ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಂಚೆಸ್ಟರ್‌ ದಾಳಿ ಬ್ರಿಟನ್‌ನಲ್ಲಿ ಆಕ್ರೋಶ

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಮ್ಯಾಂಚೆಸ್ಟರ್‌  ಬಾಂಬ್‌ ದಾಳಿ ಪ್ರಕರಣದ ಬಳಿಕ, ಇಂಗ್ಲೆಂಡ್‌ನಲ್ಲಿ  ಹಲವೆಡೆ ಮುಸ್ಲಿಂ ಸಮುದಾಯದವರನ್ನು ನಿಂದಿಸಿದ ಘಟನೆಗಳು ವರದಿಯಾಗಿವೆ.

ಮಹಿಳೆಯೊಬ್ಬರ ಮೇಲೆ ಉಗುಳಲಾಗಿದ್ದು, ದಾರಿಯಲ್ಲಿ ತೆರಳುತ್ತಿದ್ದ ಯುವತಿಯನ್ನು ಉದ್ದೇಶಿಸಿ ‘ಬಾಂಬ್‌ ದಾಳಿಯನ್ನು ಯಾವಾಗ ನಿಲ್ಲಿಸುತ್ತೀರ’ ಎಂದು ಕೆಲವರು ಕೂಗಾಡಿದ್ದಾರೆ. ಮ್ಯಾಂಚೆಸ್ಟರ್‌ನ ಬಾಲಕಿಯರ ಪ್ರೌಢಶಾಲೆಗೆ ತೆರಳುತ್ತಿದ್ದ  14 ವರ್ಷದ ವಿದ್ಯಾರ್ಥಿನಿಯನ್ನು ನಿಂದಿಸಲಾಗಿದೆ.

ಈ ಶಾಲೆಯ ಮುಖ್ಯ ಶಿಕ್ಷಕಿ ಮೊನಾ ಮೊಹಮ್ಮದ್ ಅವರು ರೇಡಿಯೊ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಇಂತಹ ನಡವಳಿಕೆಯಿಂದ ವಿದ್ಯಾರ್ಥಿನಿಯ  ಮನಸ್ಸಿಗೆ ಅತೀವ ನೋವಾಗಿದೆ ಎಂದು ಹೇಳಿದ್ದಾರೆ.

‘ನಮ್ಮ ಪ್ರಕಾರ ಇಸ್ಲಾಂ ಶಾಂತಿ ಸಾರುತ್ತದೆ. ಯಾರೋ ಕೆಲವರು ತಾವು  ಮುಸ್ಲಿಮರೆಂದು ಹೇಳಿಕೊಂಡು ಅಂತಹ ಕೃತ್ಯಗಳನ್ನು ಎಸಗಿದರೆ ಅವರು ನಮಗೆ ಸೇರಿದವರಲ್ಲ. ಅವರ ಪರವಾಗಿ ಕ್ಷಮೆ ಯಾಚಿಸುವ ಅಗತ್ಯ ನಮಗಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT