ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಭರಣ ವಿನ್ಯಾಸ ಮಾಡಿದ ಎಳೆಯರು

Last Updated 27 ಮೇ 2017, 6:07 IST
ಅಕ್ಷರ ಗಾತ್ರ

ಯಳಂದೂರು: ಚಿಣ್ಣರ ಕರದಲ್ಲಿ ಅರಳಿದ ಕಲರ್‌ ಡೈಮಂಡ್, ಬಾಹುಬಲಿ ಕಿವಿಯೋಲೆ, ಕಣ್ಮನ ಸೆಳೆಯುವ ಉಂಗುರ, ಮಿಂಚುವ ನೆಕ್ಲೇಸ್‌, ಬಳೆಗೆ ವರ್ಣರಂಜಿತ ಚಿತ್ತಾರ, ಬಣ್ಣದ ದಾರದ ಅಲಂಕಾರ... ಬ್ರ್ಯಾಂಡ್‌ ಇಲ್ಲದ ಕಪ್ಲಿಂಗ್‌, ಕಾಕ್‌ಟೇಲ್‌ರಿಂಗ್‌, ಸ್ಟಡ್‌... ಇವು ಬೇಸಿಗೆ ಸಂಭ್ರಮದ ಅಂಗವಾಗಿ ತಾಲ್ಲೂ ಕಿನ ಎಳೆಯರು ಸರ್ಕಾರಿ ಶಾಲೆಗಳಲ್ಲಿ ರಚಿಸಿದ ಆಭರಣಗಳ ಸ್ಯಾಂಪಲ್‌ಗಳು.

ಹೌದು... ತಾಲ್ಲೂಕಿನ ಯರಿಯೂರು ಮತ್ತು ಮದ್ದೂರು ಶಾಲೆಗಳಲ್ಲಿ ಮಕ್ಕಳ ಕೈಯಲ್ಲಿ ಅರಳಿದ ನೂರಾರು ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ನಿರುಪಯುಕ್ತ ಪ್ಲಾಸ್ಟಿಕ್‌ ಬಳೆ, ಗಾಜಿನ ಚೂರು, ಎಲ್ಲೆಡೆ ಮಿಣಮಿಣ ಮಿಂಚುವ ನಿಕ್ಕೀಸ್‌ ಬಳಸಿ ರಚಿಸಲಾಗಿತ್ತು. ಶಿಕ್ಷಕಿ ಯರ ಮೇಲ್ವಿಚಾರಣೆಯಲ್ಲಿ ವೈವಿಧ್ಯ ಮಯ ವಿನ್ಯಾಸದ ಸರ, ಕಾಲುಂಗುರ, ಕಾಲು ಚೈನ್‌ ರಚಿಸಿ ಗ್ರಾಮಗಳ ಜನರ ಮುಂದೆ ಪ್ರದರ್ಶಿಸಿ ಸಂಭ್ರಮಿಸಿದರು.

ಸರ್ಕಾರಿ ಶಾಲಾ ಚಿಣ್ಣರಿಗೆ ಬೇಸಿಗೆ ಶಿಬಿರವನ್ನು ಮೊದಲ ಬಾರಿಗೆ ಆಯೋಜಿಸಲಾಗಿತ್ತು. ಪಾಠಕ್ಕೆ ಹೊರತಾದ ಆದರೆ, ಮಕ್ಕಳ ಸೃಜನಶೀಲ ಅಭಿವ್ಯಕ್ತಿಗೆ ಕಾರಣವಾಗುವ ಕಲೆಗಳ ಅನಾವರಣಕ್ಕೂ ಶಿಬಿರ ಬಳಕೆಯಾಯಿತು.

ಸೀರೆಗೆ ಮ್ಯಾಚಿಂಗ್ ಮಾಡುವ ಬಗೆ, ರೂಬಿ, ಹವಳ, ವಜ್ರಗಳ ವಿನ್ಯಾಸದಂತೆ ಆಕರ್ಷಕ ನೋಟ ಬೀರುವ ಜರತಾರಿ ಸೀರೆ,  ಫ್ಯಾಷನ್‌ ಪ್ರಿಯರು ಹೇಗೆ ಅವು ಗಳನ್ನು ಪ್ರಚಾರಕ್ಕೆ ಬಳಸುತ್ತಾರೆ. ಅಪ್ಪಟ ಚಿನ್ನದಂತೆ ತೋರುವ ಕೃತಕ ಆಭರಣ ಗಳ ರಚನೆ ಮೊದಲಾದ ವಿಷಯಗಳನ್ನು ತಯಾರಿಸುವ ತರಬೇತಿಯನ್ನು ಹೆಣ್ಣು ಮಕ್ಕಳಿಗೆ ನೀಡಲಾಯಿತು ಎಂದು ಯರಿ ಯೂರು ಶಿಕ್ಷಕಿ ನಾಗಶಿಲ್ಪ ತಿಳಿಸಿದರು.

ಗಂಡುಮಕ್ಕಳು ಮಡಕೆ ಮೇಲೆ ಚಿತ್ತಾರ ಹಾಕಿ ಮಿಂಚು ಉದುರಿಸು ವುದು. ಚಿತ್ರ ರಚನೆಯಲ್ಲಿ ಬಣ್ಣಗಳ ಸಂಯೋಜನೆ, ಬಿಳಿ ಕಾಗದ ಬಳಸಿ ಪರಿಸರ ಸ್ನೇಹಿ ಚಿತ್ರ ರಚನೆ, ಬಟ್ಟೆಬ್ಯಾಗ್‌ ಹಾಗೂ ಪೇಪರ್‌ ಕವರ್ ರಚನೆ. ಕವರ್‌ಗಳ ತಯಾರಿ ಮೊದಲಾದ ಆಲಂಕಾರಿಕ ವಸ್ತುಗಳ ರಚನೆ ಬಗ್ಗೆ ಕಲಿತುಕೊಂಡಿದ್ದೇವೆ ಎಂದು ಗೌಡಹಳ್ಳಿ ಮತ್ತು ಗುಂಬಳ್ಳಿ ಶಾಲಾ ಮಕ್ಕಳಾದ ಮನು ಮತ್ತು ಪಲ್ಲವಿ ಖುಷಿಪಟ್ಟರು.

ಹೊಸ ಚಲನಚಿತ್ರ ಯಶಸ್ವಿಯಾದರೆ, ಅದರಲ್ಲಿ ಬಳಕೆ ಆಗುವ ವಸ್ತ್ರ, ಆಲಂಕಾರಿಕಾ ಸಾಧನ ಹಾಗೂ ನವೀನ ಶೈಲಿಯೊಂದನ್ನು ಇಂದಿನ ಮಕ್ಕಳು ಮತ್ತು ಮಹಿಳೆಯರು ಇಷ್ಟಪಡುತ್ತಾರೆ. ಬೀದಿ ಬದಿಯಲ್ಲಿ ಇಂಥ ಹತ್ತಾರು ವಿನ್ಯಾಸ ಬರುತ್ತದೆ. ಅವುಗಳನ್ನು ಮಕ್ಕಳೂ ವಿನ್ಯಾಸ ಮಾಡಬಹುದು. ಮುಂದೆ ಮಕ್ಕಳೇ ಇದೇ ವಿಷಯದಲ್ಲಿ ಪದವಿ ಅಥವಾ ಉದ್ಯೋಗ ಗಿಟ್ಟಿಸುವಲ್ಲಿ ಪ್ರೇರಣೆ ಆಗಲು ಸಾಧ್ಯ ಎಂದು ಬಿಇಒ ಮಲ್ಲಿಕಾರ್ಜುನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT