , ಜಿಲ್ಲಾ ಅಧ್ಯಕ್ಷ ಅದೂರು ಕೆ.ದೇವರಾಜ್, ವಿಭಾಗೀಯ ಅಧ್ಯಕ್ಷ ಚಿಕ್ಕ ನರಸಪ್ಪ, ಪ್ರಧಾನ ಕಾರ್ಯದರ್ಶಿ ಹುಣಸೂರು ಮುತ್ತುರಾಜ್ ಉಪಸ್ಥಿತರಿದ್ದರು .

ತಾಲ್ಲೂಕು ಘಟಕ ಪದಾಧಿಕಾರಿಗಳು
ಡಿ.ಎಂ ಆಂಜಿನಪ್ಪ ಗೌರವಾಧ್ಯಕ್ಷ, ಆರ್.ಮುನಿವೆಂಕಟಪ್ಪ ಅಧ್ಯಕ್ಷ, ನಾಗರಾಜ್ ಉಪಾಧ್ಯಕ್ಷ, ಮಹೇಶ್ ಪ್ರಧಾನ ಕಾರ್ಯದರ್ಶಿ, ಕೆ.ರಾಜಣ್ಣ ಕಾರ್ಯದರ್ಶಿ, ಚಿಕ್ಕ ಆಂಜಿನಪ್ಪ ಜಂಟಿ ಕಾರ್ಯದರ್ಶಿ,  ನಾಗವೇಣಿ ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ,ಕೆ.ನಾಗರಾಜ್ ಟಾನ್ ಘಟಕ ಅಧ್ಯಕ್ಷ, ಎಂ.ಮಂಜುನಾಥ್ ಟಾನ್ ಘಟಕ ಉಪಾಧ್ಯಕ್ಷ, ಕಾವೇರಮ್ಮ ಬೆಂಗಳೂರು ನಗರ ಸಮಿತಿ ಪ್ರಧಾನ ಕಾರ್ಯದರ್ಶಿ, ನಾಗರಾಜ್ ಕಾರ್ಯದರ್ಶಿ, ಕೆ.ಮಾದೇಶ್ ಚನ್ನರಾಯಪಟ್ಟಣ ಹೋಬಳಿ ಘಟಕ ಅಧ್ಯಕ್ಷ,  ಮುರುಗೇಶ್ ಉಪಾಧ್ಯಕ್ಷರಾಗಿ  ನೂತನವಾಗಿ ನೇಮಕ ಗೊಂಡವರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT