ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರೋಜಿನಿ ಮಹಿಷಿ ವರದಿ ಪರಿಷ್ಕೃತ ಪ್ರತಿ ಸಲ್ಲಿಕೆ!

ಕಸಾಪ ವಿಳಂಬ ಧೋರಣೆ: ಸಿದ್ದರಾಮಯ್ಯ ಬೇಸರ
Last Updated 25 ಮೇ 2017, 9:57 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಸಂಬಂಧಿಸಿ ದಂತೆ ಸರೋಜಿನಿ ಮಹಿಷಿ ನೀಡಿದ ವರದಿ ಶಿಫಾರಸುಗಳ ಅನುಷ್ಠಾನದ ಹಿನ್ನಡೆಗೆ ಕನ್ನಡ ಸಾಹಿತ್ಯ ಪರಿಷತ್‌ನ ನಿರ್ಲಕ್ಷವೇ ಕಾರಣ’ ಎಂದು ಕನ್ನಡ ಅಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಬುಧವಾರ ಸಾಹಿತಿಗಳು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರೋಜಿನಿ ಮಹಿಷಿ ಅವರು ನೀಡಿದ್ದ ಯಥಾವತ್‌ ವರದಿ ಜಾರಿಗೊಳಿ ಸಲು ಈಗ ಆಗುವುದಿಲ್ಲ. 30 ವರ್ಷಗಳ ಹಿಂದೆ ವರದಿ ಸಲ್ಲಿಕೆಯಾದ ಸಂದ ರ್ಭಕ್ಕೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಪ್ರಾಧಿಕಾರ ಆ ವರದಿ ಪರಿಷ್ಕೃರಿಸಿದೆ. ಅದರ ಪ್ರತಿ ಯನ್ನು ಆಯಾ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಗೆ ಕಳುಹಿಸಿದ್ದೇವೆ.

ಸ್ಥಳೀಯ ತಂತ್ರಜ್ಞರು ಹಾಗೂ ಕನ್ನಡಪರ ಹೋರಾಟಗಾರರನ್ನು ಕರೆಸಿ ಸಮಾ ಲೋಚನೆ ನಡೆಸಿ ವರದಿಯ ಸಾಧಕ–ಬಾಧಕದ ಬಗ್ಗೆ ಚರ್ಚಿಸಿ ವರದಿ ಕೊಡಲು ಮೂರು ತಿಂಗಳ ಹಿಂದೆಯೇ ಸೂಚಿಲಾ ಗಿತ್ತು. ಇದುವರೆಗೂ ವರದಿ ಕೊಟ್ಟಿಲ್ಲ. ಇದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಾಧಿಕಾರದಿಂದ ಕನ್ನಡ ಹೋರಾಟ ಗಾರರನ್ನು ಸಂಪರ್ಕಿಸುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಸಭೆಗೆ ಆಹ್ವಾನ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಿಗೆ ನಾವು ಮೊದಲೇ ತಿಳಿಸಿರುತ್ತೇವೆ’ ಎಂದರು.

ಸಾಹಿತಿ ಲಕ್ಷ್ಮಣ ಬದಾಮಿ ಮಾತ ನಾಡಿ, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಚಟುವಟಿಕೆಗಳು ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದಲ್ಲಿ ವಿಸ್ತರಣೆಗಳ್ಳಬೇಕು ಎಂದು ಒತ್ತಾಯಿಸಿದರು.

ಸಾಹಿತಿ ಜಿ.ಕೆ.ತಳವಾರ ಮಾತನಾಡಿ, ‘ಕೇಂದ್ರದ ಪಠ್ಯಕ್ರಮ ಮತ್ತು ರಾಜ್ಯದ ಪಠ್ಯಕ್ರಮ ಬೇರೆ ಬೇರೆಯಾಗಿರುವ ಬದಲೂ ಏಕರೂಪದ ಪಠ್ಯ ಇರಬೇಕು. ಇದರಿಂದ ಮಕ್ಕಳಲ್ಲಿ ತಾರತಮ್ಯ ನಿವಾರಣೆಯಾಗುತ್ತದೆ ಎಂದರು.

ಸಾಹಿತಿ ಅಬ್ಬಾಸ್ ಮೇಲಿನಮನಿ ಮಾತನಾಡಿ, ‘ಸರ್ಕಾರಿ ಕಚೇರಿಗಳಲ್ಲಿ ಸರಿಯಾಗಿ ಕನ್ನಡ ಬರೆಯಲು ಬಾರದ ವರು ಇದ್ದಾರೆ. ಪ್ರಮಾಣ ಪತ್ರ ತೆಗೆದು ಕೊಳ್ಳುವಾಗ ಒಂದು ಅಕ್ಷರ ತಪ್ಪಿದರೆ ನಾವು ಮತ್ತೆ ನ್ಯಾಯಾಲಯಕ್ಕೆ ಹೋಗಿ ತಿದ್ದುಪಡಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಹೆಚ್ಚು ತೊಂದರೆಯಾಗುತ್ತಿದೆ.

ಮೊದಲು ಅವರಿಗೆ ತಪ್ಪಿಲ್ಲದೇ ಕನ್ನಡ ಬರೆಯುವುದನ್ನು ಕಲಿಸಬೇಕಿದೆ’ ಎಂದರು. ಕಾರ್ಯದರ್ಶಿ ಮುರಳೀಧರ. ಜಿಲ್ಲಾ ಸದಸ್ಯ ಮಹದೇವ ಹಟ್ಟಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಇದ್ದರು.

‘ದುಸ್ಥಿತಿಗೆ ಅಧಿಕಾರಿಗಳೇ ಹೊಣೆ’
‘ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಲು ಸಾರ್ವಜನಿಕ ಶಿಕ್ಷಣ ಇಲಾ ಖೆಯ ಕ್ಷೇತ್ರಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓ ನೇರ ಕಾರಣ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆರೋಪಿ ಸಿದರು.

ನಗರದಲ್ಲಿ ಬುಧವಾರ ಅಧಿಕಾರಿ ಗಳ ಸಭೆ ನಡೆಸಿದ ಅವರು, ‘ಶೈಕ್ಷಣಿಕ ಮಟ್ಟದಲ್ಲಿ ಕನ್ನಡ ಉಳಿಯಲು ಸಾಧ್ಯ ವಾಗದಿದ್ದರೆ ಆಡಳಿತ ಮಟ್ಟದಲ್ಲಿ ಸೇರಿ ದಂತೆ ಎಲ್ಲಿಯೂ ಕನ್ನಡದ ಉಳಿವು ಸಾಧ್ಯವಿಲ್ಲ. ಆದರೆ ಅಧಿಕಾರಿಗಳ ಖಾಸಗಿ ಶಾಲೆಗಳ ಪ್ರೇಮ ಕನ್ನಡ ಶಾಲೆಗಳ ಇಂದಿನ ದುಸ್ಥಿತಿಗೆ ಕಾರಣ ವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಮೂಲ ಸೌಕರ್ಯ ಇಲ್ಲದಿದ್ದರೂ ಸಿಕ್ಕಾ ಪಟ್ಟೆ ಖಾಸಗಿ ಶಾಲೆಗಳನ್ನು ಬೇಕಾಬಿಟ್ಟಿಯಾಗಿ ತೆರೆಯಲು ಅನುಮತಿ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸೌಕರ್ಯ ಇದ್ದರೂ ಮುಚ್ಚುತ್ತಿವೆ‘ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಇರು ವಂತೆ ರಾಜ್ಯದ ಎಷ್ಟು ಖಾಸಗಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರು ಇದ್ದಾರೆ ಎಂದು ಪ್ರಶ್ನಿಸಿದರು. ಶಿಕ್ಷಣ ಇಲಾಖೆಯ ಇಂದಿನ ಅಧೋಗತಿಗೆ ಅಧಿಕಾರಿಗಳ ವೈಫಲ್ಯವೇ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT